Ramya : ರಾಹುಲ್ ಗಾಂಧಿಗೆ ಇಡಿ ಡ್ರಿಲ್..! ರಾಹುಲ್ ಪರ ಟ್ವಿಟ್ ಮಾಡಿದ ರಮ್ಯಾಗೆ ನೆಟ್ಟಿಗರಿಂದ ಕ್ಲಾಸ್
Updated:Friday, June 17, 2022, 21:41[IST]

ಹೌದು ಸಂಸದ ರಾಹುಲ್ ಗಾಂಧಿಯವರ ಮೇಲೆ ಇಡಿ ಅಧಿಕಾರಿಗಳು ನ್ಯಾಷನಲ್ ಹೆರಾಲ್ಡ್ ಪ್ರಕರಣದ ಕುರಿತು ಇದಕ್ಕೆ ಸಂಬಂಧಿಸಿದಂತೆ ಹಣ ವರ್ಗಾವಣೆ ಆಗಿರುವುದಾಗಿ ಕಂಡು ಬಂದಿದ್ದು ಈ ಆರೋಪದಡಿ ರಾಹುಲ್ ಗಾಂಧಿ ಅವರನ್ನು ವಿಚಾರಣೆಗೆಂದು ಕರೆದಿದ್ದಾರೆ ಎನ್ನಲಾಗಿದೆ. ಈ ವಿಚಾರ ಕೇಳಿ ಬರುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ವಿಚರಣೆಗೆ ವಿರುದ್ಧವಾಗಿ ಹೋರಾಟ ಪ್ರತಿಭಟನೆಯನ್ನು ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಹೌದು ಇದೆಲ್ಲದರ ನಡುವೆ ಕನ್ನಡ ಚಿತ್ರರಂಗದ ಖ್ಯಾತ ನಟಿ ಮಾಜಿ ಸಂಸದೆ ಸ್ಯಾಂಡಲ್ ವುಡ್ ಕ್ವೀನ್ ನಟಿ ರಮ್ಯಾ ಅವರು ರಾಹುಲ್ ಗಾಂಧಿಯವರ ವಹಿಸಿಕೊಂಡು ಬ್ಯಾಟ್ ಬೀಸಿದ್ದಾರೆ.
ಇದೇ ವಿಚಾರವಾಗಿ ನಟಿ ರಮ್ಯಾ ಅವರು ಟ್ವೀಟ್ ಮಾಡಿದ್ದು ರಾಹುಲ್ ಗಾಂಧಿಯವರ ವಿರುದ್ಧವಾಗಿ ಸುಮ್ಮನೆ ಸುಳ್ಳು ಆಪಾದನೆಯನ್ನು ಹೊರಿಸಲಾಗುತ್ತಿದೆ ಎಂದು ಹೇಳಿ ತಮ್ಮ ಆಕ್ರೋಶವನ್ನು ಹೊರಹಾಕಿ, ನಾನು ರಾಹುಲ್ ಗಾಂಧಿ ಅವರ ಜೊತೆ ತುಂಬಾ ಹತ್ತಿರದಿಂದ ಕೆಲಸ ನಿರ್ವಹಿಸಿದ್ದೇನೆ. ನಾನು ನೋಡಿದ ಪ್ರಕಾರ ರಾಹುಲ್ ಗಾಂಧಿ ಅವರು ಭ್ರಷ್ಟರು ಎಂದೆನಿಸಿಲ್ಲ, ಜೊತೆಗೆ ಅವರು ಭ್ರಷ್ಟರು ಕೂಡ ಅಲ್ಲವೆ ಅಲ್ಲ ಎನಿಸುತ್ತದೆ. ಎಂದಿಗೂ ಅವರು ದುರಾಸೆಯ ಪಟ್ಟವರು ಅಲ್ಲವೇ ಅಲ್ಲ. ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ರೀತಿ ಅವರನ್ನು ನಡೆಸಿಕೊಳ್ಳುವುದು ಸರಿಯಲ್ಲ ಎಂದಿದ್ದಾರೆ. ಜೊತೆಗೆ ರಾಹುಲ್ ಗಾಂಧಿ ಅವರ ಹೆಸರಿಗೆ ದಕ್ಕೆ ಮಾಡಲು ಅವರ ಹೆಸರಿಗೆ ಕಳಂಕ ತರಲು ಈ ರೀತಿಯಾಗಿ ಹೇಳಿಕೊಂಡು ವಿನಾಕಾರಣ ಈ ಪ್ರಕರಣಕ್ಕೆ ಅವರನ್ನು ಅಡ್ಡ ತಂದು ಎಳೆಯಲಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ ನಟಿ ರಮ್ಯಾ.
ಹೌದು ನಟಿ ರಮ್ಯಾ ಅವರು ರಾಹುಲ್ ಗಾಂಧಿ ವಿರುದ್ದ ಹೇಳುತ್ತಿರುವ ಮಾತುಗಳು ಎಲ್ಲ ಶುದ್ಧ ಸುಳ್ಳು ಎನ್ನುತ್ತಾರೆ. ಆದ್ರೆ ಹೆಚ್ಚು ಜನರು ರಮ್ಯಾ ಅವರ ಮಾತಿಗೆ ಪ್ರತಿಕ್ರಿಯೆ ನೀಡಿದ್ದು, ನಿಮಗೆ ಸರಿಯಾಗಿ ಗೊತ್ತಿಲ್ಲ. ಭಾವನಾತ್ಮಕವಾಗಿ ಮಾತನಾಡಬೇಡಿ. ಸರಿಯಾಗಿ ತಿಳಿದುಕೊಂಡು ಈ ಕುರಿತು ಮಾತನಾಡಿ. ರಾಹುಲ್ ಗಾಂಧಿಯವರ ಕುಟುಂಬ ಈ ನ್ಯಾಷನಲ್ ಹೆರಾಲ್ಡ್ ವಿಚಾರದಲ್ಲಿ ಏನೆಲ್ಲ ಮಾಡಿದೆ ಎಂದು ನಿಮಗೆ ಗೊತ್ತಿಲ್ಲ. ಅದರ ಮೋಸದ ವಿಚಾರ ಈ ಚಾರ್ಟ್ ಮೂಲಕ ನಿಮಗೆ ತಿಳಿಯಬಹುದು ಎಂದು ನಟಿಗೆ ಕೆಲವರು ಪ್ರತಿಕ್ರಿಯಿಸಿದ್ದಾರೆ. ನಿಮ್ಮ ಪ್ರೀತಿ ವಿಶ್ವಾಸ ಇನ್ನೊಂದು ಕಡೆ ಇರಲಿ, ಎಲ್ಲವನ್ನೂ ಸರಿಯಾಗಿ ತಿಳಿದು ಮಾತನಾಡಿ ಎಂದು ಕಿಡಿಕಾರಿದ್ದು, ಇವರ ಮಾತಿಗೆ ನಟಿ ರಮ್ಯಾ ಇನ್ನೂ ಯಾವ ಪ್ರತಿಕ್ರಿಯೆ ಸಹ ನೀಡಿಲ್ಲ. ಪ್ರತಿಕ್ರಿಯೆ ನೀಡುತ್ತಾರ ಕಾದು ನೋಡಬೇಕು. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ ಹಾಗೆ ಮಾಹಿತಿ ಶೇರ್ ಧನ್ಯವಾದಗಳು...