ಹಿಂದಿ ಭಾಷೆಯ ಬಗ್ಗೆ ಅಜಯ್ ದೇವಗನ್ ಟ್ವೀಟ್ ಗೆ ಪ್ರತಿಕ್ರಿಯೆ ಕೊಟ್ಟ ನಟಿ ರಮ್ಯಾ ನೇರವಾಗಿ ಹೇಳಿದ್ದೇನು ?

By Infoflick Correspondent

Updated:Wednesday, April 27, 2022, 22:22[IST]

ಹಿಂದಿ ಭಾಷೆಯ ಬಗ್ಗೆ ಅಜಯ್ ದೇವಗನ್ ಟ್ವೀಟ್ ಗೆ ಪ್ರತಿಕ್ರಿಯೆ ಕೊಟ್ಟ ನಟಿ ರಮ್ಯಾ ನೇರವಾಗಿ ಹೇಳಿದ್ದೇನು ?

ಇತ್ತೀಚೆಗೆ ಕಿಚ್ಚ ಸುದೀಪ್‌ ಟ್ವೀಟ್‌ ಮಾಡಿ ಹಿಂದಿ ರಾಷ್ಟ್ರ ಭಾಷೆ ಅಲ್ಲ ಎಂದು ಹೇಳಿದ್ದರು. ಇದಕ್ಕೆ ಟ್ವೀಟರ್‌ ನಲ್ಲಿ ಪ್ರತಿಕ್ರಿಯಿಸಿರುವ ಅಜಯ್‌ ದೇವಗನ್‌, ಹಿಂದಿನ ನಮ್ಮ ಭಾಷೆ. ಹಿಂದಿ ನಮ್ಮ ಮಾತೃಭಾಷೆ ಎಂದಿದ್ದಾರೆ. 

ನಟ ಕಿಚ್ಚ ಸುದೀಪ್​ ಕೆಲವು ದಿನಗಳ ಹಿಂದೆ ಹಿಂದಿ ರಾಷ್ಟ್ರಭಾಷೆ ಅಲ್ಲ ಎಂದು ನೀಡಿರುವ ಹೇಳಿಕೆಗೆ ಇದೀಗ ಬಾಲಿವುಡ್ ನಟ ಅಜಯ್ ದೇವಗನ್​ ಪ್ರತಿಕ್ರಿಯಿಸಿದ್ದು, ಇಬ್ಬರ ಮಧ್ಯೆ ಸಣ್ಣಮಟ್ಟದಲ್ಲಿ ಭಾಷಾ ಚಕಮಕಿ ನಡೆದಿದೆ. ಈ ಭಾಷಾ ಚರ್ಚೆಗೆ ಇದೀಗ ದಕ್ಷಿಣ ಭಾರತದ ಹಲವಾರು ನಟ ನಟಿಯರು ಎಂಟ್ರಿಯಾಗಿದ್ದಾರೆ.  

ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರೀಯವಾಗಿರುವ ನಟಿ ಹಾಗೂ ರಾಜಕಾರಣಿ ರಮ್ಯಾ ಟ್ವೀಟ್ ಮಾಡಿದ್ದಾರೆ. ಹಾಗು ಸುದೀಪ್ ಮಾತಿಗೆ ದನಿಗೂಡಿಸಿದ್ದಾರೆ. ಅಜಯ್ ದೇವಗನ್ ಅವರ ಟ್ವೀಟ್ ಗೆ ಕಾಂಗ್ರೆಸ್ ಪಕ್ಷದ ನಾಯಕಿ ಹಾಗೂ ನಟಿ ರಮ್ಯಾ ಕೂಡ ಪ್ರತಿಕ್ರಿಯೆ ನೀಡಿದ್ದಾರೆ 

ಇಲ್ಲ, ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ. ಅಜಯ್ ದೇವಗನ್ ಅವರೇ ನಿಮ್ಮ ಅಜ್ಞಾನವು ನನಗೆ ಅಚ್ಚರಿ ತಂದಿದೆ. ಕೆಜಿಎಫ್, ಪುಷ್ಪ ಮತ್ತು ಆರ್‌ಆರ್‌ಆರ್‌ನಂತಹ ಚಲನಚಿತ್ರಗಳು ಹಿಂದಿ ಬೆಲ್ಟ್‌ನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿರುವುದು ಅದ್ಭುತ ಸಂಗತಿ. ಯಾಕೆಂದರೆ, ಕಲೆಗೆ ಯಾವುದೇ ಭಾಷೆಯ ತಡೆ ಇಲ್ಲ. ನಿಮ್ಮ ಚಲನಚಿತ್ರಗಳನ್ನು ನಾವು ಆನಂದಿಸಿದಂತೆ ದಯವಿಟ್ಟು ನಮ್ಮ ಚಲನಚಿತ್ರಗಳನ್ನು ಆನಂದಿಸಿ' ಎಂದು ಬರೆದಿದ್ದು, ಹಿಂದಿ ಹೇರಿಕೆ ಬೇಡ ಎನ್ನುವ ಟ್ಯಾಗ್ ಕೂಡ ಹಾಕಿದ್ದಾರೆ ನಟಿ ರಮ್ಯಾ. 

 ಕಿಚ್ಚ ಸುದೀಪ್ ಮಾಡಿರುವ ಟ್ವೀಟ್ ಗೆ ಈಗಾಗಲೇ 60 ಸಾವಿರ ಲೈಕ್ಸ್ ಗಳು ಬಂದಿದ್ದರೆ, 12500 ರೀಟ್ವೀಟ್ ಹಾಗೂ20 ಸಾವಿರ ಕೋಟ್ ಟ್ವೀಟ್ ಗಳಾಗಿವೆ. ಆ ಮೂಲಕ ಸುದೀಪ್ ಅವರೆ ಈವರೆಗಿನ ಅತ್ಯಂತ ಪ್ರಖ್ಯಾತ ಟ್ವೀಟ್ ಎನಿಸಿದೆ.