ಬಹು ಬೇಡಿಕೆಯ ನಟಿ ರಮ್ಯಾಕೃಷ್ಣ ಬಾಳಲ್ಲಿ ಹೀಗಾಗಬಾರದಿತ್ತು..!!

By Infoflick Correspondent

Updated:Sunday, July 24, 2022, 11:30[IST]

ಬಹು ಬೇಡಿಕೆಯ ನಟಿ ರಮ್ಯಾಕೃಷ್ಣ ಬಾಳಲ್ಲಿ ಹೀಗಾಗಬಾರದಿತ್ತು..!!

50 ವರ್ಷ ದಾಟಿದರೂ ರಮ್ಯಾಕೃಷ್ಣ ಅವರು ಆ ಕಾಲದಿಂದಲೂ ಬಹು ಬೇಡಿಕೆಯ ನಟಿ. ತೆಲುಗು ಕುಟುಂಬದಲ್ಲಿ ಜನಿಸಿದ ರಮ್ಯಾಕೃಷ್ಣ ಅವರು, ತಮಿಳಿನ ವೆಳ್ಳೈ ಮನಸು ಚಿತ್ರದ ಮೂಲಕ ತಮ್ಮ 13 ವಯಸ್ಸಿನಲ್ಲಿಯೇ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟರು. ರಮ್ಯಾ ನಟಿಸಿದ ಮೊದಲ ತೆಲಗು ಚಿತ್ರದ ಹೆಸರು ಭಲೇ ಮಿತ್ರಲು. ಹೀಗೆ ಸಿನಿ ಜರ್ನಿ ಆರಂಭಿಸಿದ ರಮ್ಯಾ ಅವರು ಮೊದಲಿನಿಂದಲೂ ಬಹುಬೇಡಿಕೆಯ ನಟಿಯಾಗೇ ಉಳಿದವರು. ಇಂದಿಗೂ ರಮ್ಯಾ ಅವರ ಕಾಲ್ ಶೀಟ್ ಸಿಗುವುದೇ ಕಷ್ಟವಾಗಿದೆ.

ಬಹು ಬೇಡಿಕೆಯ ನಟಿ ರಮ್ಯಾಕೃಷ್ಣ ಅವರು ಕನ್ನಡ, ತೆಲುಗು, ತಮಿಳು, ಮಳಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ತೆಲಗು ನಿರ್ದೇಶಕ ರಾಘವೇಂದ್ರ ರಾವ್ ಅವರ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಈ ಮೂಲಕ ತೆಲುಗಿನ ಪ್ರಮುಖ ನಾಯಕಿ ನಟಿಯಾಗಿ ಹೊರಹೊಮ್ಮಿದ್ದಾರೆ. ಸರಿ ಸುಮಾರು ಮೂರು ದಶಕಗಳಿಗಿಂತಲೂ ಹೆಚ್ಚು ಕಾಲ ಚಿತ್ರರಂಗದಲ್ಲಿದ್ದಾರೆ. ನೂರಾರು ಚಿತ್ರಗಳಲ್ಲಿ ನಟಿಸಿರುವ ರಮ್ಯಾ ಕೃಷ್ಣ ಅವರು ಭರತನಾಟ್ಯ, ಕುಚುಪುಡಿ ಕಲಿತಿದ್ದಾರೆ. ಕನ್ನಡದಲ್ಲಿ ಕೃಷ್ಣ ರುಕ್ಮಿಣಿ, ಗಡಿಬಿಡಿ ಗಂಡ, ಮಾಂಗಲ್ಯಂ ತಂತುನಾನೇನಾ, ರಕ್ತ ಕಣ್ಣೀರು, ಮಾಣಿಕ್ಯ, ಅಂಜನಿ ಪುತ್ರ, ಬಾ ಬಾರೋ ರಸಿಕ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.


ಕ್ರೇಜಿ ಸ್ಟಾರ್ ರವಿಚಂದ್ರನ್, ಸಾಹಸಸಿಂಹ ವಿಷ್ಣುವರ್ಧನ್, ಕಿಚ್ಚ ಸುದೀಪ್ ಸೇರಿದಂತೆ ಹಲವರ ಜೊತೆ ತೆರೆ ಹಂಚಿಕೊಂಡಿದ್ದಾರೆ. ಶಿವಗಾಮಿ ಚಿತ್ರದಲ್ಲಿ ನಟಿಸಿದ್ದು, ಚಿತ್ರ ತೆರೆಗೆ ಬರಬೇಕಿದೆ. 2003 ರಲ್ಲಿ ತೆಲಗು ಚಿತ್ರ ನಿರ್ದೇಶಕ ಕೃಷ್ಣ ವಂಶಿ ಎಂಬುವರನ್ನು ಮದುವೆಯಾದರು. ಈಗ ಅವರಿಗೆ ರಿತ್ವಿಕ್ ಎಂಬ ಪುತ್ರನಿದ್ದಾನೆ. ಮದುವೆಯಾದ ಮೇಲೂ ಕೂಡ ರಮ್ಯಾ ಕೃಷ್ಣನ್ ಅವರು ತಮ್ಮ ನಟನೆಯನ್ನು ನಿಲ್ಲಿಸಲಿಲ್ಲ. ಇತರೆ ನಟ ನಟಿಯರಿಗಿಂತಲೂ ರಮ್ಯಾ ಬಹು ಬೇಡಿಕೆಯ ಬ್ಯುಸಿ ನಟಿಯಾಗಿದ್ದಾರೆ.

ಇದೀಗ ಅವರ ಖಾಸಗಿ ವಿಚಾರವಾಗಿ ಸುದ್ದಿಯಾಗಿದ್ದಾರೆ. ರಮ್ಯಾಕೃಷ್ಣ ಮತ್ತು ನಿರ್ದೇಶಕ ಕೃಷ್ಣವಂಶಿ ಡಿವೋರ್ಸ್ ಪಡೆದಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. 2003ರಲ್ಲಿ ನಟಿ ರಮ್ಯಾಕೃಷ್ಣ ಮತ್ತು ಕೃಷ್ಣ ವಂಶಿ ವಿವಾಹವಾದರು. ಇವರಿಬ್ಬರಿಗೆ ಮುದ್ದಾದ ಗಂಡು ಮಗು ಸಹ ಇದೆ. ಆದರೆ ಟಾಲಿವುಡ್‌ ನಲ್ಲಿ ಈ ಜೋಡಿಯ ಡಿವೋರ್ಸ್‌ ವಿಚಾರ ಭಾರೀ ಸದ್ದು ಮಾಡುತ್ತಿದೆ. ಆದರೆ ಈ ಬಗ್ಗೆ ಪತಿ ಕೃಷ್ಣವಂಶಿ ಇದೀಗ ಸ್ಪಷ್ಟನೆ ನೀಡಿದ್ದಾರೆ. ಅದೇನೆಂದರೆ, ತಾವಿಬ್ಬರೂ ಸುಖವಾಗಿದ್ದು, ಯಾವ ಗಾಸಿಪ್‌ ಗೂ ತಲೆಕಡಿಸಿಕೊಳ್ಳಬಾರದು ಎಂದು ಹೇಳಿದ್ದಾರೆ.