ಕನ್ನಡತಿ ಸೀರಿಯಲ್ ಖ್ಯಾತಿಯ ನಟಿ ರಮೋಲಾ ನೋಡಿ ನೆಟ್ಟಿಗರು ಕಣ್ಣರಳಿಸಿದ್ದು ಏಕೆ ಸಾಮಾಜಿಕ ಜಾಲತಾಣದಲ್ಲಿ ಎಲ್ಲಡೆ ಈ ವಿಡಿಯೋ ವೈರಲ್

By Infoflick Correspondent

Updated:Saturday, August 13, 2022, 14:20[IST]

ಕನ್ನಡತಿ ಸೀರಿಯಲ್ ಖ್ಯಾತಿಯ ನಟಿ ರಮೋಲಾ ನೋಡಿ  ನೆಟ್ಟಿಗರು ಕಣ್ಣರಳಿಸಿದ್ದು ಏಕೆ ಸಾಮಾಜಿಕ ಜಾಲತಾಣದಲ್ಲಿ ಎಲ್ಲಡೆ ಈ ವಿಡಿಯೋ ವೈರಲ್

ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿಗಳ ಪೈಕಿ 'ಕನ್ನಡತಿ' ಕೂಡ ಒಂದು. 'ಕನ್ನಡತಿ' ಧಾರಾವಾಹಿಯಲ್ಲಿ ಸದಾ ಆಸ್ತಿ ಬಗ್ಗೆ ಜಪ ಮಾಡುತ್ತಾ ಆಗಾಗ ಕಿರಿಕ್ ಮಾಡಿಕೊಳ್ಳುವ ಸಾನಿಯಾ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸುತ್ತಿರುವವರು ನಟಿ ರಮೋಲಾ ಬಹಳ ಪ್ರಖ್ಯಾತಿ. ಕನ್ನಡತಿ ಧಾರಾವಾಹಿಯಲ್ಲಿ ಬರುವ ಸಾನಿಯಾ ಪಾತ್ರಧಾರಿ ರಮೋಲಾ ಕೂಡ ಯಾವ ಹಿರೋಯಿನ್‌ಗೂ ಕಡಿಮೆ ಇಲ್ಲ. ಕನ್ನಡತಿಗೆ ಇರುವಷ್ಟೇ ಫ್ಯಾನ್‌ ಫಾಲೋವರ್ಸ್ ರಮೋಲಾಗೂ ಇದ್ದಾರೆ. ಇಂಥ ರಮೋಲಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಕೆಲವು ರೀಲ್ಸ್‌ಗಳನ್ನ ಹಾಕ್ತಾ ಇರ್ತಾರೆ. ಅವುಗಳಲ್ಲಿ ಹೆಚ್ಚು ವೀಕ್ಷಿಸಲ್ಪಟ್ಟ ವೀಡಿಯೋ ಅಂದ್ರೆ ಬೆಲ್ಲಿ ಡಾನ್ಸ್ ವೀಡಿಯೋ.

ಬಳುಕೋ ಬಳ್ಳಿಯಂತೆ ಬೆಲ್ಲಿ ಕುಣಿಸೋ ರಮೋಲಾ, ತಮ್ಮ ಬೆಲ್ಲಿ ಡ್ಯಾನ್ಸ್‌ನಿಂದಲೇ ಪಡ್ಡೆ ಹುಡುಗರ ಹೃದಯ ಕದ್ದಿದ್ದಾರೆ. ತಮ್ಮ ಡಾನ್ಸಿಗೆ ತಾವೇ ಕೋರಿಯೋಗ್ರಫಿ ಮಾಡುವ ರಮೋಲಾ, ಅಚ್ಚುಕಟ್ಟಾಗಿ ಸ್ಟೆಪ್ ಹಾಕ್ತಾರೆ. ಅವರು ಮಾಡಿದ ಬೆಲ್ಲಿ ಡಾನ್ಸ್‌ ತುಣುಕು ಸಿಕ್ಕಾಪಟ್ಟೆ ಫೇಮಸ್ ಆಗಿದೆ.ಆಕರ್ಷಕ ಮೈ ಕಟ್ಟು ಹೊಂದಿರುವ ರಮೋಲಾ, ಬೆಲ್ಲಿ ಜೊತೆ ಬೇರೆ ಬೇರೆ ಹಾಡಿಗೆ ರೀಲ್ಸ್ ಮಾಡಿದ್ದಾರೆ. ಡಾನ್ಸ್, ಆ್ಯಕ್ಟಿಂಗ್ ಜೊತೆಗೆ ಫ್ಯಾಷನ್ ಬಗ್ಗೆ ಹೆಚ್ಚು ಒಲವು ಹೊಂದಿರುವ ರಮೋಲಾ ಚೆಂದ ಚೆಂದದ ಫೋಟೋ ಶೂಟ್ ಕೂಡ ಮಾಡಿಸಿದ್ದಾರೆ.    

ರೆಸಿಡೆನ್ಷಿಯಲ್ ಸ್ಕೂಲ್‌ನಲ್ಲಿ ವಿದ್ಯಾಭ್ಯಾಸ ಮಾಡಿರುವ ರಮೋಲಾ ತಂದೆ-ತಾಯಿ ಜೊತೆಗೆ ಕಾಲ ಕಳೆದಿದ್ದು ಕಡಿಮೆ. ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳದ ರಮೋಲಾ ಅವರದ್ದು ಕೇರ್‌ ಫ್ರೀ ಆಟಿಟ್ಯೂಡ್. ಹೆಚ್ಚು ಯೋಚನೆ ಮಾಡಿ ತಲೆಗೆ ಹುಳ ಬಿಟ್ಟುಕೊಳ್ಳುವ ಕ್ಯಾಟಗರಿಗಂತೂ ರಮೋಲಾ ಸೇರುವುದಿಲ್ಲ.