Rashmika Mandanna : ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಜೊತೆಗೆ ಟ್ರೋಲ್ ಆದ ಅವರ ನಾಯಿ ಔರಾ..!!

By Infoflick Correspondent

Updated:Saturday, June 25, 2022, 17:20[IST]

Rashmika Mandanna :  ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಜೊತೆಗೆ ಟ್ರೋಲ್ ಆದ ಅವರ ನಾಯಿ ಔರಾ..!!

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಸದಾ ಟ್ರೋಲ್ ಪೇಜ್ ಗಳಿಗೆ ರಸದೌತಣ ಉಣಬಡಿಸುವ ಮಹಾರಾಣಿ ಎಂದರೆ ತಪ್ಪಾಗುವುದಿಲ್ಲ. ಯಾವಾಗಲೂ ಒಂದಲ್ಲ ಒಂದು ವಿಚಾರಗಳಿಗೆ ರಶ್ಮಿಕಾ ಅವರು ಟ್ರೋಲ್ ಆಗುತ್ತಲೇ ಇರುತ್ತಾರೆ. ಟ್ರೋಲ್ ಪೇಜ್ ಗಳಲ್ಲಿ ಮೊದಲಿಗೆ ಫಸ್ಟ್ ರಶ್ಮಿಕಾ ಮಂದಣ್ಣ ಇದ್ದೇ ಇರುತ್ತಾರೆ. ಕನ್ನಡದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದರು. ಸ್ಯಾಂಡಲ್ ವುಡ್, ಬಾಲಿವುಡ್ ಹಾಗೂ ಟಾಲಿವುಡ್ ನಲ್ಲಿ ಬಹುಬೇಡಿಕೆಯ ನಟಿಯಾಗಿದ್ದಾರೆ. 

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ನಟ ಮತ್ತು ನಿರ್ದೇಶಕ ರಕ್ಷಿತ್ ಶೆಟ್ಟಿ, ಚಾಲೆಂಜಿಂಗ್ ಸ್ಟಾರ್ ದರ್ಶನ್, ವಿಜಯ್ ದೇವರ ಕೊಂಡ, ಮಹೇಶ್ ಬಾಬು, ನಿತಿನ್, ನಾಗಶೌರ್ಯ, ಕಾರ್ತಿ, ಅಲ್ಲು ಅರ್ಜುನ್ ಹಾಗೂ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಜೊತೆ ರಶ್ಮಿಕಾ ಮಂದಣ್ಣ ಹೀರೋಯಿನ್ ಆಗಿ ನಟಿಸಿದ್ದಾರೆ. ಈಗಾಗಲೇ ಕನ್ನಡ, ತೆಲುಗಿನಲ್ಲಿ ದೊಡ್ಡ ಯಶಸ್ಸು ಕಂಡಿದ್ದಾರೆ. ಟಾಲಿವುಡ್, ಬಾಲಿವುಡ್ ಅಂಗಳದಲ್ಲಿ ರಶ್ಮಿಕಾ ಬ್ಯುಸಿಯಾಗಿದ್ದಾರೆ. ರಶ್ಮಿಕಾ ಎಷ್ಟೇ  ಬ್ಯುಸಿ ಇದ್ದರೂ ಕೂಡ ಟ್ರೋಲ್ ಪೇಜ್ ಗಳಲ್ಲಿ ಸದಾ ಇಣುಕುತ್ತಿರುತ್ತಾರೆ. 

ಇದೀಗ ರಶ್ಮಿಕಾ ಮಂದಣ್ಣ ಅವರ ಶ್ವಾನವೂ ಟ್ರೋಲ್ ಪೇಜ್ ಗೆ ಎಂಟ್ರಿಕೊಟ್ಟಿದೆ. ರಶ್ಮಿಕಾ ಮಂದಣ್ಣ ಅವರು ಎಲ್ಲೇ ಹೋದರೂ, ಅವರ ಶ್ವಾನ ಔರಾನ ಕರೆದುಕೋಮಡು ಹೋಗುತ್ತಾರಂತೆ. ಇದರಿಂದ ನಿರ್ಮಾಪಕರಿಗೆ ತೊಂದರೆಯಾಗುತ್ತಿದೆಯಂತೆ. ಔರಾಗೂ ವಿಮಾನದ ಟಿಕೆಟ್ ಬುಕ್ ಮಾಡುವುದು ಕಷ್ಟ ಎಂದಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಮೂಲಕ ಮತ್ತೆ ರಶ್ಮಿಕಾ ಮಂದಣ್ಣ ಅವರು ಟ್ರೋಲ್ ಆಗಿದ್ದಾರೆ. ಾದರೆ ಈ ಟ್ವೀಟ್ ಗೆ ಪ್ರತಿಕ್ರಯಿಸಿರುವ ರಶ್ಮಿಕಾ ಅವರು, ನಗು ತಡೆಯೋದಕ್ಕೇ ಆಗುತ್ತಿಲ್ಲ. ಔರಾ ಹೈದರಾಬಾದ್ ನಲ್ಲೇ ಅರಾಮಾಗಿದ್ದಾಳೆ. ಔರಾ ಹಾಗೂ ನನ್ನ ಬಗ್ಗೆ ಕಾಳಜಿ ವಹಿಸಿದ್ದಕ್ಕೆ ಧನ್ಯವಾದ ಎಂದು ಪೋಸ್ಟ್ ಮಾಡಿದ್ದಾರೆ.