Ramya : ಮತ್ತೆ ಚಿತ್ರರಂಗಕ್ಕೆ ರಮ್ಯಾ..! ಯಾವ ಚಿತ್ರ ನೋಡಿ..!

By Infoflick Correspondent

Updated:Saturday, August 27, 2022, 14:01[IST]

Ramya : ಮತ್ತೆ ಚಿತ್ರರಂಗಕ್ಕೆ ರಮ್ಯಾ..! ಯಾವ ಚಿತ್ರ ನೋಡಿ..!

ಸ್ಯಾಂಡಲ್ ವುಡ್ ನಲ್ಲಿ ನಟಿ ರಮ್ಯಾ ಅವರು ಇದೀಗ ಮತ್ತೆ ಚಿತ್ರರಂಗಕ್ಕೆ ಮರಳಿ ಬರುವ ಸೂಚನೆ ನೀಡಿದ್ದು, ಇದೀಗ ಈ ವಿಷಯ ಹೆಚ್ಚು ಚರ್ಚೆ ಆಗುತ್ತಿದೆ. ಹೌದು, ಕೇಳಿ ಬಂದಿರುವ ಮಾಹಿತಿ ಪ್ರಕಾರ ನಟಿ ರಮ್ಯಾ ಅವರು ಮತ್ತೆ ರಾಜಕೀಯ ಕಡೆ ಹೋಗುವ ಚಾನ್ಸಸ್ ತುಂಬಾ ಕಡಿಮೆ ಇದೆಯಂತೆ. ಅಲ್ಲಿ ಅವಕಾಶಗಳು ಕಡಿಮೆ ಆಗಿದ್ದಾವೋ ಅಥವಾ ಇವರೇ ಅಲ್ಲಿ ಬೇಡವೆಂದು ನಿರ್ಧಾರ ಮಾಡಿ ರಾಜಕೀಯದ ಕಡೆ ಹೋಗುತ್ತಿಲ್ಲವೊ ಗೊತ್ತಿಲ್ಲ, ಆದ್ರೆ ನಟಿ ರಮ್ಯಾ ಅವರು ಪೊಲಿಟಿಕ್ಸ್ ಕಡೆ ಹೆಚ್ಚು ಗಮನಹರಿಸಿರುವುದಂತೂ ಕಡಿಮೆ ಎಂದು ಹೇಳಬಹುದು. ಕೇವಲ ಟ್ವಿಟರ್ ಮೂಲಕ ಇರುವ ವಿಷಯವನ್ನು ರಾಜಕೀಯವಾಗಿ ಮಾತನಾಡುತ್ತಾರೆ. ಆದ್ರೆ ಆ ಕಡೆ ರಮ್ಯಾ ಅವರು ಹೆಚ್ಚು ಒಲವು ತೋರುತ್ತಿರುವುದು ಕಡಿಮೆ ಆಗಿದ್ದು ಇದೀಗ ಮತ್ತೆ ಚಿತ್ರರಂಗದ ಕಡೆ ಮರಳಿ ಬರುತ್ತಿದ್ದಾರೆ.  

ಸುಮಾರು ಸಾವಿರ ಜನರನ್ನು ಕೇಳಿರಿ ನೀವು, ಆ 90ರ ದಶಕದಲ್ಲಿ ಹೆಚ್ಚು ನಟಿಯರ ಪೈಕಿ ನೀವು ಇಷ್ಟ ಪಟ್ಟ ನಟಿ ಯಾರು ಎಂದು ಕೇಳಿದರೆ, ಬಹುತೇಕ ಜನರು ರಮ್ಯಾ ಅವರ ಹೆಸರನ್ನು ಹೇಳುತ್ತಾರೆ. ಅಷ್ಟರಮಟ್ಟಿಗೆ ಇಂದಿಗೂ ಜನರ ಮನಸ್ಸಿನಲ್ಲಿ ನಟಿ ರಮ್ಯಾ ಅವರು ಉಳಿದಿದ್ದಾರೆ. ನಟನೆ ಮಾಡಲಿ, ಮಾಡದೆ ಇರಲಿ ರಮ್ಯಾ ಚಿತ್ರರಂಗಕ್ಕೆ ಮರಳಿ ಬರುತ್ತಾರೆ ಎಂಬ ಸುದ್ದಿ ಕೇಳಿ ನಟಿ ಅಭಿಮಾನಿಗಳು ಸಖತ್ ಖುಷಿಯಲ್ಲಿದ್ದಾರೆ. ನಟಿ ರಮ್ಯಾ ಅವರು ಇದೀಗ ಸ್ಯಾಂಡಲ್ವುಡ್ ಮತ್ತೆ ಮರಳುತ್ತಿದ್ದಾರಂತೆ. ಹೌದು ಇತ್ತೀಚಿಗೆ ಓರ್ವ ನಟ ರಮ್ಯಾ ಅವರ ಮನೆಗೆ ಭೇಟಿ ಕೊಟ್ಟಿದ್ದರು. ಅವರು ಬೇರೆ ಯಾರು ಅಲ್ಲ, ಒಂದು ಮೊಟ್ಟೆಯ ಕಥೆ ಹಾಗೂ ಗರುಡಗಮನ ವೃಷಭ ವಾಹನ ಸಿನಿಮಾದ ನಟ ರಾಜ್ ಬಿ ಶೆಟ್ಟಿ. ಇವರು ಕೇವಲ ಕನ್ನಡದಲ್ಲಿ ಮಾತ್ರವಲ್ಲದೆ ರಾಷ್ಟ್ರೀಯ ಮಟ್ಟದಲ್ಲೂ ಸದ್ದು ಮಾಡುತ್ತಿರುವ ನ್ನಿರ್ದೇಶಕ.

ಜೊತೆಗೆ ಯಶಸ್ವಿ ನಾಯಕಿ ಅಮೃತ ಅಯ್ಯಂಗಾರ್ ರಮ್ಯಾ ಅವರ ಮನೆಗೆ ಭೇಟಿ ಕೊಟ್ಟಿದ್ದರು. ಇದೆಲ್ಲಾ ನೋಡಿ ಅವರ ಅಭಿಮಾನಿಗಳು ನಟಿ ರಮ್ಯಾ ಮತ್ತೆ ನಟನೆ ಮಾಡಲಿದ್ದಾರೆ. ಅದು ರಾಜ್ ಬಿ ಶೆಟ್ಟಿ ಅವರ ಸಿನಿಮಾದಲ್ಲಿ ನಟಿಯಾಗಿ ಅಬ್ಬರಿಸಲಿದ್ದಾರೆ ಎಂದು ಹೇಳುತ್ತಿದ್ದಾರೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ಆದಷ್ಟು ಬೇಗ ತೆರೆಯ ಮೇಲೆ ಮತ್ತೆ ರಮ್ಯಾ ಅವರು ಎಂಟ್ರಿ ನೀಡಲಿ ಎಂದು ಶುಭ ಕೋರಿ.