Ramya : ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಸಿನಿಮಾ ನೋಡಿ ಕಣ್ಣೀರಿಟ್ಟ ರಮ್ಯಾ ಭಾವುಕ..! ಹೇಳಿದ್ದೇನು ನೋಡಿ

By Infoflick Correspondent

Updated:Wednesday, June 8, 2022, 14:08[IST]

Ramya :  ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಸಿನಿಮಾ ನೋಡಿ ಕಣ್ಣೀರಿಟ್ಟ   ರಮ್ಯಾ ಭಾವುಕ..! ಹೇಳಿದ್ದೇನು   ನೋಡಿ

ಕನ್ನಡ ಚಿತ್ರರಂಗದ ಉದಯೋನ್ಮುಖ ನಟ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ ಕಿರಣ್ ರಾಜ್ ಕೆ ನಿರ್ದೇಶನದಲ್ಲಿ ಮೂಡಿಬರುತ್ತಿರುವ 777 ಚಾರ್ಲಿ ಸಿನಿಮಾ ಇದೆ ಜೂನ್ 10 ನೇ ತಾರೀಖಿನಿಂದಲೇ ದೇಶದಾದ್ಯಂತ ಭರ್ಜರಿಯಾಗಿ ತೆರೆಮೇಲೆ ಬರಲು ಸಜ್ಜಾಗಿದೆ. ಹೌದು ಕಿರಣ್ ರಾಜ್ ಅವರ ಮೊದಲನೇ ನಿರ್ದೇಶನದ ಸಿನಿಮಾ ಇದಾಗಿದ್ದು, ನಟ ರಕ್ಷಿತ್ ಶೆಟ್ಟಿ ಅಭಿನಯದಲ್ಲಿ ತುಂಬಾ ಅದ್ಭುತವಾಗಿ ಮೂಡಿಬಂದಿದೆ ಎಂದು ಪ್ರೀಮಿಯರ್ ಶೋ ನೋಡಿದ ಸಿನಿಮಾ ಪ್ರೇಕ್ಷಕರು ಹೇಳಿದ್ದಾರೆ. ಹೌದು ದೇಶದಲ್ಲಿ ಈಗಾಗಲೇ 24 ರಾಜ್ಯಗಳಲ್ಲಿ ಪ್ರೀಮಿಯರ್ ಶೋ ಆರಂಭವಾಗಿದ್ದು, ಬೆಂಗಳೂರಿನಲ್ಲಿ 9 ನೇ ತಾರೀಖಿನಿಂದ ಪ್ರೀಮಿಯರ್ ಪ್ರಾರಂಭವಾಗಲಿದೆ.ಹಾಗೆ 10ನೇ ತಾರೀಖಿನಿಂದ ಪ್ಯಾನ್ ಇಂಡಿಯಾ ಚಿತ್ರವಾಗಿ ಎಲ್ಲಾ ಕಡೆ ಬಿಡುಗಡೆಯಾಗುತ್ತಿದೆ.

ಇದು ಕನ್ನಡಿಗರ ಹೆಮ್ಮೆಯ ಮತ್ತೊಂದು ಚಿತ್ರ ಎನ್ನಬಹುದು. ನಟ ರಕ್ಷಿತ್ ಶೆಟ್ಟಿ ಹೊಸ ಚಿತ್ರ ಬರುತ್ತಿದೆ ಎಂದರೆ ಅದೊಂದು ಟ್ರೇಡ್ ಮಾರ್ಕ್ ರೀತಿಯೇ ಎಲ್ಲಾ ಕಡೆ ಸಕತ್ ಧೂಳಿಪಟ ಮಾಡುವುದರಲ್ಲಿ ಸಂಶಯವಿಲ್ಲ. ನಟಿ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಇದೀಗ ಚಾರ್ಲಿ ಸಿನಿಮಾ ನೋಡಿದ್ದು ಪ್ರೀಮಿಯರ್ ಶೋ ನೋಡಿದ ರಮ್ಯಾ ಅವರು ಭಾವುಕರಾಗಿದ್ದಾರಂತೆ. ಹೌದು ಈ ಬಗ್ಗೆ ಮನಬಿಚ್ಚಿ ಮಾತನಾಡಿದ ರಮ್ಯಾ ಅವರು 'ತ್ರಿಬಲ್ ಸೆವೆನ್ ಚಾರ್ಲಿ ಸಿನಿಮಾ ಒಂದು ಸ್ವೀಟ್ ಮತ್ತು ಎಮೋಷನಲ್ ಸಿನಿಮಾ. ನನಗೆ ತುಂಬಾ ಇಷ್ಟವಾಯಿತು. ಥಿಯೇಟರ್ನಲ್ಲಿ ಕುಳಿತಾಗ ನಾನು ಹೆಚ್ಚು ಎಮೋಷನಲ್  ಕೂಡ ಆದೆ. ಜೊತೆಗೆ ತುಂಬಾ ಸ್ವೀಟ್ ಆಗಿದೆ ಸಿನಿಮಾ. ಈ ರೀತಿ ಪ್ರಯತ್ನವನ್ನು ಯಾವ ನಟ ಮತ್ತು ನಿರ್ದೇಶಕ ಖಂಡಿತ ಮಾಡುವುದಿಲ್ಲ, ಆದರೆ ನಟ ರಕ್ಷಿತ್ ಶೆಟ್ಟಿ ಮತ್ತು ಕಿರಣ್ ರಾಜ್ ಕೆ ಮಾಡಿದ್ದಾರೆ.   

777 ಚಾರ್ಲಿ ಚಿತ್ರತಂಡಕ್ಕೆ ಒಳ್ಳೆಯದಾಗಲಿ, ಸಿನಿಮಾವನ್ನು ಎಲ್ಲರೂ ಚಿತ್ರಮಂದಿರಕ್ಕೆ ಬಂದು ನೋಡಿ' ಎಂದು ಶುಭ ಹಾರೈಸಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ, ರಾಜ್ ಬಿ ಶೆಟ್ಟಿ, ಇನ್ನು ದೊಡ್ಡ ದೊಡ್ಡ ತಾರಾಬಳಗವೇ ಇದೆ. ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ಹಾಗೇನೇ ತಪ್ಪದೆ ಮಾಹಿತಿಯ ಶೇರ್ ಮಾಡಿ ಧನ್ಯವಾದಗಳು..