KGF 3 Yash : ಕೊನೆಗೂ ಹೊರಬಿತ್ತು ಕೆಜಿಎಫ್ 3 ರ ಖಳ ನಾಯಕ ಯಾರೆಂದು..? ಯಶ್ ಟ್ವಿಟ್ ವೈರಲ್

By Infoflick Correspondent

Updated:Sunday, May 8, 2022, 16:36[IST]

KGF 3 Yash : ಕೊನೆಗೂ ಹೊರಬಿತ್ತು ಕೆಜಿಎಫ್ 3 ರ ಖಳ ನಾಯಕ ಯಾರೆಂದು..? ಯಶ್ ಟ್ವಿಟ್ ವೈರಲ್

ಕನ್ನಡದ ಕೆಜಿಎಫ್ ಗೋಲ್ಡನ್ ಚಿತ್ರ ಇದೀಗ ವಿಶ್ವಮಟ್ಟದಲ್ಲಿ ಸದ್ದು ಮಾಡುತ್ತಿದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಭಾಗ-2 ವಿಶ್ವದಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ನಿರ್ದೇಶಕ ಪ್ರಶಾಂತ್ ನೀಲ್ ಅವರು ಕೆಜಿಎಫ್ ಸಿನಿಮಾವನ್ನ ದೊಡ್ಡ ಮಟ್ಟಕ್ಕೆ ಕರೆದುಕೊಂಡು ಹೋಗಿದ್ದಾರೆ ಎಂದು ಹೆಮ್ಮೆಯಿಂದ ಹೇಳಬಹುದು. ಕನ್ನಡ ಸಿನಿರಂಗದ ಕಡೆ ಪೂರ್ತಿ ಪ್ರಪಂಚವೇ ತಿರುಗಿ ನೋಡುವಂತೆ ಸಿನಿಮಾ ಮಾಡಿದ್ದಾರೆ ನೀಲ್ ಎನ್ನಬಹುದು.. ಕೆಜಿಎಫ್ ಭಾಗ-1 ದೊಡ್ಡದಾಗಿ ಹಿಟ್ ಆಗಿತ್ತು. ಭಾಗ-2 ಸಹ ಅದಕ್ಕಿಂತ ದೊಡ್ಡ ಮಟ್ಟದಲ್ಲಿ ಈಗ ಹಿಟ್ ಆಗಿದೆ. ಸಾವಿರ ಕೋಟಿ ಕಲೆಕ್ಷನ್ ಮಾಡಿ ಬಾಕ್ಸಾಫೀಸಿನಲ್ಲಿ ತೂಫಾನ್ ಎಬ್ಬಿಸುತಿದೆ.

ಕೆಜಿಎಫ್ ಭಾಗ-2 ಸಿನಿಮಾ ಕ್ಲೈಮ್ಯಾಕ್ಸ್ ನಲ್ಲಿ ಕೆಜಿಎಫ್ ಭಾಗ-3 ಬರುವ ಮುನ್ಸೂಚನೆಯ ಕೊಟ್ಟಿದೆ ಚಿತ್ರತಂಡ. ಕೆಜಿಎಫ್ ಭಾಗ-3 ಹಾಗೇನಾದರೂ ಒಂದು ವೇಳೆ ಬಂದರೆ ಕೆಜಿಎಫ್ ಭಾಗ 3 ಸಿನಿಮಾದಲ್ಲಿ ಯಾರು ವಿಲನ್ ಆಗುತ್ತಾರೆ ಎಂದು ಈಗಾಗಲೇ ಕೆಜಿಎಫ್ ನ ಅಭಿಮಾನಿಗಳು ಚರ್ಚೆ ಮಾಡುತ್ತಿದ್ದಾರೆ. ಹೌದು ನಟ ರಾಣಾ ದಗ್ಗುಬಾಟಿಯವರು ಕೆಜಿಎಫ್ ಮೂರರಲ್ಲಿ ಖಳನಾಯಕ ಆಗುತ್ತಾರಂತೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಕಾರಣ ನಟ ಯಶ್ ಮಾಡಿರುವ ಅದೊಂದು ಟ್ವೀಟ್ ಎಂದು ಹೇಳಬಹುದು. ಕೆಜಿಎಫ್ ಭಾಗ-2 ನೋಡಿದ ರಾಣಾ ದಗ್ಗುಬಾಟಿ ಟ್ವಿಟರ್ನಲ್ಲಿ ಸಿನಿಮಾ ಚೆನ್ನಾಗಿ ಮೂಡಿಬಂದಿದೆ, ನೀವು ಮತ್ತೊಮ್ಮೆ ಸಾಧಿಸಿದ್ದೀರಿ, ಇಡೀ ಕೆಜಿಎಫ್ ತಂಡಕ್ಕೆ ಅಭಿನಂದನೆಗಳು ಎಂದಿದ್ದಾರೆ.  

ಬಳಿಕ ಯಶ್, ಧನ್ಯವಾದ ಸಹೋದರ ಇಷ್ಟರಲ್ಲಿಯೇ ನಾವು ಭೇಟಿಯಾಗೋಣ ಎಂಬುದಾಗಿ ಟ್ವಿಟರ್ ನಲ್ಲೆ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನು ನೋಡಿದ ಕೆಜಿಎಫ್ ಅಭಿಮಾನಿಗಳು ಕೆಜಿಎಫ್ ಭಾಗ ಮೂರರಲ್ಲಿ ರಾಣಾ ದಗ್ಗುಬಾಟಿ ಅವರೇ ವಿಲನ್ ಆಗಿ ಧೂಳೆಬ್ಬಿಸುವ ಸಾಧ್ಯತೆಯಿದೆ. ಕೆಜಿಎಫ್ ಭಾಗ ಎರಡರಲ್ಲಿ ಕೆಲವೊಂದಿಷ್ಟು ದೃಶ್ಯಗಳನ್ನು, ರಾಕಿಂಗ್ ಸ್ಟಾರ್ ಯಶ್ ಅವರ ವೈಭವವನ್ನು ತೋರಿಸಲು ಆಗಿಲ್ಲ. ಹಾಗಾಗೆ ಒಂದು ವೇಳೆ ಕೆಜಿಎಫ್ ಭಾಗ-3 ಬಂದರೆ ಯಾರು ಕೂಡ ನಿನ ಅಚ್ಚರಿ ಪಡಬೇಡಿ ಎನ್ನುತ್ತಿದ್ದಾರೆ. ಈ ಮಾಹಿತಿ ಬಗ್ಗೆ ನಿಮಗೆ ತಿಳಿಸಿ. ಕೆಜಿಎಫ್ ಭಾಗ-3 ಬರಬೇಕಾ ಬೇಡ್ವ ಎಂದು ಕಮೆಂಟ್ ಮಾಡಿ ಧನ್ಯವಾದಗಳು...

  Rana daggu bati on Twitter: Wild wild men you'll have done it again!! Yash and Prashanth Neel well done huge Congratulations team #KGF 2.

 

KGF 3 Yash : ಕೊನೆಗೂ ಹೊರಬಿತ್ತು ಕೆಜಿಎಫ್ 3 ರ ಖಳ ನಾಯಕ ಯಾರೆಂದು..? ಯಶ್ ಟ್ವಿಟ್ ವೈರಲ್