ಅಂದು ಶೂಟಿಂಗ್ ಸಮಯದಲ್ಲಿ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅವರ ಜೀವ ಉಳಿಸಿದವರು ಯಾರು ಗೊತ್ತಾ ?

By Infoflick Correspondent

Updated:Tuesday, August 23, 2022, 20:19[IST]

ಅಂದು ಶೂಟಿಂಗ್ ಸಮಯದಲ್ಲಿ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅವರ  ಜೀವ ಉಳಿಸಿದವರು ಯಾರು ಗೊತ್ತಾ ?

ಬೆಂಗಳೂರಿನಲ್ಲೇ ಹುಟ್ಟಿದ್ರೂ ರಮ್ಯಾ ಓದಿದ್ದು ಮಾತ್ರ ಊಟಿಯ ರೆಸಿಡೆನ್ಶಿಯಲ್ ಸ್ಕೂಲ್ ನಲ್ಲಿ. ಬಳಿಕ ಬೆಂಗಳೂರಿನ ಸೆಂಟ್ ಜೋಸೆಫ್ ಕಾಲೇಜಿನಲ್ಲಿ ಬಿಕಾಂ ಮುಗಿಸಿದರು. ಓದುವಾಗಲಿಂದಲೂ ಮಾಡೆಲ್ ಆಗುವ ಆಸೆ ಹೊಂದಿದ್ದ ರಮ್ಯಾ, ಮುಂಬೈನ ಶೀತಲ್ ಸ್ಟುಡಿಯೋದಲ್ಲಿ ಮಾಡೆಲಿಂಗ್ ಮಾಡುತ್ತಿದ್ದರು. ಬಳಿಕ, 2001 ರಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಅಪ್ಪು ಸಿನಿಮಾದ ಆಡಿಷನ್ ನಲ್ಲಿ ಭಾಗಿಯಾದರು. ಈ ಸಿನಿಮಾದಲ್ಲಿ ರಮ್ಯಾ ನಟಿಸೋದು ಅಂತ ಸುದ್ದಿಯೂ ಆಯಿತು. ಆದರೆ, ಅವರು ಆಯೇಕೆಯಾಗಲಿಲ್ಲ. ಒಂದು ವರ್ಷದ ಬಳಿಕ ಅಭಿ ಚಿತ್ರದ ನಾಯಕಿಯಾಗಿ ರಮ್ಯಾ ಬಣ್ಣ ಹಚ್ಚಿದರು. ಮೂಲ ಹೆಸರು ದಿವ್ಯಾಸ್ಪಂದನ ಎಂದಿದ್ದ ಇವರ ಹೆಸರು ಅಭಿ ಚಿತ್ರದ ಮೂಲಕ ರಮ್ಯಾ ಎಂದೇ ಗುರುತಿಸಿಕೊಂಡರು.  

ಬಳಿಕ ತಮಿನು ಸಿನಿಮಾವೊಂದರಲ್ಲಿ ನಟಿಸಿ, ಅಲ್ಲೂ ಹಿಟ್ ಆದರು. ಮತ್ತೆ ಕನ್ನಡ ಚಿತ್ರರಂಗದ ರಂಗ ಎಸ್'ಎಸ್'ಎಲ್'ಸಿ, ಆಕಾಶ್, ಅಮೃತಧಾರೆ, ತನನಂ ತನನಂ, ಜೊತೆ ಜೊತೆಯಲಿ, ಹುಚ್ಚ, ಸಂಜು ವೆಡ್ಸ್ ಗೀತಾ, ಜಾನಿ ಮೇರಾ ನಾಮ್ ಸೇರಿದಂತೆ ಹತ್ತು ಹಲವು ಸಿನಿಮಾಗಳಲ್ಲಿ ನಟಿಸಿದರು. ಸ್ಯಾಂಡಲ್ ವುಡ್ ಕ್ವೀನ್ ಎಂದೇ ಪ್ರಖ್ಯಾತಿ ಪಡೆದರು. ಪುನೀತ್ ರಾಜ್ ಕುಮಾರ್, ಸುದೀಪ್, ಪ್ರೇಮ್, ಉಪೇಂದ್ರ ಸೇರಿದಂತೆ ಹಲವು ನಟರೊಂದಿಗೆ ನಟಿಸಿ ಫೇಮಸ್ ಆದರು. 

ತದನಂತರ 2012ರಲ್ಲಿ ರಾಜಕೀಯಕ್ಕೆ ಪ್ರವೇಶ ಕೊಟ್ಟರು. ಲೋಕಸಭೆ ಚುನಾವಣೆಯಲ್ಲಿ ಗೆದ್ದು ಅತಿ ಚಿಕ್ಕವಯಸ್ಸಿನ ಸಂಸದೆ ಎಂದು ಖ್ಯಾತಿ ಪಡೆದರು. ಬಳಿಕ 2014ರಲ್ಲಿ ಸೋತು ರಾಜಕೀಯ ಚಟುವಟಿಕೆಗಳಿಂದ ದೂರ ಉನಿಜರು. ಈ ವೇಳೆ, ರಮ್ಯಾ ಮದುವೆ ಬಗ್ಗೆ ಉಹಾಪೋಹಗನು ಶುರುವಾದವು. ಆಗ ರಾಹುಲ್ ತಮ್ಮ ಸ್ನೇಹಿತರಷ್ಟೇ ಎಂದು ಸ್ವತಃ ರಮ್ಯಾ ಸ್ಪಷ್ಟನೆ ಕೊಟ್ಟರು. ತದನಂತರ ತಾವು ನಾಗರಹಾವು ಸಿನಿಮಾದಲ್ಲಿ ನಟಿಸಿದರು. 


ಆದರೆ, ಅಮೃತಧಾರೆ ಚಿತ್ರದ ಹುಡುಗ ಹುಡುಗ ಹಾಡನ್ನು ಚಿತ್ರೀಕ್ರಿಸಲು ಸಿಯಾಚಿನ್ ಗೆ ಹೋಗಿದ್ದರು. ಅಲ್ಲಿ ಉಸಿರಾಟ ಸಮತೋಲನ ಕಾಪಾಡಿಕೊಳ್ಳಲು ಎರಡು ದಿನ ರೆಸ್ಟ್ ಮಾಡಿ ನಂತರ ಶೂಟಿಂಗ್ ಶುರು ಮಾಡಬೇಕಿತ್ತು. ಆದರೆ ರಮ್ಯಾ ಅವರು ಹಿಮದ ಜೊತೆಗೆ ಹಾಡುವ ಖುಷಿಯಲ್ಲಿ ರೆಸ್ಟ್ ಮಾಡಿರಲಿಲ್ಲ. ಇದರಿಂದ ಉಸಿರಾಟದ ತೊಂದರೆಯಾಗಿ ಕುಸಿದು ಬಿದ್ದಿದ್ದರು. ಇನ್ನೇನು ರಮ್ಯಾ ಅವರನ್ನು ಕಳೆದುಕೊಂಡೆವು ಎಂದುಕೊಳ್ಳುವ ವೇಳೆಗೆ ಅಲ್ಲೇ ಇದ್ದ ಯೋಧರೊಬ್ಬರು ಆಕ್ಸಿಜನ್ ಕೊಟ್ಟು ಬದುಕಿಸಿದರು. ಈ ವಿಚಾರವನ್ನು ಸ್ವತಃ ನಾಗತ್ತಿಹಳ್ಳಿ ಚಂದ್ರಶೇಖರ್ ಅವರೇ ಹೇಳಿದ್ದಾರೆ.