ಕಾಲೇಜಿನಲ್ಲಿ ಸಕತ್ ನೃತ್ಯ ಮಾಡಿದ್ದ ನ್ಯಾಷನಲ್ ಕ್ರಶ್ ರಶ್ಮಿಕಾ..! ಇದೀಗ ವಿಡೀಯೋ ಬಾರಿ ವೈರಲ್

By Infoflick Correspondent

Updated:Monday, August 22, 2022, 13:42[IST]

ಕಾಲೇಜಿನಲ್ಲಿ ಸಕತ್ ನೃತ್ಯ ಮಾಡಿದ್ದ ನ್ಯಾಷನಲ್ ಕ್ರಶ್ ರಶ್ಮಿಕಾ..! ಇದೀಗ ವಿಡೀಯೋ ಬಾರಿ ವೈರಲ್

ರಶ್ಮಿಕಾ ಮಂದಣ್ಣ ಈ ಹೆಸರು ಬಹುತೇಕ ಕನ್ನಡಿಗರಿಗೆ ಚರಪರಿಚಿತ. ಜೊತೆಗೆ ಇದೀಗ ಇಡೀ ದೇಶಕ್ಕೂ ಕೂಡ ರಶ್ಮಿಕ ಮಂದಣ್ಣ ಪರಿಚಯ ಆಗಿದ್ದಾರೆ. ಆರಂಭದಲ್ಲಿ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಅವರ ನಿರ್ದೇಶನದಲ್ಲಿ ಮೂಡಿ ಬಂದ ಕನ್ನಡದ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಜೊತೆಗೆ ಮೊದಲ ಬಾರಿ ರಶ್ಮಿಕ ತೆರೆಯ ಹಂಚಿಕೊಂಡರು. ನಂತರ ಇವರನ್ನ ಕರ್ನಾಟಕ ಕ್ರಶ್ ಎಂದೆ ಕರೆಯಲಾಯಿತು. ನಂತರ ದಿನದಲ್ಲಿ ರಶ್ಮಿಕ ಮಂದಣ್ಣ ತೆಲುಗು ಚಿತ್ರರಂಗಕ್ಕೆ ಪಾದರ್ಪಾಣೆ ಮಾಡಿದ್ದು ವಿಜಯ ದೇವರಕೊಂಡ ಜೊತೆ ಸಿನಿಮಾದಲ್ಲಿ ಕಿಸ್ಸಿಂಗ್ ಸೀನ್ ಹೆಚ್ಚು ಅಭಿಮಾನಿ ಬಳಗ ಇವರನ್ನು ಫಾಲೋ ಮಾಡುವಂತೆ ಆಯಿತು ಎನ್ನಬಹುದು. ಹಾಗೆ ರಶ್ಮಿಕ ಮಂದಣ್ಣ ಅಂದರೆ ಅತಿ ದೊಡ್ಡ ಫ್ಯಾನ್ ಪೇಜ್ ಗಳು ಕೂಡ ಹೊರ ಹೊಮ್ಮಿದ್ದವು. 

ಇದೀಗ ರಶ್ಮಿಕ ಮಂದಣ್ಣ ಕನ್ನಡ ಸೇರಿ ಬಾಲಿವುಡ್ ನಲ್ಲೂ ಮಿಂಚುತ್ತಿದ್ದಾರೆ. ಹಾಗೆ ನ್ಯಾಷನಲ್ ಕ್ರಶ್ ಆಗಿ ಹೊರ ಹೊಮ್ಮಿದ್ದಾರೆ.. ರಶ್ಮಿಕಾ ಮಂದಣ್ಣ ಅವರು ಕೆಲವೊಂದಿಷ್ಟು ಸಂದರ್ಶನಗಳಲ್ಲಿ ಕನ್ನಡ ಭಾಷೆಯ ವಿಚಾರಕ್ಕಾಗಿ, ಹಾಗೂ ಕನ್ನಡ ಸಿನಿಮಾರಂಗದ ವಿಚಾರವಾಗಿ ಕೊಟ್ಟ ಹೇಳಿಕೆಗಳು ಇವರನ್ನು ಹೆಚ್ಚು ಟ್ರೋಲ್ ಮಾಡುವಂತೆ ಆಗಿದ್ದವು. ರಶ್ಮಿಕಾ ರಕ್ಷಿತ್ ಶೆಟ್ಟಿ ಅವರನ್ನು ಕಿರಿಕ್ ಪಾರ್ಟಿ ಸಿನಿಮಾ ಮೂಲಕ ನಂತರದ ದಿನದಲ್ಲಿ ಪ್ರೀತಿ ಮಾಡಿ, ಅವರೊಟ್ಟಿಗೆ ಆತ್ಮೀಯತೆ ಹೊಂದಿ ಎಂಗೇಜ್ಮೆಂಟ್ ಮಾಡಿಕೊಂಡರು. ಸಿನಿಮಾದಲ್ಲಿ ಹೆಚ್ಚು ಬೆಳೆಯುತ್ತಿದ್ದಂತೆ ರಶ್ಮಿಕಾ ಹಾಗೂ ರಕ್ಷಿತ್ ನಡುವೆ ಅದೇನಾಯಿತೋ ಗೊತ್ತಿಲ್ಲ, ಇವರಿಬ್ಬರು ಮದುವೆಯನ್ನ ಮುರಿದುಕೊಂಡರು. ಹಾಗೆ ಟ್ರೋಲಿಗರಿಗೆ ಬಾಡೂಟ ಆದ್ರೂ ಎಂದರೆ ತಪ್ಪಾಗಲಾರದು. 

ಹೌದು ರಶ್ಮಿಕ ಮಂದಣ್ಣ ಕೊಡಗಿನ ಕುವರಿ ಕಿರಿಕ್ ಪಾರ್ಟಿ ಸಿನಿಮಾ ಬಿಡುಗಡೆ ಮುನ್ನ ಬೆಂಗಳೂರಿನ ದಯಾನಂದ ಸಾಗರ ಕಾಲೇಜಿಗೆ ಬಂದಿದ್ದರು. ಅಂದು ಕಿರಿಕ್ ಪಾರ್ಟಿ ಚಿತ್ರತಂಡ ಅಲ್ಲಿಗೆ ಆಗಮಿಸಿತ್ತು. ಆಗ ದಯಾನಂದ್ ಸಾಗರ್ ಕಾಲೇಜಿನ ಪ್ರೊಫೆಸರ್ ಮತ್ತು ಮುಖ್ಯೋಪಾಧ್ಯಾಯರ ಮುಂದೆ ರಶ್ಮಿಕಾ ಮಂದಣ್ಣ ಅವರು ಹಿಂದಿ ಹಾಡಿಗೆ ಹೆಜ್ಜೆ ಹಾಕಿದ್ದ ಪರಿ ವಾವ್ ಎನ್ನುವಂತಿತ್ತು ಎನ್ನಬಹುದು. ಅದರ ವಿಡಿಯೋ ಗತ್ತೇ ಬೇರೆ ಇಲ್ಲಿದೆ ನೋಡಿ ಆ ವಿಡಿಯೋ. ನೀವು ಕೂಡ ನೋಡಿಲ್ಲ ಎಂದೆನಿಸುತ್ತದೆ, ವಿಡಿಯೋ ನೋಡಿ ಈ ನೃತ್ಯದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದ...