Ramya : ಕೆಜಿಎಫ್ ಬಾಡಿ ಗಾರ್ಡ್ ಲೆವೆಲ್ ಅಲ್ಲಿ ಚಾರ್ಲಿ ಸಿನಿಮಾ ನೋಡಲು ಬಂದ ರಮ್ಯಾ ಹೇಳಿದ್ದೇನು..?

By Infoflick Correspondent

Updated:Saturday, June 11, 2022, 18:56[IST]

Ramya :  ಕೆಜಿಎಫ್  ಬಾಡಿ ಗಾರ್ಡ್  ಲೆವೆಲ್ ಅಲ್ಲಿ ಚಾರ್ಲಿ ಸಿನಿಮಾ ನೋಡಲು ಬಂದ ರಮ್ಯಾ ಹೇಳಿದ್ದೇನು..?

ಕನ್ನಡ ಚಿತ್ರರಂಗದ ಮೂಲಕ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ 777 ಚಾರ್ಲಿ ಇದೀಗ ವರ್ಲ್ಡ್ ವೈಡ್ ರಿಲೀಸ್ ಆಗಿ ಒಳ್ಳೆಯ ಪ್ರಸಂಸೆ ಗಳಿಸಿಕೊಳ್ಳುತ್ತಿದೆ. ಹೌದು ನಿರ್ದೇಶಕ ಕಿರಣ್ ರಾಜ್ ಕೆ ಅವರ ನಿರ್ದೇಶನದಲ್ಲಿ ಮೂಡಿ ಬಂದ ಹಾಗೂ ನಟ ರಕ್ಷಿತ್ ಶೆಟ್ಟಿ ಅವರ ನಟನೆಯಿಂದ ಹಿಡಿದು ಚಾರ್ಲಿ ಅಭಿನಯ ಸಹ ಎಲ್ಲರ ಮನಗೆದ್ದಿದೆ ಎಂದು ಹೇಳಬಹುದು. ಸಿನಿಮಾ ನೋಡಲು ಥಿಯೇಟರ್ ಗಳಿಗೆ ಹೋದ ಪ್ರೇಕ್ಷಕ ಪ್ರಭುಗಳು 777 ಚಾರ್ಲಿ ಸಿನಿಮಾಗೆ ಫುಲ್ ಮಾರ್ಕ್ಸ್ ನೀಡಿದ್ದಾರೆ. ಚಾರ್ಲಿ ತುಂಬಾ ಅದ್ಭುತವಾಗಿದೆ ಎಂದು ಖುಷಿಯಲ್ಲಿಯೇ ಹೊರಬರುತ್ತಿದ್ದಾರೆ. ಜೊತೆಗೆ ಹೆಚ್ಚು ಎಮೋಷನಲ್ ಆಗಿದ್ದಾರೆ ಎನ್ನಬಹುದು. ಹೌದು ಸ್ಯಾಂಡಲ್ವುಡ್ ಕ್ವೀನ್ ನಟಿ ರಮ್ಯಾ ಅವರು ಬೆಂಗಳೂರಿನಲ್ಲಿ ಚಾರ್ಲಿ ನೋಡಲು ಪ್ರೀಮಿಯರ್ ಶೋಗೆ ಬಂದಿದ್ದರು.

ಆಗ ಮಾಧ್ಯಮದ ಜೊತೆ ಮಾತನಾಡಿದ ನಟಿ ರಮ್ಯಾ ಅವರು ರಕ್ಷಿತ್ ಶೆಟ್ಟಿ ಮತ್ತು ಚಾರ್ಲಿ ಬಗ್ಗೆ ಹೇಳಿದ್ದೇನು ಗೊತ್ತಾ..? ಮತ್ತು ಇಡೀ ಚಿತ್ರತಂಡದ ಬಗ್ಗೆ ಹೇಳಿದ ವಿಚಾರ ಎಲ್ಲರ ಗಮನಸೆಳೆಯಿತು. ನಟಿ ರಮ್ಯಾ ಅವರು ಹೇಳುವ ಹಾಗೆ 'ಚಾರ್ಲಿ ಸಿನಿಮಾ ಒಂದು ಸ್ವೀಟ್ ಸಿನಿಮಾ ಆಗಿದೆ. ತುಂಬಾ ಹೆಮ್ಮೆಯಾಗುತ್ತದೆ, ಈ ರೀತಿಯ ಪ್ರಯೋಗಗಳನ್ನು ಯಾರು ಮಾಡುವುದಿಲ್ಲ. ನಿರ್ದೇಶಕ ಕಿರಣ್ ರಾಜ್ ಅವರು ಮಾಡಿದ್ದಾರೆ. ಹಾಗೆಯೇ ರಕ್ಷಿತ್ ಶೆಟ್ಟಿ ತುಂಬಾ ಅದ್ಭುತವಾಗಿ ನಟನೆ ಮಾಡಿ ಎಲ್ಲರ ಮನಗೆದ್ದಿದ್ದಾರೆ. ಹಾಗೂ ಚಾರ್ಲಿ ನನ್ನ ಹೃದಯ ಕದ್ದು ಬಿಟ್ಟಿತು. ಈ ಸಿನಿಮಾದಲ್ಲಿ ಒಂದು ಒಳ್ಳೆಯ ಮೆಸೇಜ್ ಕೂಡ ಇದೆ. ಈ ಮುಂಚೆ ಕರೋನ ಕಾರಣಕ್ಕೆ ಹಾಗೂ ಕೊರೊನ ಹೋದ ಬಳಿಕವೂ ಸಿನಿಮಾ ಥೇಟರ್ ಕಡೆ ಹೆಚ್ಚು ಪ್ರೇಕ್ಷಕರು ಬರುತ್ತಿರಲಿಲ್ಲ. ಆದ್ರೆ ಇದು ಒಳ್ಳೆಯ ಸಮಯ, ಮತ್ತೆ ಪ್ರೇಕ್ಷಕರು, ಫ್ಯಾಮಿಲಿ ಸಮೇತವಾಗಿ ಇತ್ತ ಸಿನಿಮಾ ಥಿಯೇಟರ್ ಕಡೆ ಮುಖ ಮಾಡಿ ಸಿನಿಮಾ ಎಂಜಾಯ್ ಮಾಡುವುದಕ್ಕೆ' ಎಂದಿದ್ದಾರೆ.    

ಹಾಗೆ ಎಲ್ಲರೂ ಕೂಡ ಅದ್ಭುತವಾಗಿ ಅಭಿನಯಿಸಿದ್ದು, ನಟ ರಾಜ್ ಬಿ ಶೆಟ್ಟಿ ಅವರು ಕೂಡ ತುಂಬಾ ಚೆನ್ನಾಗಿ ಅಭಿನಯ ಮಾಡಿದ್ದಾರೆ ಎಂದರು ರಮ್ಯಾ. ಕೊನೆಯಲ್ಲಿ ರಕ್ಷಿತ್ ಶೆಟ್ಟಿಗೆ ಹ್ಯಾಪಿ ಬರ್ತ್ಡೇ ರಕ್ಷಿತ್ ಶೆಟ್ಟಿ, ಲಾಟ್ಸ್ ಆಫ್ ಲವ್ ಎಂದರು. ಹೆಚ್ಚಿನ ಮಾಹಿತಿಗಾಗಿ ರಮ್ಯಾ ಅವರು ಸಿನಿಮಾ ಬಗ್ಗೆ ಪ್ರತಿಕ್ರಿಯೆ ನೀಡಿದ ಈ ವಿಡಿಯೋವನ್ನು ನೋಡಿ. ಚಾರ್ಲಿ ಚಿತ್ರ ನಿಮಗೆ ಹೇಗೆನಿಸಿತು ಎಂಬುದಾಗಿಯೂ ಕಾಮೆಂಟ್ ಮಾಡಿ ಧನ್ಯವಾದಗಳು...