Ramya : ರಕ್ಷಿತ್ ಶೆಟ್ಟಿಗೆ ನಾನು ಕಾಯುತ್ತಿದ್ದೇನೆ ಅಂದ್ರಾ ನಟಿ ರಮ್ಯಾ..? ಟ್ವಿಟ್ ಮೂಲಕ ಗುಸು ಗುಸು ಎದ್ದ ಸುದ್ದಿ

By Infoflick Correspondent

Updated:Wednesday, May 11, 2022, 15:33[IST]

Ramya : ರಕ್ಷಿತ್ ಶೆಟ್ಟಿಗೆ ನಾನು ಕಾಯುತ್ತಿದ್ದೇನೆ ಅಂದ್ರಾ ನಟಿ ರಮ್ಯಾ..? ಟ್ವಿಟ್ ಮೂಲಕ ಗುಸು ಗುಸು ಎದ್ದ ಸುದ್ದಿ

ಕನ್ನಡ ಚಿತ್ರರಂಗದ ಇನ್ನೊಬ್ಬ ಖ್ಯಾತ ಯುವ ನಾಯಕ ನಟ ನಿರ್ದೇಶಕ ರಕ್ಷಿತ್ ಶೆಟ್ಟಿ ಇದೀಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಹೌದು ರಕ್ಷಿತ್ ಶೆಟ್ಟಿ ಅವರು ಸಿಂಪಲ್ ಸ್ಟಾರ್ ಎಂದು ಕನ್ನಡ ಚಿತ್ರರಂಗದಲ್ಲಿ ಬಿರುದು ಪಡೆದುಕೊಂಡಿದ್ದು ಇವರಿಗೂ ಕೂಡ ಅಪಾರ ಅಭಿಮಾನಿ ಬಳಗ ಇರುವುದು ಅಷ್ಟೇ ಸತ್ಯ. ನಟ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರು ಅವನೆ ಶ್ರೀಮನ್ನಾರಾಯಣ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆದರು. ಮುಂಚೆ ಮಾಡುತ್ತಿದ್ದ ಎಲ್ಲಾ ಸಿನಿಮಾಗಳು ತುಂಬಾನೇ ಅದ್ಭುತವಾಗಿದ್ದರೂ ಕೂಡ ಎಲ್ಲಾ ಜನರಿಗೆ ತಲುಪುವಲ್ಲಿ ತಡವಾಯಿತು ಎಂದು ಹೇಳಬಹುದು. ರಕ್ಷಿತ್ ಶೆಟ್ಟಿ ನಟ ಮಾತ್ರ ಅಲ್ಲದೆ ಅತ್ಯದ್ಭುತ ನಿರ್ದೇಶಕ ಸಹ ಹೌದು.  

ಕಿರಿಕ್ ಪಾರ್ಟಿ ಮೂಲಕ ಕನ್ನಡಿಗರ ಮನೆಮಾತಾದ ರಕ್ಷಿತ್ ಶೆಟ್ಟಿ ಅವರ ಮುಂದಿನ ಚಿತ್ರ ಚಾರ್ಲಿ 777 ಸಿನಿಮಾದ ಟ್ರೈಲರ್ ಇದೀಗ ಇದೆ 16ನೇ ತಾರೀಕು ಭರ್ಜರಿಯಾಗಿ ಎಂಟ್ರಿ ಕೊಡುತ್ತಿದೆ. ಕನ್ನಡ ಪ್ರಿಯರು ಮಾತ್ರವಲ್ಲದೆ ತೆಲುಗು, ತಮಿಳು, ಹಿಂದಿ, ಹೀಗೆ ಬೇರೆಬೇರೆ ಚಿತ್ರರಂಗದವರು ಕೂಡ ಚಾರ್ಲಿ 777 ಸಿನಿಮಾದ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ ಎನ್ನಲಾಗುತ್ತಿದೆ. ಈ ಸಿನಿಮಾದ ಟ್ರೈಲರ್ ಹೇಗಿರಬಹುದು ಎಂದು ಎಲ್ಲರೂ ಕಾತುರದಿಂದ ಎದುರು ನೋಡುತ್ತಿದ್ದಾರೆ. ಹೌದು ಈ ವಿಚಾರವನ್ನು ಟ್ವಿಟ್ಟರ್ ಮೂಲಕ ರಕ್ಷಿತ್ ಶೆಟ್ಟಿ ಅವರು ಹಂಚಿಕೊಂಡಿದ್ದು, ಎಲ್ಲರೂ ಶುಭ ಕೋರಿದ್ದಾರೆ. 

ಕನ್ನಡ ಚಿತ್ರರಂಗದ ಖ್ಯಾತ ನಟಿ ರಮ್ಯಾ ಅವರು ಕೂಡ ನಿಮ್ಮ ಸಿನಿಮಾಗಾಗಿ ನಾನು ಕಾಯುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಮರು ಟ್ವೀಟ್ ಮಾಡಿದ ರಕ್ಷಿತ್ ಶೆಟ್ಟಿ ಧನ್ಯವಾದ ತಿಳಿಸಿದ್ದಾರಂತೆ. ಈ ಮುಂಚೆಯೇ ಇವರಿಬ್ಬರೂ ಮದುವೆಯಾಗಲಿದ್ದಾರೆ ಎನ್ನುವ ಗಾಳಿ ಸುದ್ದಿ ಹರಿದಾಡಿತ್ತು. ಅದಕ್ಕೆ ಇದು ಪುಷ್ಟಿ ಎಂಬಂತೆ ಕಾಣುತ್ತಿದೆ ಎಂದು ನೆಟ್ಟಿಗರು ಹೇಳುತ್ತಿದ್ದು ಮುಂದಿನ ದಿನಗಳಲ್ಲಿ ಏನೆಲ್ಲಾ ಆಗುತ್ತದೆಂದು ಕಾದುನೋಡಬೇಕು. ಇದೀಗ ಕನ್ನಡದ ನಮ್ಮ ಚಾರ್ಲಿ 777 ಸಿನಿಮಾ ಸಹ ದೊಡ್ಡ ಮಟ್ಟದಲ್ಲಿ ಹಿಟ್ ಆಗಲಿ ಎಂದು ಹಾರೈಸಿ ಧನ್ಯವಾದಗಳು..