ರಶ್ಮಿಕಾ ಮದುವೆ ಆದ್ಮೇಲೆ ವಿಚ್ಛೇದನ ಆಗಬಹುದಂತೆ..! ಹೀಗಂತ ಹೇಳಿದವರು ಇವರೇ ನೋಡಿ..!
Updated:Saturday, April 9, 2022, 20:16[IST]

ಸ್ಯಾಂಡಲ್ವುಡ್ನ ಖ್ಯಾತ ನಟಿ ರಶ್ಮಿಕಾ ಮಂದಣ್ಣ ಅವರ ಮದುವೆ ವಿಚಾರ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕನ್ನಡ ಸಿನಿ ರಂಗದ ಮೂಲಕ ಎಂಟ್ರಿ ಪಡೆದ ನಟಿ ರಶ್ಮಿಕಾ ಮಂದಣ್ಣ ಅವರು ಇದೀಗ ಹೆಚ್ಚು ಬಾಲಿವುಡ್, ತೆಲುಗು, ತಮಿಳು ಚಿತ್ರರಂಗದಲ್ಲಿ ಹೆಚ್ಚಾಗಿ ಮಿಂಚುತ್ತಿದ್ದಾರೆ. ಅಮಿತಾ ಬಚ್ಚನ್ ಅವರ ಜೊತೆ ಸ್ಕ್ರೀನ್ ಶೇರ್ ಮಾಡಿಕೊಳ್ಳುತ್ತಿರುವ ನಟಿ ರಶ್ಮಿಕಾ ಮಂದಣ್ಣ ಅವರು ಇದೀಗ ತುಂಬಾನೇ ಪ್ರಖ್ಯಾತಿ ಪಡೆದ ನಟಿ. ರಶ್ಮಿಕ ಮಂದಣ್ಣ ಅವರ ವಿಚಾರವಾಗಿ ಕಳೆದ ಕೆಲವು ತಿಂಗಳ ಹಿಂದೆ ಒಂದು ಪೂಜೆ ಮಾಡಿಸಿರುವುದರ ಬಗ್ಗೆ ತಿಳಿದುಬಂದಿತ್ತು. ಹೌದು ಆಂಧ್ರಪ್ರದೇಶದ ಖ್ಯಾತ ಗುರೂಜಿ ವೇಣು ಸ್ವಾಮಿ ಅವರಿಂದ ರಶ್ಮಿಕ ಮಂದಣ್ಣ ಅವರು ತಾರಾ ಪೂಜೆ ಮಾಡಿಸಿದರು.
ಅಮೇಲೆಯೇ ಇವರಿಗೆ ಹೆಚ್ಚು ಸಿನಿಮಾ ಅವಕಾಶ ಸಿಕ್ಕು ಇಷ್ಟು ದೊಡ್ಡ ಮಟ್ಟಕ್ಕೆ ಯಶಸ್ಸು ದೊರಕಿತ್ತು ಎನ್ನುವ ಮಾತು ಕೇಳಿ ಬಂದಿದ್ದವು. ಇದರ ಜೊತೆಗೆ ಇದೆ ವೇಣು ಸ್ವಾಮಿ ಗುರೂಜಿಯವರಿಂದ ರಶ್ಮಿಕ ಮಂದಣ್ಣ ವೈವಾಹಿಕ ಜೀವನದ ಬಗ್ಗೆ ಕೆಲವು ಭವಿಷ್ಯ ಹೊರ ಬಿದ್ದಿದೆ. ನಟಿ ರಶ್ಮಿಕ ಮಂದಣ್ಣ ಅವರು ಮದುವೆಯಾದರೆ,ಮದುವೆ ಆದ್ಮೇಲೆ ಅದು ಗಟ್ಟಿಯಾಗಿರುವುದಿಲ್ಲ, ವಿಚ್ಛೇದನ ಆಗುವ ಸಾಧ್ಯತೆ ಇದೆ ಡೈವೋರ್ಸ್ ಆಗುವ ಲಕ್ಷಣಗಳಿವೆ ಎಂದು ವೇಣು ಸ್ವಾಮಿ ಗುರೂಜಿಯವರು ಸಂದರ್ಶನದಲ್ಲಿ ಮೊನ್ನೆ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಈ ಹಿಂದೆ ನಾಗಚೈತನ್ಯ ಸಮಂತ ವಿಚ್ಛೇದನದ ಬಗ್ಗೆಯೂ ಕೂಡ ಹೇಳಿ ಎಲ್ಲರಿಗೂ ಅಚ್ಚರಿ ನೀಡುವಂತೆ ಅವರಿಬ್ಬರ ವಿಚ್ಛೇದನ ಮೂಲಕವೇ ಈ ಸ್ವಾಮಿ ಸುದ್ದಿಯಾಗಿದ್ದರು.
ಪ್ರಭಾಸ್, ನಯನತಾರಾ ಕೂಡ ಮದುವೆಯಾದರೂ ದಾಂಪತ್ಯ ಜೀವನದಲ್ಲಿ ಸುಖ ವಾಗಿರುವುದಿಲ್ಲ ಎಂದು ಹೇಳಿಕೆ ಹೇಳಿದ್ದಾರೆಂದು ತಿಳಿದುಬಂದಿದೆ. ಇದೀಗ ರಶ್ಮಿಕ ಮಂದಣ್ಣ ಅವರದ್ದು ಸಹ ದಾಂಪತ್ಯ ಜೀವನವೂ ಹೆಚ್ಚು ಸುಖಮಯವಾಗಿರುವುದು ಇಲ್ಲ ಎಂಬ ಹೇಳಿಕೆ ನೀಡಿದ್ದು ಇದು ಹೆಚ್ಚು ವೈರಲ್ ಆಗುತ್ತಿದೆ. ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ರಶ್ಮಿಕ ಮಂದಣ್ಣ ಅವರ ಬಗ್ಗೆಯೂ ಕೂಡ ನಿಮ್ಮ ಅನಿಸಿಕೆಯ ಕಾಮೆಂಟ್ ಮಾಡಿ....