Rashmika Mandanna : ಕೊನೆಗೂ ಸಿನಿಮಾಗೆ ಗುಡ್ ಬೈ ಹೇಳಿದ ಕಿರಿಕ್ ಬೆಡಗಿ..! ಅಸಲಿಗೆ ಆಗಿದ್ದೆ ಬೇರೆ ಇಲ್ನೋಡಿ

By Infoflick Correspondent

Updated:Tuesday, July 26, 2022, 14:13[IST]

Rashmika Mandanna : ಕೊನೆಗೂ ಸಿನಿಮಾಗೆ ಗುಡ್ ಬೈ ಹೇಳಿದ ಕಿರಿಕ್ ಬೆಡಗಿ..! ಅಸಲಿಗೆ ಆಗಿದ್ದೆ ಬೇರೆ ಇಲ್ನೋಡಿ

ಕನ್ನಡದ ಮಿಲ್ಕ್ ಬ್ಯೂಟಿ ನಟಿ ರಶ್ಮಿಕಾ ಮಂದಣ್ಣ ಅವರು ಇದೀಗ ಮತ್ತೆ ಸುದ್ದಿಗೆ ಬಂದಿದ್ದಾರೆ. ಹೌದು ಕಿರಿಕ್ ಪಾರ್ಟಿ ಸಿನಿಮಾ ಮೂಲಕ ರಕ್ಷಿತ್ ಶೆಟ್ಟಿ ಜೊತೆಗೆ ತೆರೆ ಹಂಚಿಕೊಂಡ ಅವರು ಈಗಾಗಲೇ ದೊಡ್ಡದಾಗಿಯೇ ಮೊದಲ ಚಿತ್ರದಲ್ಲಿ ಸದ್ದು ಮಾಡಿದರು. ಹಾಗೆ ತಮಿಳು ತೆಲುಗು ಬಾಲಿವುಡ್ ಚಿತ್ರರಂಗದಲ್ಲೂ ಕೂಡ ಸದ್ದು ಮಾಡುತ್ತಿರುವುದು ಖುಷಿಯ ವಿಚಾರ ಎನ್ನಬಹುದು. ಕನ್ನಡದಿಂದ ತೆಲುಗುಗಿನ ಕಡೆ ಮುಖ ಮಾಡಿದ ನಟಿ ರಶ್ಮಿಕ ಪುಷ್ಪ ಸಿನಿಮಾದ ಮೂಲಕ ಹೆಚ್ಚು ಪ್ರಖ್ಯಾತಿ ಹೊಂದಿದ್ದು, ಈಗಲೂ ಸಹ ಹೆಚ್ಚು ಖ್ಯಾತಿ ಹೊಂದುತ್ತಲೇ ಇದ್ದಾರೆ ರಶ್ಮಿಕಾ. ಪುಷ್ಪ 2 ಚಿತ್ರದಲ್ಲಿಯೂ ಮಿಂಚಲು ರೆಡಿಯಾಗಿದ್ದಾರೆ. ಅತ್ತ ತಮಿಳು ಚಿತ್ರದಲ್ಲೂ ಸಹ ಸದ್ದು ಮಾಡಲು ನಟಿ ರಶ್ಮಿಕಾ ಮಂದಣ್ಣ ಈಗಾಗಲೇ ಎಲ್ಲಾ ಸಿದ್ಧತೆ ನಡೆಸಿಕೊಂಡಿದ್ದಾರೆ ಎನ್ನಲಾಗಿದೆ.

ಇದೀಗ ಅವರ ಬಾಲಿವುಡ್ ಸಿನಿಮಾದ ಒಂದು ಅಪ್ಡೇಟ್ ಹೊರಗಡೆ ಬಿದ್ದಿದೆ. ಅಸಲಿಗೆ ನಟಿ ರಶ್ಮಿಕಾ ಸಿನಿಮಾಗಳಿಗೆ ಗುಡ್ ಭೈ ಹೇಳಿದ್ರಾ ಎಂದು ಕೆಲವರ ಪ್ರಶ್ನೆ ಮಾಡಿದ್ದಾರೆ. ಆದ್ರೆ ಅದು ಹಾಗಲ್ಲ, ನಟಿ ರಶ್ಮಿಕಾ ಮಂದಣ್ಣ ಅವರ ಗುಡ್ ಬೈ ಸಿನಿಮದ ಬಗ್ಗೆ ರಶ್ಮಿಕಾ ಅಪ್ಡೇಟ್ ನೀಡಿದ್ದಾರೆ ಅಷ್ಟೇ. ಅವರು ಬಾಲಿವುಡ್ ಚಿತ್ರದಲ್ಲಿ ಅಭಿನಯಿಸುತ್ತಿರುವುದು ಇದೇ ಮೊದಲು. ಹಾಗೆ ಈ ಸಿನಿಮಾ ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಯಾಗುತ್ತಿದೆ ಎಂದು ಖುಷಿ ಹಂಚಿಕೊಂಡಿದ್ದಾರೆ ರಶ್ಮಿಕಾ. ಅವರ ಗುಡ್ ಬೈ ಸಿನಿಮಾ ಅಕ್ಟೋಬರ್ 7 ನೇ ತಾರೀಕು ಭರ್ಜರಿಯಾಗಿ ತೆರೆಯ ಮೇಲೆ ಬರಲು ಸಜ್ಜಾಗಿದೆ. ಹಾಗೆ ಇದು ಅಮಿತಾ ಬಚ್ಚನ್ ಅವರ ಸಿನಿಮಾವಾಗಿದ್ದು ಸಿನಿಮಾ ಮೇಲೆ ಹೆಚ್ಚು ನಿರೀಕ್ಷೆ ಕೂಡ ಇದೆ ಎಂದು ಹೇಳಬಹುದು.   

ಈ ಮೂಲಕ ನಟಿ ರಶ್ಮಿಕಾ ಮಂದಣ್ಣ ಗುಡ್ ಬೈ ಸಿನಿಮಾ ಬಗ್ಗೆ ಮಾತನಾಡಿದ್ದು ನನಗೆ ತುಂಬಾ ಖುಷಿಯಾಗಿದೆ. ದೊಡ್ಡ ದೊಡ್ಡ ಸ್ಟಾರ್ ಗಳ ಜೊತೆ ತೆರೆಯ ಹಂಚಿಕೊಳ್ಳುತ್ತಿರುವುದು ಹೆಚ್ಚು ಸಂತಸ ತಂದಿದೆ. ಎಂದು ಬಾಲಿವುಡ್ ನಲ್ಲಿ ಮೊದಲ ಅಭಿನಯದ ಸಿನಿಮಾ ಬಗ್ಗೆ ಹೇಳಿ ಅನಿಸಿಕೆಯನ್ನು ಖುಷಿಯ ಮೂಲಕ ಹಂಚಿಕೊಂಡಿದ್ದಾರೆ. ಇಲ್ಲಿದೆ ನೋಡಿ ರಶ್ಮಿಕ ಅವರ  ಗುಡ್ ಬೈ ಸಿನಿಮಾದ ಅಪ್ಡೇಟ್.ಈ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ರಶ್ಮಿಕಾ ಅವರು ದೊಡ್ಡದಾಗಿ ಇನ್ನೂ ಬಾಲಿವುಡ್ನಲ್ಲಿ ಬೆಳೆಯಲಿ ಎನ್ನುತ್ತಾ ಅವರಿಗೆ ಶುಭ ಕೋರಿ. ಹಾಗೆ ಗುಡ್ ಬೈ ಚಿತ್ರ ತಂಡಕ್ಕೆ ಒಳ್ಳೆಯದಾಗಲಿ ಎಂದು ಹರಸಿ ಧನ್ಯವಾದ...