ಮದುವೆ ಬಗ್ಗೆ ಕೊನೆಗೂ ಮೌನ ಮುರಿದ ರಶ್ಮಿಕಾ ಮಂದಣ್ಣ..! ಯಾರನ್ನ ಮದುವೆ ಆಗ್ತಾರೆ..?

By Infoflick Correspondent

Updated:Wednesday, March 2, 2022, 16:33[IST]

ಮದುವೆ ಬಗ್ಗೆ ಕೊನೆಗೂ ಮೌನ ಮುರಿದ ರಶ್ಮಿಕಾ ಮಂದಣ್ಣ..! ಯಾರನ್ನ ಮದುವೆ ಆಗ್ತಾರೆ..?

ನಟಿ ರಶ್ಮಿಕಾ ಮಂದಣ್ಣ (Rashmika Mandanna)  ಸೋಶಿಯಲ್ ಮೀಡಿಯಾದಲ್ಲಿ ಒಂದಲ್ಲ ಒಂದು ವಿಚಾರಗಳಿಗೆ ಹೆಚ್ಚು ಸುದ್ದಿಯಾಗುತ್ತಾರೆ. ಹೌದು ಕನ್ನಡ ಚಲನಚಿತ್ರರಂಗದ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಸಿನಿಮಾರಂಗಕ್ಕೆ ಪಾದರ್ಪಣೆ ಮಾಡಿದ ನಟಿ ರಶ್ಮಿಕಾ ಮಂದಣ್ಣ ಇದೀಗ ಎಲ್ಲಾ ಸಿನಿ ಕ್ಷೇತ್ರಗಳಲ್ಲಿಯೂ ತುಂಬಾ ಬ್ಯುಸಿಯಾಗಿದ್ದಾರೆ. ತೆಲುಗು, ತಮಿಳು, ಹಿಂದಿ ಹೀಗೆ ಎಲ್ಲಾ ಸ್ಟಾರ್ ನಟರ ಜೊತೆ ಅಭಿನಯಿಸುತ್ತಾ ತುಂಬಾ ಬ್ಯುಸಿ ಆಗಿದ್ದಾರೆ ಎಂದು ಹೇಳಬಹುದು. ನಟಿ ರಶ್ಮಿಕ ಮಂದಣ್ಣ ಹಾಗೂ ರಕ್ಷಿತ್ ಶೆಟ್ಟಿ ಮದುವೆ ಮುರಿದು ಬಿದ್ದಿರುವ ವಿಷಯ ಈಗಾಗಲೇ ಎಲ್ಲರಿಗೂ ಗೊತ್ತಿದೆ. ತೆಲುಗು ತಮಿಳು ಸಿನಿಮಾ ರಂಗದಲ್ಲಿ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿರುವ ರಶ್ಮಿಕ ಮಂದಣ್ಣ ಇತ್ತೀಚಿಗೆ ಟಾಲಿವುಡ್ ನಟ ವಿಜಯ್ ದೇವರಕೊಂಡ ಅವರ ಜೊತೆ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ.

ಹಾಗೇನೇ ಇವರಿಬ್ಬರ ನಡುವೆ ಏನೋ ಇದೆ ಎಂದು ಇವರ ಅಭಿಮಾನಿಗಳು ಮಾತನಾಡುತ್ತಿದ್ದು, ಈ ವರ್ಷದ ಕೊನೆಯಲ್ಲಿ ಇವರಿಬ್ಬರು ಮದುವೆಯಾಗಲಿದ್ದಾರೆ ಎನ್ನುವ ಮಾತುಗಳನ್ನು ಆಡಿದ್ದರು. ಹೌದು ಅದಕ್ಕೆ ಹಿನ್ನೆಡೆಯಂತೆ ವಿಜಯ್ ದೇವರಕೊಂಡ ಪ್ರತಿಕ್ರಿಯಿಸಿದ್ದು ಇದೆಲ್ಲ ಶುದ್ಧ ಸುಳ್ಳು ಎಂದು ಇದನ್ನು ತಳ್ಳಿ ಹಾಕಿದ್ದರು. ಇದೆಲ್ಲದರ ನಡುವೆ ಇದೀಗ ರಶ್ಮಿಕ ಮಂದಣ್ಣ  (Rashmika Mandanna)  ಅವರ ಮದುವೆ ವಿಚಾರವಾಗಿ ಮಾತನಾಡಿದ್ದಾರೆ. ಇತ್ತೀಚಿನ ಒಂದು ಸಂದರ್ಶನದಲ್ಲಿ ಹೇಳಿದ ಹಾಗೆ ರಶ್ಮಿಕ, ನನ್ನ ಬಗ್ಗೆ ಕೆಲವರು ಇಲ್ಲಸಲ್ಲದ ಸುದ್ದಿಗಳನ್ನು ಹರಡುತ್ತಿದ್ದಾರೆ. ನನ್ನ ಮದುವೆ ವಿಷಯದ ಬಗ್ಗೆ ಗಾಸಿಪ್ ಗಳನ್ನು ಹುಟ್ಟು ಹಾಕುತ್ತಿದ್ದಾರೆ. ಅವರಿಗೆ ಅದರಲ್ಲಿ ಖುಷಿ ಇದೆ ಎಂದಾದರೆ ಹಾಗೆ ಇರಲಿ.   

ಇದರ ಬಗ್ಗೆ ನಾನೇನೂ ಹೇಳುವುದಿಲ್ಲ. ಅವರು ಹಾಗೆ ಇರಲಿ ನಾನು ನಾನಾಗಿಯೇ ಇರುತ್ತೇನೆ ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ. ಹೌದು ರಶ್ಮಿಕಾ ಮಂದಣ್ಣ ಇದೀಗ ಹಿಂದಿ ಸಿನಿಮಾದಲ್ಲಿ ಬಿಜಿಯಾಗಿದ್ದಾರೆ. ಹೌದು ರಶ್ಮಿಕಾ ಅವರ ಈ ಪ್ರತಿಕ್ರಿಯೆ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ...