Rashmika Mandanna : ರಶ್ಮಿಕಾ ಸೌಂದರ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆಯಾ.? ರೆಡ್ ಡ್ರೆಸ್ ನ ಮಿಂಚಿಂಗ್ ವಿಡಿಯೋ ನೋಡಿ..!

By Infoflick Correspondent

Updated:Saturday, July 16, 2022, 19:57[IST]

Rashmika Mandanna : ರಶ್ಮಿಕಾ ಸೌಂದರ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆಯಾ.? ರೆಡ್ ಡ್ರೆಸ್ ನ ಮಿಂಚಿಂಗ್ ವಿಡಿಯೋ ನೋಡಿ..!

ಕನ್ನಡದ ಕುವರಿ ಕೊಡಗಿನ ಬೆಡಗಿ ನಟಿ ರಶ್ಮಿಕ ಮಂದಣ್ಣ ಇದೀಗ ಮತ್ತೆ ಸುದ್ದಿಗೆ ಬಂದಿದ್ದಾರೆ. ಕಿರಿಕ್ ಪಾರ್ಟಿ ಸಿನಿಮಾ ಮೂಲಕ ನಟ ರಕ್ಷಿತ್ ಶೆಟ್ಟಿ ಜೊತೆ ಮೊದಲ ಬಾರಿ ತೆರೆಯ ಹಂಚಿಕೊಂಡ ನಟಿ ರಶ್ಮಿಕಾ ಮಂದಣ್ಣ ಅವರು ಆಮೇಲೆ ಮುಟ್ಟಿದ್ದೆಲ್ಲ ಚಿನ್ನ ಎಂಬಂತೆ ಹೆಚ್ಚು ಯಶಸ್ವಿ ನಟಿಯಾಗಿಯೇ  ಹೊರ ಹೊಮ್ಮಿದರು. ಕಿರಿಕ್ ಪಾರ್ಟಿ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಜೊತೆ ಅಭಿನಯವನ್ನ ಮೊದಲ ಬಾರಿಗೆ ಅವರ ಜೊತೆ ಮಾಡದೆ ಇದ್ದಿದ್ದರೆ ರಶ್ಮಿಕಾ ಇಷ್ಟು ಬೆಳೆಯಲು ಸಾಧ್ಯವೇ ಇರಲಿಲ್ಲ ಎನ್ನಲಾಗಿದೆ. ಆ ಸಿನಿಮಾ ಮೂಲಕವೇ ಹೆಚ್ಚು ಬೆಳಕಿಗೆ ಬಂದರು ರಶ್ಮಿಕಾ ಮಂದಣ್ಣ. ಎಲ್ಲಿ ನೋಡಿದರೂ ನಟಿ ರಶ್ಮಿಕಾ ಮಂದಣ್ಣ ಅವರದ್ದೇ ಕಾರು ಬಾರು ಇದೀಗ ಎಂದು ಹೇಳಬಹುದು. ಅತ್ತ ತೆಲುಗು ಆಯ್ತು, ತಮಿಳು ಆಯಿತು, ಇದೀಗ ಬಾಲಿವುಡ್ ನಟಿಯಾಗಿ ಮಿಂಚುತ್ತಿದ್ದಾರೆ. 

ಕನ್ನಡದ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಅವರು ಈಗಾಗಲೇ ನಟ ಅಮಿತಾಬ್ ಬಚ್ಚನ್ ಅವರ ಜೊತೆ ತೆರೆ ಹಂಚಿಕೊಳ್ಳುವುದಾಗಿ ಕಂಡುಬಂದಿದ್ದು, ಸಿನಿಮಾ ಇನ್ನಷ್ಟೇ ಬಿಡುಗಡೆ ಬಾಕಿ ಇದೆ. ಹಾಗೆ ನಟ ಟೈಗರ್ ಶ್ರಾಫ್ ಜೊತೆ ಇತ್ತೀಚಿಗಷ್ಟೇ ನಟಿ ರಶ್ಮಿಕಾ ಮಂದಣ್ಣ ಬೀಚ್ನಲ್ಲಿ ಕಾಣಿಸಿದ್ದು ಅವರ ಜೊತೆಯೂ ತೆರೆ ಹಂಚಿಕೊಳ್ಳುತ್ತಿದ್ದಾರೆ. ವಾಲಿಬಾಲ್ ಆಟದ ಮೂಲಕ ಬೀಚ್ ನಲ್ಲಿ ಕೆಲ ಹೊತ್ತು ಅವರ ಜೊತೆ ಸಮಯ ಕಳೆದ ವಿಡಿಯೋವನ್ನ ಶೇರ್ ಮಾಡಿಕೊಂಡಿದ್ದರು. ಹಾಗೆ ವಿಡಿಯೋ ಅಭಿಮಾನಿಗಳಿಗೆ ತೋರಿಸಿ ಬಾಲಿವುಡ್ ಅಂಗಳದಲ್ಲಿ ಹೆಚ್ಚಾಗಿ ಸಕ್ರಿಯ ಆಗಿರುವುದಾಗಿ ನಟಿ ರಶ್ಮಿಕಾ ಕಂಡುಬಂದಿದ್ದರು. ರಶ್ಮಿಕಾ ಮಂದಣ್ಣ ಇದೀಗ ಅಪಾರ ಅಭಿಮಾನಿಗಳ ನಟಿ. ನಟಿ ರಶ್ಮಿಕಾ ಮಂದಣ್ಣ ಅವರ ಫ್ಯಾನ್ ಫಾಲೊವಿಂಗ್ ತುಂಬಾ ದೊಡ್ಡದಿದೆ ಎನ್ನಬಹುದು.

ದಿನದಿಂದ ದಿನಕ್ಕೆ ರಶ್ಮಿಕಾ ಮಂದಣ್ಣ ತುಂಬಾನೇ ಚೆಂದುಳ್ಳಿ ಚೆಲುವೆ ತರ ಬದಲಾಗುತ್ತಿದ್ದಾರೆ. ಹಾಗೆ ದಿನದಿಂದ ದಿನಕ್ಕೆ ಅವರ ಸೌಂದರ್ಯ ಸಹ ಹೆಚ್ಚುತ್ತಿದೆ ಎನ್ನಬಹುದು. ಹೌದು  ಅಷ್ಟರಮಟ್ಟಿಗೆ ತುಂಬಾ ಸ್ಟೈಲಿಶ್ ಆಗಿ ಬೋಲ್ಡ್ ಆಗಿಯೂ ನಟಿ ಎಲ್ಲರ ಕಣ್ಣು ಕುಕ್ಕುವಂತೆ ಕಾಣಿಸುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಅವರು ಇತ್ತೀಚಿಗೆ ಬಾಲಿವುಡ್ ನ ಅಂಗಳದಲ್ಲಿ ಇವೆಂಟ್ ಒಂದರಲಿ ಕೆಂಪು ಡ್ರೆಸ್ ಧರಿಸಿ ತುಂಬಾ ಬೋಲ್ಡ್ ಆಗಿ ಕಾಣಿಸಿದರು. ಅದರ ವಿಡಿಯೋ ಈಗ ವೈರಲ್ ಆಗಿದೆ ಸ್ನೇಹಿತರೆ. ರಶ್ಮಿಕಾ ಮಂದಣ್ಣ ಅವರ ಚೆಲುವು ದಿನದಿಂದ ದಿನಕ್ಕೆ ಬದಲಾಗುತ್ತಿದೆ ಎಂದು ಈ ವಿಡಿಯೋ ಮೂಲಕ ನೆಟ್ಟಿದರು ಹೇಳುತ್ತಿದ್ದಾರೆ. ನೀವು ಕೂಡ ಒಮ್ಮೆ ನಟಿ ರಶ್ಮಿಕಾ ಮಂದಣ್ಣ ಅವರ ಈ ಸಖತ್ ಮಾದಕ ವಿಡಿಯೋವನ್ನು ನೋಡಿ. ಅವರಾಡುವ ಮಾತುಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ವಿಡಿಯೋ ಇಷ್ಟವಾದಲ್ಲಿ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು...( video credit : bollywood ka masala )