ರಂಜನಿ ರಾಘವನ್ ಮೈತುಂಬ ರಕ್ತ! ನಿಜವಾಗಿ ಆದ ಘಟನೆ ಏನು  ? 

By Infoflick Correspondent

Updated:Sunday, April 24, 2022, 13:03[IST]

ರಂಜನಿ ರಾಘವನ್  ಮೈತುಂಬ ರಕ್ತ! ನಿಜವಾಗಿ ಆದ ಘಟನೆ ಏನು  ? 

ಕನ್ನಡತಿ' ಧಾರಾವಾಹಿ ಖ್ಯಾತಿಯ ರಂಜನಿ ರಾಘವನ್( ಭುವಿ) ಎಲ್ಲರಿಗೂ ಚಿರಪರಿಚಿತ. ‌ಇವರು ಕಲಾವಿದರು ಅಷ್ಟೇ ಅಲ್ಲದೆ ಕಥೆಗಾರ್ತಿಯೂ ಹೌದು. ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಸದಾ ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಇರುವ ಭುವಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ರಕ್ತಮಯವಾಗಿದ್ದು ಕ್ಷಣಕಾಲ ಗಾಬರಿ ಪಡಿಸುತ್ತದೆ. 

ಈ ವಿಡಿಯೋದಲ್ಲಿ ಅವರ ಕೈ ತೋಳು ಹರಿದಿದೆ. ಹಣೆಯಿಂದ ರಕ್ತ ಒಂದೇ ಸಮನೆ ಸುರಿಯುತ್ತಿದೆ. ರಂಜನಿ ಗೆ ಏನೊ ಆಗಿದೆಯೇ ? ಧಾರಾವಾಹಿ ಭುವಿಗೆ ಏನು ಆಗಿದೆ ? ಎಂಬ ಪ್ರಶ್ನೆ ವಿಡಿಯೋ ನೋಡಿದಾಗ ಅನ್ನಿಸುತ್ತದೆ. ವಿಡಿಯೋ ನೋಡಿದ ಕೆಲವರು ಆತಂಕ ಹೊರಹಾಕಿದ್ದಾರೆ. ಅಸಲಿ ವಿಚಾರ ಗೊತ್ತಿರುವವರು ವಿಡಿಯೋ ನೋಡಿ ನಕ್ಕಿದ್ದಾರೆ. 

ಶೂಟಿಂಗ್​ಗಾಗಿ ಅವರು ಈ ರೀತಿ ಅವತಾರ ತಾಳಿದ್ದಾರೆ.‌ ದೃಶ್ಯ ಹೀಗಿದೆ; ಭುವಿಯನ್ನು ಸುಪಾರಿ ಕಿಲ್ಲರ್ ತಳ್ಳಿದ್ದಾನೆ. ಭುವಿಯ ಪ್ರಾಣಕ್ಕೆ ಸಂಚಕಾರ ಎದುರಾಗಿದೆ. ಆಕೆಯನ್ನು ಐಸಿಯುನಲ್ಲಿ ಅಡ್ಮಿಟ್ ಮಾಡಲಾಗಿದೆ. ಭುವಿ ಬೀಳುವ ಸಂದರ್ಭದಲ್ಲಿ ಆಕೆಯ ಜತೆ ಇದ್ದಿದ್ದು ವರುಧಿನಿ. ಈ ಕಾರಣಕ್ಕೆ ವರುಧಿನಿ ವಿರುದ್ಧ ಹರ್ಷ ಸಿಟ್ಟಾಗಿದ್ದಾನೆ.   

ವರುಧಿನಿ (ಸಾರಾ ಅಣ್ಣಯ್ಯ) ಹಾಗೂ ಭುವಿ (ರಂಜನಿ) ಗುಡ್ಡ ಏರಿದ್ದರು. ಭುವಿಯನ್ನು ಹತ್ಯೆ ಮಾಡಲು ಸಾನಿಯಾ ಸುಪಾರಿ ನೀಡಿದ್ದಳು. ಅಂತೆಯೇ ಸುಪಾರಿ ಕಿಲ್ಲರ್ ಭುವಿಯನ್ನು ಬೆಟ್ಟದಿಂದ ತಳ್ಳಿದ್ದಾನೆ. ಆಕೆಯನ್ನು ವರು ರಕ್ಷಣೆ ಮಾಡಿದ್ದಾಳೆ. ಕಲ್ಲು ಬಂಡೆಯ ಮೇಲೆ ಅಂಗಾತ ಮಲಗಿದ್ದಳು ಭುವಿ. ಆಗ ಅವಳ ಹಣೆಯಲ್ಲಿ ರಕ್ತ ಸುರಿಯುತ್ತಿತ್ತು. ರಂಜನಿ ಹಂಚಿಕೊಂಡಿರುವ ವಿಡಿಯೋ ಈ ದೃಶ್ಯದ ಶೂಟಿಂಗ್ ಸಂದರ್ಭದಲ್ಲಿ ಸೆರೆ ಹಿಡಿದಿದ್ದು. 

ಈ ವಿಡಿಯೋಗೆ ಭುವಿ ಸಖತ್ ಫನ್ನಿಯಾಗಿ ಕ್ಯಾಪ್ಶನ್ ನೀಡಿದ್ದಾರೆ. 'ಅಮ್ಮಮ್ಮ- ನೋಡು ನಿನ್ ಅವತಾರ. ನಾನು- ಎರಡು ಕಣ್ಣು ಸಾಲ್ತಿಲ್ಲ. ಬಿಂದು- ಇರಿ, ಇದನ್ನೆಲ್ಲಾ ವಿಡಿಯೋ ಮಾಡ್ತೀನಿ' ಎಂದು ಬರೆದುಕೊಂಡಿದ್ದಾರೆ.‌