Yash : ಸ್ಟಾರ್ ನಟ ಯಶ್ ಬಗ್ಗೆ ಮಾತನಾಡಿ ಟ್ರೋಲ್ ಆದ ರಶ್ಮಿಕಾ..! ಇದೆಲ್ಲಾ ಬೇಕಿತ್ತಾ ಎಂದ ನೆಟ್ಟಿಗರು

By Infoflick Correspondent

Updated:Monday, May 30, 2022, 18:53[IST]

Yash : ಸ್ಟಾರ್ ನಟ ಯಶ್ ಬಗ್ಗೆ ಮಾತನಾಡಿ ಟ್ರೋಲ್ ಆದ ರಶ್ಮಿಕಾ..! ಇದೆಲ್ಲಾ ಬೇಕಿತ್ತಾ ಎಂದ ನೆಟ್ಟಿಗರು

ಕೆಜಿಎಫ್ ಭಾಗ-2 ಸಿನಿಮಾ ಮೂಲಕ ನಟ ಯಶ್ ಅವರು ಇಂಟರ್ನ್ಯಾಷನಲ್ ಸ್ಟಾರ್ ಆಗಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಹೌದು ಕೆಜಿಎಫ್ ಸಿನಿಮಾವೊಂದು ನಟ ಯಶ್ ಅವರಿಗೆ ತುಂಬಾ ದೊಡ್ಡ ಹೆಸರು ತಂದುಕೊಟ್ಟಿದೆ ಅಂದರೆ ತಪ್ಪಾಗಲಾರದು. ಕನ್ನಡ ಚಿತ್ರರಂಗವನ್ನು ಇಡೀ ಪ್ರಪಂಚಕ್ಕೆ ಪರಿಚಯ ಮಾಡಿಕೊಟ್ಟಿದ್ದು ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಎಂದು ಹೇಳಬಹುದು. ಹೌದು ನಟ ಯಶ್ ಅವರು 2007ರಲ್ಲಿ ಸಿನಿಮಾ ವೃತ್ತಿಯನ್ನು ಆರಂಭಿಸಿದರು. ಜಂಬದ ಹುಡುಗಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಅವರದ್ದೇ ಆದ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಸುಮಾರು ಹದಿನೈದು ವರ್ಷಗಳ ಕಾಲ ಚಿತ್ರರಂಗದಲ್ಲಿ ಯಶ್ ಅವರು ಸೇವೆ ಸಲ್ಲಿಸುತ್ತಿದ್ದಾರೆ.

ಇಂತಹದರ ನಡುವೆ ನಟಿ ರಶ್ಮಿಕಾ ಮಂದಣ್ಣ ಅವರ ಹಳೆಯ ವಿಚಾರ ಇದೀಗ ಮತ್ತೆ ಸದ್ದು ಮಾಡುತ್ತಿದೆಯಂತೆ. ಹೌದು ನಟಿ ರಶ್ಮಿಕಾ ಮಂದಣ್ಣ 2016 ರಲ್ಲಿ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಎಂಟ್ರಿ ಕೊಟ್ಟರು. ಹಳೆ ಒಂದು ಸಂದರ್ಶನದಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರಿಗೆ ಕನ್ನಡದ ಮಿಸ್ಟರ್ ಶೋ ಆಫ್ ನಟ ಯಾರು ಎಂದು ಪ್ರಶ್ನೆ ಮಾಡಲಾಗಿತ್ತು. ಆಗ ನಟಿ ರಶ್ಮಿಕಾ ಮಂದಣ್ಣ ಯಶ್ ಹೆಸರನ್ನು ತೆಗೆದುಕೊಂಡು ದೊಡ್ಡ ಸಮಸ್ಯೆಗೆ ಒಳಗಾಗಿ, ಜೊತೆಗೆ ನೆಟ್ಟಿಗರಿಂದ ಅಷ್ಟೇ ಟ್ರೋಲ್ ಕೂಡ ಆಗಿದ್ದರು ಎನ್ನಬಹುದು. ನಟಿ ರಶ್ಮಿಕಾ ಮಂದಣ್ಣ ಅವರು ಶೋ ಆಫ್ ನಟ ಯಶ್ ಎಂದು ಹೇಳುತ್ತಿದ್ದಂತೆಯೇ ಇದು ಕೆಲವರಿಗೆ ಇಷ್ಟ ಆಗಿರಲಿಲ್ಲ, ನಂತರ ಈ ವಿಚಾರವಾಗಿ ನಟಿ ರಶ್ಮಿಕಾ ಅವರೇ ಪ್ರತಿಕ್ರಿಯೆ ನೀಡಿದ ವಿಚಾರ ಎಲ್ಲರಿಗೂ ಗೊತ್ತು.

ಯಶ್ ಸರ್ ಅವರಿಗೆ ಆಗಲಿ,  ಅಥವಾ ಬೇರೆ ಯಾರಿಗೋ ಆಗಲಿ ಅಗೌರವ ತೋರಿಲ್ಲ. ನಾನು ಅವರ ವಿರುದ್ಧ ಆ ರೀತಿ ಎಂದಿಗೂ ಮಾತನಾಡಿಲ್ಲ, ಅಂದು ಸಂದರ್ಶನದಲ್ಲಿ ಬೇಕಾದ ಒಂದು ಭಾಗದ ಸಾಲನ್ನು ತೆಗೆದುಕೊಂಡು ಆ ರೀತಿ ನನ್ನ ಮಾತನ್ನು ತಿರುಚಲಾಗಿತ್ತು. ಯಶ್ ಸರ್ ಅವರ ಬಗ್ಗೆ ನನಗೆ ಹೆಮ್ಮೆ ಇದೆ. ಸಂತು ಸ್ಟ್ಟ್ರೆಟ್ ಫಾರ್ವರ್ಡ್ ಸಿನಿಮಾ ಬಗ್ಗೆ ಮನಬಿಚ್ಚಿ ಮಾತನಾಡಿದ್ದೇನೆ. ಅದನ್ನು ಯಾವ ಮೀಡಿಯಾ ತೋರಿಸಿಲ್ಲ. ಅವರಿಗೆ ನಾನು ಎಂದು ಅಗೌರವ ತೋರಿಲ್ಲ. ಅವರ ಅಭಿಮಾನಿ ಬಳಗದವರಿಗೆ ಇದರಿಂದ ನಿಜಕ್ಕೂ ನೋವಾಗಿದ್ದರೆ ಕ್ಷಮಿಸಿ ಎಂದು ಹೇಳಿಕೆ ಕೊಟ್ಟಿದ್ದರು. ಹಾಗೆ ಯಶ್ ಅವರ ಕಲೆ, ಮತ್ತು ಅವರ ನಟನೆ ನನಗೆ ಇಷ್ಟ ಎಂದಿದ್ದ ರಶ್ಮಿಕಾ ಅವಕಾಶ ಸಿಕ್ಕರೆ ನಟಿಸುತ್ತೇನೆ ಎಂಬುದಾಗಿ ಹೇಳಿದ್ದರು ಇದೆ ಅವರಿಗೆ ಅಂದು ಮುಳುವಾಗಿತ್ತು ಎಂದು ಕೆಲವರು ಮಾತನಾಡಿಕೊಂಡರು. ಆದ್ರೆ ಅಂಥಹದ್ದು ಏನು ಆಗಿಲ್ಲ ಎನ್ನಲಾಗಿದೆ. ನಟಿ ರಶ್ಮಿಕಾ ಅವರು ಕ್ಷಮೆ ಕೇಳಿದ ವಿಷಯ ಇದೀಗ ಮತ್ತೆ ಚರ್ಚೆಯಾಗುತ್ತಿದೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ. ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಧನ್ಯವಾದಗಳು...