Rashmika Mandanna : ತೆಲುಗಿನ ಈ ನಟ ನನ್ನ ನಿಜವಾದ ಕ್ರಶ್ ಎಂದ ರಶ್ಮಿಕಾ..! ಈತನೊಟ್ಟಿಗೆ ಡೇಟಿಂಗ್ ಆಸೆಯಂತೆ ನೋಡಿ

By Infoflick Correspondent

Updated:Saturday, May 28, 2022, 08:35[IST]

Rashmika Mandanna :  ತೆಲುಗಿನ ಈ ನಟ ನನ್ನ ನಿಜವಾದ ಕ್ರಶ್ ಎಂದ ರಶ್ಮಿಕಾ..! ಈತನೊಟ್ಟಿಗೆ ಡೇಟಿಂಗ್ ಆಸೆಯಂತೆ ನೋಡಿ

ಕನ್ನಡ ಚಿತ್ರರಂಗದ ಖ್ಯಾತ ನಟಿ ರಶ್ಮಿಕಾ ಮಂದಣ್ಣ ಅವರು ಆರಂಭದದಿನಗಳಲ್ಲಿ ನಟ ರಕ್ಷಿತ್ ಶೆಟ್ಟಿ ಅವರ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಸಾನ್ವಿ ಪಾತ್ರದಲ್ಲಿ ಕಾಣಿಸಿಕೊಂಡು ಕನ್ನಡಿಗರ ಮನಗೆದ್ದಿದ್ದರು. ತದನಂತರ ತೆಲುಗು, ತಮಿಳು, ಬಾಲಿವುಡ್ ಕಡೆ ಕೂಡ ರಶ್ಮಿಕ ಮುಖಮಾಡಿದರು. ಇದೀಗ ನ್ಯಾಷನಲ್ ಕೃಷ್ ಆಗಿ ರಶ್ಮಿಕಾ ಹೊರಹೊಮ್ಮಿದ್ದಾರೆ. ಹೌದು ಎಲ್ಲರಿಗೂ ಗೊತ್ತಿರುವಂತೆ ಆರಂಭದಲ್ಲಿ ನಟ ರಕ್ಷಿತ್ ಶೆಟ್ಟಿ ಅವರ ಜೊತೆ ಪ್ರೀತಿಯಲ್ಲಿ ಬಿದ್ದಿದ್ದು, ನಂತರ ಎಂಗೇಜ್ಮೆಂಟ್ ಸಹ ಆಗಿತ್ತು. ಆದರೆ ನಂತರದ ದಿನಗಳಲ್ಲಿ ಇವರಿಬ್ಬರ ಮದುವೆ ವಿಚಾರ ಮುರಿದು ಬಿದ್ದಿದ್ದು, ಅಕ್ಷರಸಹ ಎಲ್ಲರನ್ನೂ ಬೆರಗಾಗುವಂತೆ ಮಾಡಿತ್ತು. ಇದಕ್ಕೆ ಕಾರಣ ನಟ ವಿಜಯ್ ದೇವರಕೊಂಡ ಅವರ ಸಿನಿಮಾದಲ್ಲಿ ಲಿಪ್ಲಾಕ್ ಮಾಡಿದ ಕುರಿತು ಎಂದು ನೆಟ್ಟಿಗರು ಅಂದು ಮಾತನಾಡಿಕೊಂಡರು. 

ಹೌದು ರಶ್ಮಿಕ ಮಂದಣ್ಣ ಒಂದರಮೇಲೊಂದರಂತೆ ಸಿನಿಮಾ ಹಿಟ್ ನೀಡುತ್ತಿದ್ದಾರೆ. ಬೇರೆಬೇರೆಯ ಚಿತ್ರರಂಗದಲ್ಲಿ ಹೆಚ್ಚು ಗುರುತಿಸಿಕೊಳ್ಳುತ್ತಿದ್ದಾರೆ. ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಸಿನಿಮಾದಲ್ಲಿಯೂ ಮಗಳ ಪಾತ್ರದಲ್ಲಿ ನಟಿ ರಶ್ಮಿಕಾ ಮಿಂಚುತ್ತಿದ್ದಾರೆ. ಹೀಗೆ ಸಿನಿಮಾ ವಿಚಾರವಾಗಿ ನಟಿ ರಶ್ಮಿಕಾ ಮಂದಣ್ಣ ಹೆಚ್ಚು ಚರ್ಚೆಗೆ ಒಳಗಾಗುತ್ತಾರೆ. ಇದನ್ನು ಬಿಟ್ಟರೆ ಹೆಚ್ಚು ಟ್ರೋಲ್ ಅಗುವುದು, ಅವರು ಕೊಡುವ ಹೇಳಿಕೆ ಮುಕಾಂತರ. ಜೊತೆಗೆ ಅಷ್ಟೇ ಟ್ರೋಲ್ ಕೂಡ ಆಗುತ್ತಾರೆ. ಮೊನ್ನೆ ತಮಿಳುನಾಡಿನ ಸೊಸೆ ಆಗಬೇಕು, ತಮಿಳುನಾಡಿನ ಊಟ ಅಂದ್ರೆ ಇಷ್ಟ, ನಟ ವಿಜಯ್ ಅವರು ನನ್ನ ಕ್ರಶ್ ಎಂದು ಸುದ್ದಿಯಾಗಿದ್ದರು. ಅಷ್ಟೇ ಟ್ರೋಲ್ ಸಹ ಆಗಿ ನಂತರ ನಟ ವಿಜಯ್ ಅವರ ಜೊತೆ ಸಿನಿಮಾ ಅವಕಾಶ ಗಿಟ್ಟಿಸಿಕೊಂಡರು ಎಂದು ಕೇಳಿಬಂದಿದೆ.

ಅದೇರೀತಿ ಇದೀಗ ಟಾಲಿವುಡ್ ನ ಖ್ಯಾತ ನಟ ನನ್ನ ಕ್ರಶ್ ಎಂದಿದ್ದಾರಂತೆ ರಶ್ಮಿಕ. ಜೊತೆಗೆ ಅವರ ಜೊತೆ ಡೇಟಿಂಗ್ ಹೋಗಬೇಕು ಎಂದಿದ್ದಾರೆ ಎಂದು ಕೇಳಿಬರುತ್ತಿದೆ. ಅಸಲಿಗೆ ಆ ನಟ ಯಾರು ಗೊತ್ತಾ..? ರೆಬೆಲ್ ಸ್ಟಾರ್ ಪ್ರಭಾಸ್ ಎಂದು ಹೇಳಲಾಗುತ್ತಿದೆ. ಹೌದು ನಟ ಪ್ರಭಾಸ್ ಜೊತೆ ಡೇಟಿಂಗ್ ಹೋಗಬೇಕು ಎಂದಿರುವ ನಟಿ ರಶ್ಮಿಕ ಅವರು ಸಿನಿಮಾ ಅವಕಾಶ ಬೇಕಾದರೆ ಡೈರೆಕ್ಟಾಗಿ ಅವರನ್ನೇ ಕೇಳಬಹುದು. ಈ ರೀತಿ ಏನೋ ಒಂದು ಹೇಳಿಕೆ ಕೊಟ್ಟು ಅವಕಾಶವನ್ನು ಗಿಟ್ಟಿಸಿಕೊಳ್ಳುವುದು ಸರಿ ಕಾಣುವುದಿಲ್ಲ ಎನ್ನುತ್ತಿದ್ದಾರೆ ನೆಟ್ಟಿಗರು. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.ಮತ್ತು ನಮ್ಮ ಪೇಜ್ ಲೈಕ್ ಮಾಡಿ  ಹಾಗು  ತಪ್ಪದೆ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು...