ಒಂದೇ ಸಿನಿಮಾದಲ್ಲಿ ನಟಿಸಲಿದ್ದಾರಾ ರಮ್ಯ ಹಾಗೂ ರಕ್ಷಿತ್ ಶೆಟ್ಟಿ..?

By Infoflick Correspondent

Updated:Thursday, May 12, 2022, 19:04[IST]

ಒಂದೇ ಸಿನಿಮಾದಲ್ಲಿ ನಟಿಸಲಿದ್ದಾರಾ ರಮ್ಯ ಹಾಗೂ ರಕ್ಷಿತ್ ಶೆಟ್ಟಿ..?

ಸ್ಯಾಂಡಲ್ ವುಡ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಚಿತ್ರ ಈಗಾಗಲೇ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಇನ್ನೂ 777 ಚಾರ್ಲಿ ಚಿತ್ರ ಮುಂದಿನ ತಿಂಗಳು ರಿಲೀಸ್ ಆಗುತ್ತಿದೆ. ಕಿರಣ್ ರಾಜ್ ಚಿತ್ರವನ್ನು ನಿರ್ದೇಶಿಸಿದ್ದು, ಬಿಎಸ್ ಗುಪ್ತಾ ಹಾಗೂ ರಕ್ಷಿತ್ ಶೆಟ್ಟಿ ನಿರ್ಮಿಸಿದ್ದಾರೆ. ಇನ್ನು ಸಿನಿಮಾದಲ್ಲಿ ಸಂಗೀತ ಶೃಂಗೇರಿ, ರಾಜ್ ಬಿ ಶೆಟ್ಟಿ, ದಾನಿಶ್ ಸೇಟ್ ಸೇರಿದಂತೆ ಹಲವರು ನಟಿಸಿದ್ದಾರೆ. ಇನ್ನು ರಕ್ಷಿತ್ ಶೆಟ್ಟಿ ಅವರ ಕೈಯಲ್ಲಿ ಸಪ್ತಸಾಗರದಾಚೆ ಎಲ್ಲೊ, ಪುಣ್ಯಕೋಟಿ, ಕಿರಿಕ್ ಪಾರ್ಟಿ 2  ಚಿತ್ರಗಳಿವೆ.    

ಇದೀಗ ಸ್ಯಾಂಡಲ್ ವುಡ್ ಕ್ವೀನ್ ನಟಿ ರಮ್ಯಾ ಅವರು ಸುಮಾರು ಹದಿನೈದು ವರ್ಷಗಳ ಕಾಲ ಲೀಡಿಂಗ್ ನಲ್ಲಿದ್ದ ನಟಿ. ಈಗಲೂ ಮೋಹಕ ತಾರೆ ರಮ್ಯ ಅವರ ಸಿನಿಮಾ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ. 35ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಳೆದ ಕೆಲ ವರ್ಷಗಳಿಂದ ಸ್ಯಾಂಡಲ್ ವುಡ್, ಸೋಶಿಯಲ್ ಮೀಡಿಯಾಗಳಿಂದ ನಟಿ ರಮ್ಯಾ ಅವರು ದೂರ ಉಳಿದಿದ್ದರು. ಇದೀಗ ಮತ್ತೆ ಚಂದನವನದ ಕಡೆ ಒಲವು ತೋರಿದ್ದಾರೆ. ಇದೀಗ ಮತ್ತೊಂದು ಸಿನಿಮಾದಲ್ಲಿ ರಮ್ಯಾ ಅವರು ಕಾಣಿಸಿಕೊಂಡಿದ್ದಾರಂತೆ. ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಮ್ಯಾ ಅವರು ಯಾವ ಚಿತ್ರದಲ್ಲಿ ನಟಿಸಿದ್ದಾರೆ ಎಂಬ ವಿಚಾರ  ಇನ್ನೂ ತಿಳಿದು ಬಂದಿಲ್ಲ. 

ಆದರೆ ಇದೀಗ ರಕ್ಷಿತ್ ಶೆಟ್ಟಿ ಹಾಗೂ ರಮ್ಯ ಅವರು ಒಟ್ಟಿಗೆ ನಟಿಸುತ್ತಿದ್ದಾರೆ ಎಂಬ ಸುದ್ದಿಯೊಂದು ಬಂದಿದೆ. ರಕ್ಷಿತ್ ಅವರಿಗೆ ಮೊದಲಿನಿಂದಲೂ ಅವರ ಕ್ರಶ್ ರಮ್ಯ. ಆದರೆ ಇದುವರೆಗೂ ರಮ್ಯ ಅವರನ್ನು ರಕ್ಷಿತ್ ಅವರು ಭೇಟಿ ಮಾಡಿಲ್ಲ. ಈ ಬಗ್ಗೆ ಪ್ರಶ್ನೆಯೊಂದನ್ನು ಕೇಳಲಾಗಿದೆ. ರಕ್ಷಿತ್ ಶೆಟ್ಟಿ ಅವರು ರಮ್ಯ ಅವರಿಗಾಗಿ ಸಿನಿಮಾ ನಿರ್ದೇಶಿಸುತ್ತಾರಾ ಎಂದು ಕೇಳಲಾಗಿದೆ. ಇದಕ್ಕೆ ರಕ್ಷಿತ್ ಅವರು ಇಲ್ಲ. ಕಥೆ ಸಿದ್ಧವಾಗಿಲ್ಲ. ಕಥೆ ಸಿಕ್ಕರೆ ಖಂಡಿತಾ ಮಾಡುವುದೇ ಎಂದು ಹೇಳಿದ್ದಾರೆ. ಈ ಮೂಲಕ ಸ್ಯಾಂಡಲ್ ವುಡ್ ರೀ ಎಂಟ್ರಿ ಕೊಡಲು ಮುಂದಾಗಲಿರುವ ರಮ್ಯಗೆ ರಕ್ಷಿತ್ ಶೆಟ್ಟಿ ಅವರ ಜೊತೆಗೆ ಕೆಲಸ ಮಾಡೋದಂತೂ ಗ್ಯಾರೆಂಟಿ ಅಂತಾಯ್ತು. ಆದರೆ ಯಾವಾಗ.? ಯಾವ ಸಿನಿಮಾ ಅನ್ನೋ ಪ್ರಶ್ನೆಗೆ ಮುಂದೆ ರಕ್ಷಿತ್ ಶೆಟ್ಟಿ ಅವರೇ ಉತ್ತರಿಸಬೇಕಿದೆ.