Rashmika Mandanna : ಬೋಲ್ಡ್ ಆಗಿ ಕಾಣಿಸಿದ ರಶ್ಮಿಕಾ ಬೀಚ್ ನಲ್ಲಿ ಏನು ಮಾಡ್ತಿದ್ದಾರೆ ಗೊತ್ತಾ..? ಇಲ್ನೋಡಿ ವಿಡಿಯೋ

By Infoflick Correspondent

Updated:Tuesday, May 24, 2022, 13:04[IST]

Rashmika Mandanna  : ಬೋಲ್ಡ್ ಆಗಿ ಕಾಣಿಸಿದ ರಶ್ಮಿಕಾ ಬೀಚ್ ನಲ್ಲಿ ಏನು ಮಾಡ್ತಿದ್ದಾರೆ ಗೊತ್ತಾ..? ಇಲ್ನೋಡಿ ವಿಡಿಯೋ

ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ರಶ್ಮಿಕಾ ಮಂದಣ್ಣ ಅವರು ಆ ನಂತರದ ದಿನಗಳಲ್ಲಿ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ದರ್ಶನ್ ಅವರ ಜೊತೆ ಚಕ್ರವರ್ತಿ, ಪುನೀತ್ ಅವರ ಜೊತೆ ಅಂಜನಿಪುತ್ರ, ಮತ್ತು ಗಣೇಶ್ ಜೊತೆ ಚಮಕ್, ಮತ್ತು ದ್ರುವ ಸರ್ಜಾ ಜೊತೆ ಪೊಗರು ಸಿನಿಮಾದಲ್ಲಿ ಮಾತ್ರ ಕಾಣಿಸಿಕೊಂಡರು. ಹೌದು ಕಿರಿಕ್ ಪಾರ್ಟಿ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಅವರ ಜೊತೆ ಕಾಣಿಸಿಕೊಂಡಿದ್ದ ನಟಿ ರಶ್ಮಿಕಾ ಮಂದಣ್ಣ ಈಗಾಗಲೆ ತೆಲುಗು, ತಮಿಳು, ಹಾಗೆ ಹಿಂದಿ ಸಿನಿಮಾದಲ್ಲಿ ತುಂಬಾ ಬಿಜಿಯಾಗಿದ್ದಾರೆ ಎನ್ನಬಹುದು. ತೆಲುಗುದಲ್ಲಿ ಗುರುತಿಸಿಕೊಂಡಿರುವ ನಟಿ ರಶ್ಮಿಕಾ ಮಂದಣ್ಣ ಅವರು ಇತ್ತೀಚಿಗೆ ಒಂದು ವಿಡಿಯೋ ಶೇರ್ ಮಾಡಿಕೊಂಡು ನನ್ನನ್ನು ರಶ್ಮಿಕ ಎಂದು ಕರೆಯಬೇಡಿ, ರಶ್ ಎಂದು ಕರೆಯಿರಿ ಎಂದು ಹೇಳಿಕೊಂಡು ತುಂಬಾನೇ ಸುದ್ದಿಯಾಗಿದ್ದರು.   

ಹಾಗೆ ಅದರ ಒಳ ಅರ್ಥದ ಕಾರಣ ತಿಳಿಸಿ ಸಿನಿಮಾ ಸೆಟ್ ನಲ್ಲಿ ನನ್ನನ್ನು ರಶ್ಮಿಕ ಮಂದಣ್ಣ ಎಂದು ಕರೆಯಲು ಸಾಕಷ್ಟು ಜನರಿಗೆ ಕಷ್ಟವಾಗುತ್ತಿದೆ. ಹೆಸರು ತುಂಬಾ ಉದ್ದವಾಗಿದೆ ಎಂದು ನನಗೆ ಅರ್ಥವಾಗಿದೆ. ಹಾಗಾಗಿ ಅದು ಕಷ್ಟವಾದರೆ ರಶ್ ಎಂದು ಕರೆಯಿರಿ ಎಂದು ಹೇಳಿದ್ದರು. ಈಗಾಗಲೇ ಬಾಲಿವುಡ್ ಅಂಗಳದಲ್ಲಿಯೂ ಕೂಡ ಹೊಸ ಸಂಚಲನ ಸೃಷ್ಟಿಸಿರುವ ನಟ ರಶ್ಮಿಕಾ ಮಂದಣ್ಣ, ನಟ ಅಲ್ಲು ಅರ್ಜುನ್ ಅವರ ಜೊತೆ ತೆಲುಗು ಪುಷ್ಪ ಸಿನಿಮಾದಲ್ಲಿ ಅಭಿನಯಿಸಿ ಸೈ ಎನಿಸಿಕೊಂಡವರು. ಇದೀಗ ಪುಷ್ಪ 2 ಸಿನಿಮಾದ ಶೂಟಿಂಗ್ ಒಳಗೆ ಬಿಜಿಯಾಗಿದ್ದಾರೆ ಎನ್ನಲಾಗುತ್ತಿದೆ. ಅತ್ತ ಬಾಲಿವುಡ್ ಬಿಗ್ ಬಿ ಅಮಿತಾಬ್ ಅವರ ಸಿನಿಮಾದಲ್ಲಿಯೂ ಕೂಡ ರಶ್ಮಿಕ ಕಾಣಿಸಿಕೊಳ್ಳಲಿದ್ದಾರೆ. ಹೀಗೆ ತೆಲುಗು, ಹಿಂದಿಯಲ್ಲಿ ಹೆಚ್ಚು ಗುರುತಿಸಿಕೊಳ್ಳುತ್ತಿರುವ ನಟಿ ರಶ್ಮಿಕಾ ಮಂದಣ್ಣ ಅವರು ಅದೆಷ್ಟು ಸ್ಟೈಲಿಶ್ ಆಗಿದ್ದಾರೆ ಗೊತ್ತಾ..? ನಿಜ ನೀವು ಬೆರಗಾಗ್ತಿರ ಈ ವಿಡಿಯೋ ನೋಡಿದರೆ.  

ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಅವರ ವಿಡಿಯೋ ಎಲ್ಲವೂ ಕೂಡ ವೈರಲ್ ಆಗುತ್ತಿವೆ. ಬಾಲಿವುಡ್ ನಟ ವರುಣ್ ಧವನ್ ಜೊತೆ ನಟಿ ರಶ್ಮಿಕಾ ಮಂದಣ್ಣ ಹಾಗೂ ಅವರ ತಂಡ ಸಕತ್ತಾಗಿ ಬಿಸಿಲಿದ್ದರೂ ಬೀಚ್ ನಲ್ಲಿ ಬಾರಿ ಎಂಜಾಯ್ ಮಾಡಿತ್ತು. ತುಂಬಾನೇ ಬೋಲ್ಡಾಗಿ ಡ್ರೆಸ್ ಮಾಡಿದ ರಶ್ಮಿಕ ಬೀಚ್ ಮುಂದೆ ವಾಲಿಬಾಲ್ ಆಟ ಆಡಿ ಸುದ್ದಿಯಾಗಿದ್ದರು. ಅದರ ವಿಡಿಯೋ ತುಣುಕು ಇದೀಗ ಕಂಡುಬಂದಿದೆ. ವಾಲಿಬಾಲ್ ಆಟವಾಡಿದ ರಶ್ಮಿಕಾ ಅವರ ವಾಲಿಬಾಲ್ ಆಟ ಹೇಗಿತ್ತು ಗೊತ್ತಾ..? ಇಲ್ಲಿದೆ ನೋಡಿ ಆ ವಿಡಿಯೋ. ವಿಡಿಯೋ ಒಮ್ಮೆ ನೋಡಿ. ಹಾಗೆ ಇಷ್ಟವಾದಲ್ಲಿ ಶೇರ್ ಮಾಡಿ ಮತ್ತು ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು...