ಸೈಮಾ ಅವಾರ್ಡ್ ಸಮಾರಂಭದಲ್ಲಿ ರಣವೀರ್ ಸಿಂಗ್ ಗೆ ಕಪಾಲಮೋಕ್ಷ! ಕೆನ್ನೆಗೆ ಹೊಡೆದವರ್ಯಾರು ?

By Infoflick Correspondent

Updated:Monday, September 12, 2022, 18:48[IST]

ಸೈಮಾ ಅವಾರ್ಡ್ ಸಮಾರಂಭದಲ್ಲಿ ರಣವೀರ್ ಸಿಂಗ್ ಗೆ ಕಪಾಲಮೋಕ್ಷ! ಕೆನ್ನೆಗೆ ಹೊಡೆದವರ್ಯಾರು ?

ಮೊದಲ ಬಾರಿಗೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರತಿಷ್ಠಿತ 'ಸೈಮಾ' ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಲು ಎಲ್ಲಾ ಚಿತ್ರರಂಗದ ನಟ-ನಟಿಯರು, ನಿರ್ಮಾಪಕರು-ನಿರ್ದೇಶಕರು ಆಗಮಿಸಿದ್ದರು. 

ಮೊದಲನೇ ದಿನ ಕನ್ನಡ ಮತ್ತು ತೆಲುಗು ನಟರ ಜೊತೆಗೆ ಬಾಲಿವುಡ್ ನಟ ರಣವೀರ್ ಸಿಂಗ್‍ ಕಾಣಿಸಿಕೊಂಡು ಮಿಂಚಿದರು. ವೈಟ್ ಅಂಡ್ ವೈಟ್ ಸೂಟ್ ಧರಿಸಿ 'ಸೈಮಾ' ಕಾಣಿಸಿಕೊಂಡ ರಣವೀರ್ ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು. ಇದೇ ವೇಳೆ ನಟನಿಗೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ಅತಿಹೆಚ್ಚು ಪ್ರೀತಿಸಲ್ಪಡುವ ಹಿಂದಿ ನಟನೆಂಬ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಖತ್ ಮಿಂಚಿದ ಹಿಂದಿ ನಟನ ಕೆನ್ನೆಗೆ ಏಟು ಬಿದ್ದಿರುವ ಘಟನೆ ನಡೆದಿದೆ.

ವರದಿಗಳ ಪ್ರಕಾರ 'ಸೈಮಾ' ಕಾರ್ಯಕ್ರಮದ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ನಟ ರಣವೀರ್ ಸಿಂಗ್ ನಂತರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿದ್ದರು. ಈ ವೇಳೆ ತಮ್ಮ ನೆಚ್ಚಿನ ನಟನ ಜೊತೆಗೆ ಅಭಿಮಾನಿಗಳು ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದಿದ್ದರು. ಈ ಸಂದರ್ಭದಲ್ಲಿ ತಳ್ಳಾಟ-ನೂಕಾಟ ನಡೆದು ಅಕಸ್ಮಿಕವಾಗಿ ರಣವೀರ್ ಸಿಂಗ್ ಕೆನ್ನೆಗೆ ಏಟು ಬಿದ್ದಿದೆ ಎನ್ನಲಾಗಿದೆ. ರೆಡ್ ಕಾರ್ಪೆಟ್ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ.

ರಣವೀರ್ ಸಿಂಗ್ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿರುವಾಗ ಅಭಿಮಾನಿಯೊಬ್ಬ ಆಕಸ್ಮಿಕವಾಗಿ ರಣವೀರ್ ಮುಖಕ್ಕೆ ಹೊಡೆದಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ರಣವೀರ್ ಸಿಂಗ್‍ಗೆ ಯಾವುದೇ ರೀತಿಯ ಅಪಾಯವುಂಟಾಗಿಲ್ಲ. ಘಟನೆಯಿಂದ ಕೊಂಚ ಕಸಿವಿಸಿಗೊಂಡ ರಣವೀರ್ ಅಭಿಮಾನಿಗಳ ಕೈಯಿಂದ ಪಾರಾಗಿದ್ದಾರೆ.