Rashmika Mandanna : ನನ್ನನ್ನು ರಶ್ ಎಂದು ಕರೆಯಿರಿ..! ರಶ್ಮಿಕಾ ಮಂದಣ್ಣ. ಹೆಸರು ಬದಲಾಯಿಸಿ ಕೊಂಡರಾ ? ಅಸಲಿ ಕಾರಣ ಬಿಚ್ಚಿಟ್ಟ ರಶ್ಮಿಕಾ ವಿಡಿಯೋ
Updated:Monday, May 23, 2022, 08:13[IST]

ಕನ್ನಡ ಚಿತ್ರರಂಗದ ಖ್ಯಾತ ನಟ ನಿರ್ದೇಶಕ ರಕ್ಷಿತ್ ಶೆಟ್ಟಿ ಅವರ ಜೊತೆ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ನಾಯಕಿ ನಟಿಯಾಗಿ ಗುರುತಿಸಿಕೊಂಡಿದ್ದ ನಟಿ ರಶ್ಮಿಕ ಮಂದಣ್ಣ ಅವರು ಇದೀಗ ತುಂಬಾ ಎತ್ತರದ ಸ್ಟೇಜಲ್ಲಿ ಇದ್ದಾರೆ. ಪುಷ್ಪ ಸಿನಿಮಾದ ಯಶಸ್ವಿಯಲ್ಲಿ ನಟಿ ರಶ್ಮಿಕಾ ಮಂದಣ್ಣ ತೆಲುಗು ಸಿನಿಮಾ ರಂಗದಲ್ಲಿ ಹೆಚ್ಚು ಗುರುತಿಸಿಕೊಂಡಿದ್ದು ಒಂದರ ಮೇಲೊಂದರಂತೆ ಹಿಟ್ ಸಿನಿಮಾ ನೀಡುತ್ತಿದ್ದಾರೆ. ಹೌದು ಅತ್ತ ಬಾಲಿವುಡ್ ಕಡೆ ಕೂಡ ಮುಖಮಾಡಿರುವ ರಶ್ಮಿಕಾ ನಟ ಬಿಗ್ ಬಿ ಅಮಿತಾಬ್ ಬಚ್ಚನ್ ಮಗಳ ಪಾತ್ರದಲ್ಲಿಯೂ ಕೂಡ ಗುರುತಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಹಾಗೇನೆ ನಟ ಸಿದ್ಧಾರ್ಥ್ ಮಲ್ಹೋತ್ರ ಅವರ ಸಿನಿಮಾದಲ್ಲಿಯೂ ಕೂಡ ನಾಯಕಿ ನಟಿಯಾಗಿ ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ಹೀಗೆ ನಟಿ ರಶ್ಮಿಕಾ ಅವರು ಇದೀಗ ಹೆಚ್ಚು ಮಿಂಚುತ್ತಿದ್ದಾರೆ. ಇತ್ತ ತಮಿಳು ಸ್ಟಾರ್ ನಟ ವಿಜಯ್ ಸಹ ರಶ್ಮಿಕಾ ಮಂದಣ್ಣ ಅವರನ್ನ ನಟಿಯಾಗಿ ಅಭಿನಯ ಮಾಡಲು ಕರೆದಿದ್ದು ಹೆಚ್ಚು ಆಫರ್ ಗಳು ಬರುತ್ತಿವೆ ಎನ್ನಲಾಗಿದೆ. ಹೌದು ನಟಿ ರಶ್ಮಿಕಾ ಮಂದಣ್ಣ ಅವರು ಸಾಮಾಜಿಕ ಜಾಲತಾಣದಲ್ಲಿ ತುಂಬಾ ಆಕ್ಟಿವ್ ಆಗಿರುವ ನಟಿ. ಸದಾ ಅವರ ಅಭಿಮಾನಿಗಳ ಜೊತೆ ಮಾತನಾಡುವ ನಟಿ. ವಿಡಿಯೋ ಫೋಟೋಗಳನ್ನು ಹಂಚಿಕೊಳ್ಳುವ ರಶ್ಮಿಕ ಮಂದಣ್ಣ ಇದೀಗ ನನ್ನನ್ನು ರಶ್ಮಿಕ ಎಂದು ಕರೆಯಬೇಡಿ ರಶ್ ಎಂದು ಕರೆಯಿರಿ ಎಂದಿದ್ದಾರೆ. ಹೌದು ಇದಕ್ಕೆ ಅಸಲಿ ಕಾರಣ ತಿಳಿಯುತ್ತ ಹೋದಾಗ ನಟಿ ರಶ್ಮಿಕಾ ಮಂದಣ್ಣ ಹೇಳಿರುವ ಹಾಗೆ, ಕೆಲವರು ಸಿನಿಮಾ ಸೆಟ್ಟಿನಲ್ಲಿ ನನ್ನ ರಶ್ಮಿಕಾ ಎಂದು ಕರೆಯುವುದು ಅವರಿಗೆ ಕಷ್ಟವಾಗುತ್ತಿದೆ. ಅದು ನನಗೆ ನಿಜ ಅರ್ಥವಾಗಿದೆ. ರಶ್ಮಿಕ ಮಂದಣ್ಣ ಎನ್ನುವುದು ತುಂಬಾ ಉದ್ದವಾದ ಹೆಸರು ಹಾಗಾಗಿ ನನ್ನನ್ನು ರಶ್ ಎಂದು ಕರೆಯಿರಿ ನನಗೆ ಯಾವುದೇ ಸಮಸ್ಯೆ ಇಲ್ಲ ಎಂದು ವಿಡಿಯೋ ಮೂಲಕ ಈ ವಿಚಾರವನ್ನು ಬಿಚ್ಚಿದ್ದಾರೆ ನಟಿ ರಶ್ಮಿಕಾ ಮಂದಣ್ಣ.
ಹೌದು ನಟಿಯ ಈ ನಡೆ ನೋಡಿ ಇದೇನಪ್ಪ ಹೊಸ ಕ್ಯಾತೆ ಎಂದು ನೆಟ್ಟಿಗರು ಬೆರಗಾಗಿದ್ದು, ಮತ್ತೊಂದು ಕಡೆ ಅವರ ಅಭಿಮಾನಿಗಳು ಕೂಡ ಇವರ ಪೋಸ್ಟ್ಗೆ ಮೆಚ್ಚುಗೆ ತಿಳಿಸಿ ಖುಷಿಯಾಗಿದ್ದಾರೆ. ನೀವು ಕೂಡ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ರಶ್ಮಿಕ ಮಂದಣ್ಣರನ್ನ ರಶ್ ಎಂದು ಕರೆಯುತ್ತೇವೆ ಎಂದಾದರೆ ಕಮೆಂಟ್ ಮಾಡಿ ಮಾಹಿತಿ ಶೇರ್ ಮಾಡಿ ಧನ್ಯವಾದಗಳು..