ನನ್ನ ಗಂಡ ಹೆಣ್ಣುಬಾಕು ಎಂದು ಸ್ಪೋಟಕ ಮಾಹಿತಿ ಹಂಚಿಕೊಂಡ ನರೇಶ್ 3 ನೇ ಪತ್ನಿ

By Infoflick Correspondent

Updated:Wednesday, June 29, 2022, 08:12[IST]

ನನ್ನ ಗಂಡ ಹೆಣ್ಣುಬಾಕು ಎಂದು ಸ್ಪೋಟಕ ಮಾಹಿತಿ ಹಂಚಿಕೊಂಡ ನರೇಶ್ 3 ನೇ ಪತ್ನಿ

ತೆಲುಗಿನ ನಟ ನರೇಶ್ ಈಗಾಗಲೇ ಮೂರು ವಿವಾಹವಾಗಿದ್ದು, ಮೂರನೇ ಪತ್ನಿ ರಮ್ಯಾ ರಘುಪತಿಗೆ ವಿಚ್ಛೇಧನ ನೀಡದೆಯೇ ಪವಿತ್ರಾ ಲೋಕೇಶ್‌ ಜೊತೆ ಕದ್ದು-ಮುಚ್ಚಿ ವಿವಾಹವಾಗಿದ್ದಾರೆ ಎನ್ನಲಾಗುತ್ತಿದೆ.


ನರೇಶ್ ಹಾಗೂ ರಮ್ಯಾ ರಘುಪತಿ 2010 ರಲ್ಲಿ ವಿವಾಹವಾಗಿದ್ದು, ಇಬ್ಬರಿಗೂ 9 ವರ್ಷದ ಮಗನಿದ್ದಾನೆ. ಇಬ್ಬರಿಗೂ ಇನ್ನೂ ವಿಚ್ಛೇಧನ ಆಗಿಲ್ಲ ಆದರೆ ನಟಿ ಪವಿತ್ರಾ ಲೋಕೇಶ್ ಅನ್ನು ವಿವಾಹವಾಗಲು ಪತ್ನಿ ರಮ್ಯಾ ರಘುಪತಿ ವಿರುದ್ಧವೇ ತಂತ್ರವೊಂದನ್ನು ರೂಪಿಸಿ ಆಕೆಯನ್ನು ಅಸಹಾಯಕಗೊಳಿಸುವ ತಂತ್ರ ರೂಪಿಸಿದ್ದ. ಆ ಬಗ್ಗೆ ರಮ್ಯಾ ರಘುಪತಿ ಮಾತನಾಡಿದ್ದಾರೆ. ನರೇಶ್​ ಯಾವ ರೀತಿಯ ವ್ಯಕ್ತಿ ಎಂದು ಎಲ್ಲರ ಮುಂದೆ ತೆರೆದಿಟ್ಟಿದ್ದಾರೆ.   

ಊದುಬತ್ತಿ ಕಾರ್ಖಾನೆ ನಡೆಸುತ್ತಿರುವ ರಮ್ಯಾ ರಘುಪತಿ, ಉದ್ಯಮ ಆರಂಭಿಸಲು ಕೆಲವರಿಂದ ಕೆಲವು ಲಕ್ಷ ಸಾಲ ಪಡೆದಿದ್ದರು. ಸಾಲವನ್ನು ಕಾಲ ಕಾಲಕ್ಕೆ ಮರುಪಾವತಿ ಸಹ ಮಾಡುತ್ತಿದ್ದರು. ಆದರೆ ನರೇಶ್, ರಮ್ಯಾಗೆ ಸಾಲ ನೀಡಿದವರನ್ನು ಸಂಪರ್ಕಿಸಿ ಅವರಿಂದಲೇ ಪತ್ನಿಯ ವಿರುದ್ಧ ಕೋಟ್ಯಂತರ ರುಪಾಯಿ ಹಣ ವಂಚನೆ ಆರೋಪವನ್ನು ಮಾಡಿದಿದ್ದಾರೆ. ತನ್ನ ಪ್ರಭಾವ ಬಳಸಿ, ರಮ್ಯಾ ರಘುಪತಿ ಸುಮಾರು 500 ಕೋಟಿ ಹಣ ವಂಚನೆ ಮಾಡಿದ್ದಾರೆ ಎಂದು ಕೆಲವು ತೆಲುಗು ಮಾಧ್ಯಮಗಳಲ್ಲಿ ಸುದ್ದಿಗಳನ್ನು ಸಹ ಬರೆಸಿದ್ದಾರೆ. ಹೀಗೆಂದು ರಮ್ಯಾ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ರಮ್ಯಾ ವಿರುದ್ಧ ಯಾವುದೇ ಅಧಿಕೃತ ದೂರು ಸಹ ಪೊಲೀಸ್ ಠಾಣೆಯನ್ನು ದಾಖಲಾಗದೇ ಇದ್ದರೂ ಮಾಧ್ಯಮಗಳಲ್ಲಿ ರಮ್ಯಾ ಅಪರಾಧಿ ಎಂಬಂತಾ ವರದಿಗಳು ಪ್ರಸಾರವಾಗಿವೆ. ಇದರಿಂದ ಉದ್ಯಮದಲ್ಲಿ ದೊಡ್ಡ ಮಟ್ಟದ ನಷ್ಟ ಅನುಭವಿಸಿದ್ದಾರೆ ರಮ್ಯಾ ಹೇಳಿದ್ದಾರೆ. 

ಮಾಧ್ಯಮಗಳಿಗೆ ಹೇಳಿಕೆ ಕೊಟ್ಟಿದ್ದ ನರೇಶ್, ''ನನಗೂ ರಮ್ಯಾಗೂ ಸಂಬಂಧವಿಲ್ಲ. ನಾವಿಬ್ಬರೂ ಕಳೆದ ಏಳು ವರ್ಷದಿಂದ ಒಟ್ಟಿಗಿಲ್ಲ'' ಎಂದಿದ್ದರು. ಆದರೆ ಆಗಲೂ ಸಹ ರಮ್ಯಾ ಹಾಗೂ ನರೇಶ್ ಒಂದೇ ಮನೆಯಲ್ಲಿ ಒಟ್ಟಿಗೆ ವಾಸವಿದ್ದರು.

ಪವರ್ ಟಿವಿ ಸಂದರ್ಶನದಲ್ಲಿ ನರೇಶ್ ಮಹಿಳೆಯೊಂದಿಗಿನ ಅಫೇರ್‌ನಿಂದ ಬೇಸತ್ತು ಹೋಗಿದ್ದೇನೆ ಎಂದು ಹೇಳಿದ್ದಾರೆ. " ನನಗೆ ಬೇಜಾರು ಆಗಿತ್ತು. ಸೆಂಚುರಿ ಆಯ್ತಾ ಅಂತ ಕೇಳಿದ್ದೆ. " ಎಂದು ಪತಿಯ ಹೆಣುಬಾಕ ತನವನ್ನು ಬಿಚ್ಚಿಟ್ಟಿದ್ದಾರೆ.

ನರೇಶ್ ಒಬ್ಬ ಹೆಣ್ಣುಬಾಕ. ಆತ ಹೆಣ್ಣುಬಾಕ ಅನ್ನುವುದು ಮದುವೆಯಾದ ಮೂರು ವರ್ಷಕ್ಕೆ ತಿಳಿದಿತ್ತು. ನಮ್ಮ ಅತ್ತೆಯವರದ್ದು ತುಂಬು ಕುಟುಂಬ. ಎಲ್ಲರೂ ಒಟ್ಟಿಗೆ ಇರುತ್ತೇವೆ. ಪ್ರತಿಯೊಂದು ಕ್ಷಣವನ್ನು ಅನುಭವಿಸೋಣ ಅವರು ಹೇಳಿದ್ದರು. ಇವರು ನೋಡಿದರೆ, ಹೆಂಗಸರು ಅಂದರೆ ಬಾಯಿ ಬಿಡುತ್ತಿದ್ದರು. ಎಲ್ಲ ರೀತಿಯಲ್ಲೂ ನಾನು ಕೇಳಿಕೊಂಡಿದ್ದೆ ಎಂದು ಅವರು ಹೇಳಿದ್ದಾರೆ.

VIDEO CREDIT : POWER TV