ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರ ಮೊದಲ ಆಡಿಷನ್ ವೀಡಿಯೋ ನೋಡಿದ್ದೀರಾ..?

By Infoflick Correspondent

Updated:Friday, January 14, 2022, 15:10[IST]

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರ ಮೊದಲ ಆಡಿಷನ್ ವೀಡಿಯೋ ನೋಡಿದ್ದೀರಾ..?


ಚಂದನವನದಿಂದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ತೆರೆ ಮೇಲೆ ಬಂದ ರಶ್ಮಿಕಾ ಮಂದಣ್ಣ ಈಗ ನ್ಯಾಷನಲ್ ಕ್ರಶ್ ಆಗಿದ್ದಾರೆ. ಈಗಾಗಲೇ ಕನ್ನಡ, ತೆಲುಗಿನಲ್ಲಿ ದೊಡ್ಡ ಯಶಸ್ಸು ಕಂಡಿದ್ದಾರೆ. ಇಡೀ ದಕ್ಷಿಣ ಭಾರತದಲ್ಲಿ ಲೀಡಿಂಗ್ ನಲ್ಲಿರೋ ನಾಯಕಿ ಎಂದರೆ ಅದು ರಶ್ಮಿಕಾ ಮಂದಣ್ಣ. ಪ್ರಸ್ತುತ, ಅಲ್ಲು ಅರ್ಜುನ್ ಜೊತೆ ಪುಷ್ಪ ಚಿತ್ರ ಮಾಡ್ತಿದ್ದು, ರಶ್ಮಿಕಾ ಅವರು ಶ್ರೀವಲ್ಲಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನು ಹೊರತು ಪಡಿಸಿ, ಚಲೋ, ಗೀತಾ ಗೋವಿಂದಂ, ಡಿಯರ್ ಕಾಮ್ರೇಡ್ ಅಂತಹ ಸಿನಿಮಾಗಳು ರಶ್ಮಿಕಾಗೆ ಹೆಚ್ಚು ಖ್ಯಾತಿ ತಂದು ಕೊಟ್ಟಿದೆ. 

ನಿತಿನ್ ಜೊತೆ ಭೀಷ್ಮ ಸಿನಿಮಾದಲ್ಲೂ ನಟಿಸಿದ್ದಾರೆ. ಮಹೇಶ್ ಬಾಬು ಜೊತೆ ಸರಿಲೇರು ನೀಕೆವ್ವರು ಸಿನಿಮಾ ಮಾಡಿದ್ರು. ಸಿದ್ಧಾರ್ಥ್ ಮಲ್ಹೋತ್ರ ಅಭಿನಯದ ಮಿಷನ್ ಮಜ್ನು ಚಿತ್ರದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಇದು ರಶ್ಮಿಕಾ ನಟನೆಯ ಮೊದಲ ಹಿಂದಿ ಸಿನಿಮಾ. ಈ ಚಿತ್ರದ ಜೊತೆಯಲ್ಲಿ ಗುಡ್ ಬೈ ಎನ್ನುವ ಮತ್ತೊಂದು ಬಾಲಿವುಡ್ ಸಿನಿಮಾ ಮಾಡ್ತಿದ್ದಾರೆ. ಈ ಪ್ರಾಜೆಕ್ಟ್ ನಲ್ಲಿ ಅಮಿತಾಭ್ ಬಚ್ಚನ್ ಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಇಲ್ಲಿಯವರೆಗೂ ಸರಿ ಸುಮಾರು 10ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ.   

ಇದೀಗ ಪುಷ್ಪ ಚಿತ್ರದಲ್ಲಿ ಅದ್ಭುತವಾಗಿ ನಟಿಸಿರುವ ರಶ್ಮಿಕಾ ಮಂದಣ್ಣ ಅವರ ಡೈಲಾಗ್, ಹಾಡು, ಸ್ಟೆಪ್ಸ್ ಗಳೆಲ್ಲವೂ ಸೂಪರ್ ಹಿಟ್ ಆಗಿದ್ದು, ವೀಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ. ಇನ್ನು ರಶ್ಮಿಕಾ ಮಂದಣ್ಣ ಬಣ್ಣ ಹಚ್ಚಲು ಕಾರಣ ಕಿರಿಕ್ ಪಾರ್ಟಿ ಚಿತ್ರ. ಕಿರಿಕ್ ಪಾರ್ಟಿ ಚಿತ್ರನ ನಾಯಕಿಗಾಗಿ ರಕ್ಷಿತ್ ಶಟ್ಟಿ ಅವರು ಆಡಿಷನ್ ನಡೆಸುತ್ತಿದ್ದರು. ಆಗ ರಶ್ಮಿಕಾ ಬಂದಿದ್ದರು. ಅವರ ಆಡಿಷನ್ ಮಾಡಿ ಸೆಲೆಕ್ಟ್ ಮಾಡಲಾಯ್ತು. ಕಿರಿಕ್ ಪಾರ್ಟಿ ಚಿತ್ರದ ಬಳಿಕ ರಶ್ಮಿಕಾ ಲಕ್ ಬದಲಾಗಿ ಹೋಯ್ತು. ಈ ಆಡಿಷನ್ ನ ವೀಡಿಯೋವನ್ನು ಕಳೆದ ವರ್ಷ ರಶ್ಮಿಕಾ ಅವರ ಬರ್ತಡೇಗೆ ರಕ್ಷಿತ್ ಶೆಟ್ಟಿ ಅವರು ಹಂಚಿಕೊಂಡು ವಿಶ್ ಮಾಡಿದ್ದರು. ಈ ವೀಡಿಯೋ ಈಗ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿವೆ.