Rashmika Mandanna : ರಶ್ಮಿಕಾ ಮಂದಣ್ಣ ಅಭಿನಯದ ಸಿನಿಮಾ ಬ್ಯಾನ್ ಎದುರಾಯಿತು ಸಂಕಷ್ಟ

By Infoflick Correspondent

Updated:Saturday, August 6, 2022, 09:34[IST]

Rashmika  Mandanna :  ರಶ್ಮಿಕಾ ಮಂದಣ್ಣ ಅಭಿನಯದ ಸಿನಿಮಾ ಬ್ಯಾನ್ ಎದುರಾಯಿತು ಸಂಕಷ್ಟ

ಸೀತಾ ರಾಮಂ' ಸಿನಿಮಾವನ್ನು ವೀಕ್ಷಿಸಿದ ಸೆನ್ಸಾರ್​ ಮಂಡಳಿ ಸದಸ್ಯರ ಅಭಿಪ್ರಾಯದ ಮೇರೆಗೆ ಈ ಚಿತ್ರವನ್ನು ಬ್ಯಾನ್​ ಮಾಡಲಾಗಿದೆ.ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಅವರು ಮುಸ್ಲಿಂ ಮಹಿಳೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈ ಪಾತ್ರವು ಚಿತ್ರದಲ್ಲಿನ ಬಹುಮುಖ್ಯ ಪಾತ್ರವಾಗಿದೆ ಎಂದು ನಿರ್ದೇಶಕರು ಈಗಾಗಲೇ ತಿಳಿಸಿದ್ದಾರೆ.  ಅವರ ಫಸ್ಟ್​ ಲುಕ್​ ನೋಡಿ ಅಭಿಮಾನಿಗಳು ಥ್ರಿಲ್​ ಆಗಿದ್ದರು. ಆದರೆ ಅವರು ಬುರ್ಕಾ ಧರಿಸಿ ಕಾಣಿಸಿಕೊಂಡಿದ್ದು ಅನೇಕರಿಗೆ ಅಚ್ಚರಿ ಮೂಡಿಸಿತ್ತು. ಈ ಚಿತ್ರದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗುವಂತಹ ಅಂಶಗಳಿವೆ ಎಂದು ಆರೋಪಿಸಿ ಅರಬ್​ ರಾಷ್ಟ್ರಗಳಲ್ಲಿ ಈ ಚಿತ್ರದ ಬಿಡುಗಡೆಯನ್ನು ನಿಷೇಧಿಸಲಾಗಿದೆ ಎಂದು ವರದಿ ಆಗಿದೆ. 

ಮಲಯಾಳಂ ಸಿನಿಮಾವಾದ ನಟ ದುಲ್ಕರ್​ ಸಲ್ಮಾನ್​ ಅಭಿನಯದ ಸೀತಾ ರಾಮಂ ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆ ಆಗಿದ್ದು, ಎಲ್ಲಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದರ ನಡುವೆ ಚಿತ್ರವು ಆಗಸ್ಟ್ 5 ಬಿಡುಗಡೆ ಆಗಲಿದೆ. ಆದರೆ ರಿಲೀಸ್​ಗೂ ಮುನ್ನವೇ ಚಿತ್ರತಂಡಕ್ಕೆ ಹೊಸ ಸಮಸ್ಯೆ ಎದುರಾಗಿದೆ. ಕೆಲವು ರಾಷ್ಟ್ರಗಳಲ್ಲಿ ಈ ಚಿತ್ರವನ್ನು ಬ್ಯಾನ್​ ಮಾಡಲಾಗಿದೆ ಎಂದು ತಿಳಿದುಬಂದಿದೆ. ಚಿತ್ರದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗುವಂತಹ ವಿಷಯಗಳಿವೆ ಎಂದು ಚಿತ್ರ ಬಿಡುಗಡೆಗೆ ಹಲವು ದೇಶಗಳು ವಿರೋಧ ವ್ಯಕ್ತಪಡಿಸಿವೆಯಂತೆ.

ವರದಿಯ ಪ್ರಕಾರ ಕುವೈತ್​, ಖತಾರ್​, ಸೌದಿ ಅರೇಬಿಯಾ, ಬಹ್ರೇನ್​, ಓಮನ್​ ಮುಂತಾದ ರಾಷ್ಟ್ರಗಳಲ್ಲಿ ಸಿನಿಮಾವನ್ನು ವೀಕ್ಷಿಸಿದ ಸೆನ್ಸಾರ್​ ಮಂಡಳಿ ಚಿತ್ರವನ್ನು ಬ್ಯಾನ್​ ಮಾಡಿರುವುದಾಗಿ ತಿಳಿದುಬಂದಿದೆ. ಹೀಗಾಗಿ ಚಿತ್ರತಂಡ ಇದಿಗ ಮತ್ತೊಮ್ಮೆ ಸೆನ್ಸಾರ್​ಗೆ ಮನವಿ ಸಲ್ಲಿಸಿದೆ ಎನ್ನಲಾಗುತ್ತಿದೆ.