Ramya :ಸ್ಯಾಂಡಲ್ ವುಡ್ ಕ್ವೀನ್ ನಟಿ ರಮ್ಯಾ ಮದುವೆ ಯಾರ ಜೊತೆ ಗೊತ್ತಾ..?

By Infoflick Correspondent

Updated:Sunday, May 1, 2022, 10:12[IST]

Ramya :ಸ್ಯಾಂಡಲ್ ವುಡ್ ಕ್ವೀನ್ ನಟಿ ರಮ್ಯಾ ಮದುವೆ ಯಾರ ಜೊತೆ ಗೊತ್ತಾ..?

ಸಿನಿಮಾ ಮತ್ತು ರಾಜಕೀಯ ನನ್ನ ಜೀವನದಲ್ಲಿ ಮುಳುಗಿ ಹೋದ ಹಡಗು ಎಂದಿದ್ದ ನಟಿ, ಮಾಜಿ ಸಂಸದೆ ರಮ್ಯಾ. ನಟಿ ರಮ್ಯಾ ಹಲವು ದಿನಗಳ ಬಳಿಕ ಇತ್ತೀಚೆಗೆ ಇನ್ ಸ್ಟಾಗ್ರಾಂನಲ್ಲಿ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ಕೆಲ ದಿನಗಳ ಹಿಂದೆ ಅಭಿಮಾನಿಗಳ ಪ್ರ ಶ್ನೋತ್ತರಾವಳಿ ನಡೆಸಿದ್ದಾರೆ. ಈ ವೇಳೆ ರಮ್ಯಾ ಅಭಿಮಾನಿಗಳ ಕುತೂಹಲದ ಪ್ರಶ್ನೆಗಳಿಗೆ ಸಮಾಧಾನದಿಂದಲೇ ಉತ್ತರಿಸಿದ್ದಾರೆ. 

ಕೆಲ ಸಮಯದಿಂದ ಮತ್ತೆ ಸ್ಯಾಂಡಲ್ ವುಡ್ ನ ಸಂಪರ್ಕದಲ್ಲಿರಲು ಪ್ರಯತ್ನಿಸುತ್ತಿರುವ ರಮ್ಯಾ ಅವರು, ಪುನೀತ್ ರಾಜ್ ಕುಮಾರ್ ಅವರ ಅಂತಿಮ ದರ್ಶನವನ್ನು ಪಡೆದು, ಮಾಧ್ಯಮದ ಜೊತೆಗೆ ಮಾತನಾಡಿದ್ದರು. ಬಳಿಕ ನಟಿ ಅಮೂಲ್ಯ ಸೀಮಂತ ಕಾರ್ಯಕ್ರಮಕ್ಕೆ ಭೇಟಿ ಕೊಟ್ಟಿದ್ದರು. ಸೀರೆಯನ್ನು ಸಹ ಅಮೂಲ್ಯಗೆ ಗಿಫ್ಟ್ ಮಾಡಿದ್ದರು. ಇನ್ನು ರಕ್ಷಿತಾ ಪ್ರೇಮ್ ಗೆ ಹುಟ್ಟುಹಬ್ಬಕ್ಕೆ ವಿಶ್ ಮಾಡಿ ಅವರಿಗೂ ಉಡುಗೊರೆಯನ್ನು ನೀಡಿದ್ದರು.     

ಇನ್ನು ಸೋಶಿಯಲ್ ಮೀಡಿಯಾದಲ್ಲಿ, ನೀವು ಮದುವೆ ಆಗಿದ್ದೀರಾ? ಡೇಟಿಂಗ್ ಮಾಡುತ್ತೀರಾ? ಬಾಯ್ ಫ್ರೆಂಡ್ ಇದ್ದಾರೆಯೇ ಎಂಬೆಲ್ಲಾ ಪ್ರಶ್ನೆಗಳ ಸುರಿಮಳೆಗೆ ಒಂದೇ ಮಾತಿನಲ್ಲಿ ‘ಇಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ. ನಿಮ್ಮ ಮದುವೆ ಯಾವಾಗ ಎಂಬ ಪ್ರಶ್ನೆ ನೋಡಿ ನೋಡಿ ಬೇಸತ್ತ ರಮ್ಯಾ ‘ಅಬ್ಬಾ.. ಮದುವೆ.. ಮದುವೆ.. ಎಲ್ಲಿ ಹೋದರೂ ಇದೇ ಪ್ರಶ್ನೆ. ಜೀವನದಲ್ಲಿ ಮದುವೆ ಇಲ್ಲದೇ ಖುಷಿಯಾಗಿರಕ್ಕಾಗಲ್ವಾ?’ ಎಂದು ಮರು ಪ್ರಶ್ನೆ ಹಾಕಿದ್ದಾರೆ. ಇನ್ನು ಹಲವರು ಅವರ ಮೈಕಾಂತಿ ಬಗ್ಗೆ ಪ್ರಶ್ನಿಸಿದ್ದಾರೆ. ಅದು ನನಗಿಷ್ಟ ಎಂದು ರಮ್ಯಾ ಹೇಳಿಕೊಂಡಿದ್ದಾರೆ. 

ಅಂದಹಾಗೆ ಬಿಡುವಿನ ವೇಳೆಯಲ್ಲಿ ನಾಯಿಯೊಂದಿಗೆ ಕಾಲ ಕಳೆಯುತ್ತಾರಂತೆ. ಹಾಗೆಯೇ ಮಾತಿನ ಮದ್ಯೆ ತಮ್ಮ ಸ್ವಭಾವವೊಂದನ್ನು ಹೇಳಿಕೊಂಡಿರುವ ಅವರು, ‘ನನಗೆ ಭಾವನೆಗಳನ್ನು ನಿಯಂತ್ರಿಸುವುದು ಅಸಾಧ್ಯ. ಅದರಲ್ಲಿ ಅಸಮರ್ಥಳಿದ್ದೇನೆ’ಎಂದು ಹೇಳಿಕೊಂಡಿದ್ದಾರೆ. ಅಭಿಮಾನಿಯೊಬ್ಬ ನೀವೇಕೆ ರಕ್ಷಿತ್ ಶೆಟ್ಟಿ ಅವರನ್ನ ಮದುವೆ ಆಗಬಾರದು ಎಂಬ ಪ್ರಶ್ನೆಗೆ ರಕ್ಷಿತ್ ಅವರ ಇನ್ಸ್ಟಾಗ್ರಾಂ ಖಾತೆಯನ್ನು ಟ್ಯಾಗ್ ಮಾಡಿ ನಗುವಿನ ಇಮೋಜಿ ಹಾಕಿ ಸುಮ್ಮನಾಗಿದ್ದಾರೆ. ಹೀಗೆ ಕೆಲಕಾಲ ರಮ್ಯಾ ಜಾಲತಾಣಗಳ ಮೂಲಕ ಅಭಿಮಾನಿಗಳ ಗಮನ ಸೆಳೆದರು.