ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರಂತೆ ಮೋಹಕ ತಾರೆ ರಮ್ಯಾ: ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಡಲಿದ್ದಾರಾ.?
Updated:Wednesday, May 4, 2022, 14:04[IST]

ಸ್ಯಾಂಡಲ್ ವುಡ್ ಕ್ವೀನ್ ನಟಿ ರಮ್ಯಾ ಅವರು ಸುಮಾರು ಹದಿನೈದು ವರ್ಷಗಳ ಕಾಲ ಲೀಡಿಂಗ್ ನಲ್ಲಿದ್ದ ನಟಿ. ಈಗಲೂ ಮೋಹಕ ತಾರೆ ರಮ್ಯ ಅವರ ಸಿನಿಮಾ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ. 35ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಸದ್ಯ ಸಿನಿ ಲೋಕದಿಂದ ದೂರ ಉಳಿದಿರುವ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಈಗ ಮತ್ತೆ ಚಂದನವನದತ್ತ ಮುಖ ಮಾಡುತ್ತಿರುವಂತೆ ಕಾಣುತ್ತಿದೆ. ಕಳೆದ ಕೆಲ ವರ್ಷಗಳಿಂದ ಸ್ಯಾಂಡಲ್ ವುಡ್, ಸೋಶಿಯಲ್ ಮೀಡಿಯಾಗಳಿಂದ ನಟಿ ರಮ್ಯಾ ಅವರು ದೂರ ಉಳಿದಿದ್ದರು. ಇದೀಗ ಮತ್ತೆ ಚಂದನವನದ ಕಡೆ ಒಲವು ತೋರಿದ್ದಾರೆ.
ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ರಮ್ಯಾ ಸ್ಯಾಂಡಲ್ ವುಡ್ ಗೆಳೆಯರ ಜೊತೆ ಮತ್ತೆ ಸ್ನೇಹ ಮುಂದುವರಿಸಿದ್ದಾರೆ. ಸಿನಿಮಾ ಮತ್ತು ರಾಜಕೀಯ ನನ್ನ ಜೀವನದಲ್ಲಿ ಮುಳುಗಿ ಹೋದ ಹಡಗು ಎಂದಿದ್ದ ನಟಿ, ಮಾಜಿ ಸಂಸದೆ ರಮ್ಯಾ. ನಟಿ ರಮ್ಯಾ ಹಲವು ದಿನಗಳ ಬಳಿಕ ಇತ್ತೀಚೆಗೆ ಇನ್ ಸ್ಟಾಗ್ರಾಂನಲ್ಲಿ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ರಮ್ಯಾ ಅವರು ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಾಗ, ಪುನೀತ್ ರಾಜ್ ಕುಮಾರ್, ಸುದೀಪ್, ನೆನಪಿರಲಿ ಪ್ರೇಮ್, ವಿಜಯ್ ರಾಘವೇಂದ್ರ, ಯಶ್ ಸೇರಿದಂತೆ ಹಲವು ನಟರ ಜೊತೆಗೆ ತೆರೆ ಹಂಚಿಕೊಂಡಿದ್ದಾರೆ.
ಇದೀಗ ಮತ್ತೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರುವ ರಮ್ಯಾ ಅವರು ತೆರೆಮೇಲೆ ಕಾಣಿಸಿಕೊಳ್ಳು ಸಜ್ಜಾಗಿದ್ದಾರಂತೆ. 2003ರಲ್ಲಿ ಸ್ಯಾಂಡಲ್ ವುಡ್ ಗೆ ಅಭಿ ಚಿತ್ರದ ಮೂಲಕ ಎಂಟ್ರಿ ಕೊಟ್ಟ ರಮ್ಯಾ, 2016ರವರೆಗೆ ಹಲವು ಚಿತ್ರಗಳಲ್ಲಿ ರಮ್ಯಾ ನಟಿಸಿದ್ದಾರೆ. 2016ರಲ್ಲಿ ನಾಗರಹಾವು ಚಿತ್ರದಲ್ಲಿ ನಟಿಸಿದ ಮೇಲೆ ಮತ್ತೆ ರಮ್ಯಾ ಯಾವ ಸಿನಿಮಾಗಳಲ್ಲೂ ಕಾಣಿಸಿಕೊಲ್ಳಿಲ್ಲ. ಆದರೆ ಇದೀಗ ಮತ್ತೊಂದು ಸಿನಿಮಾದಲ್ಲಿ ರಮ್ಯಾ ಅವರು ಕಾಣಿಸಿಕೊಂಡಿದ್ದಾರಂತೆ. ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಮ್ಯಾ ಅವರು ಯಾವ ಚಿತ್ರದಲ್ಲಿ ನಟಿಸಿದ್ದಾರೆ.? ಯಾವಾಗ ರಿಲೀಸ್ ಆಗುತ್ತಿದೆ.? ಬೇರೆ ಯಾವೆಲ್ಲಾ ನಟ-ನಟಿಯರಿದ್ದಾರೆ ಎಂಬ ವಿಚಾರಮಾತ್ರ ಬಹಿರಂಗವಾಗಿಲ್ಲ. ಆದರೆ, ಇನ್ನು ಕೆಲವೇ ದಿನಗಳಲ್ಲಿ ರಮ್ಯಾ ಅವರು ತೆರೆಮೇಲೆ ಕಾಣಿಸಿಕೊಳ್ಲುವುದಂತೂ ಸತ್ಯ.