ಲ್ಯಾಟರಲ್ ಲೆಗ್ರೇಸ್ ನಲ್ಲಿ ಸಕತ್ ಆಗಿ ಕಾಣಿಸಿದ ರಶ್ಮಿಕಾ..! ನಟಿಯ ಈ ವಿಡಿಯೋಗೇ ಎಲ್ಲರೂ ಫಿದಾ..!

By Infoflick Correspondent

Updated:Wednesday, March 30, 2022, 15:51[IST]

ಲ್ಯಾಟರಲ್ ಲೆಗ್ರೇಸ್ ನಲ್ಲಿ ಸಕತ್ ಆಗಿ ಕಾಣಿಸಿದ ರಶ್ಮಿಕಾ..! ನಟಿಯ ಈ ವಿಡಿಯೋಗೇ ಎಲ್ಲರೂ ಫಿದಾ..!

ರಶ್ಮಿಕ ಮಂದಣ್ಣ  (Rashmika Mandanna)  ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ಆಕ್ಟಿವ್ ಇರುವಂತಹ ನಟಿ. ನಮ್ಮ ಕನ್ನಡ ಸಿನಿಮಾರಂಗದ ಮೂಲಕ ಎಂಟ್ರಿ ಕೊಟ್ಟ ನಟಿ ರಶ್ಮಿಕಾ ಮಂದಣ್ಣ ಅವರು ಆರಂಭದ ದಿನಗಳಲ್ಲಿ ಕೇವಲ ಕರ್ನಾಟಕದಲ್ಲಿ ಮಾತ್ರ ಸ್ವಲ್ಪ ಹೆಸರು ಮಾಡಿದ್ದರು. ಚಿತ್ರ ಕಿರಿಕ್ ಪಾರ್ಟಿ ಮೂಲಕ ಇಡೀ ಕರ್ನಾಟಕದ ಮನೆಮಾತಾದ ನಟಿ ರಶ್ಮಿಕಾ ಮಂದಣ್ಣ ಹೆಚ್ಚು ಅಭಿಮಾನಿಗಳನ್ನು ಕೂಡ ಗಿಟ್ಟಿಸಿಕೊಂಡರು. ಅದಾದ ಬಳಿಕ ಅವರು ತುಂಬಾನೇ ಟ್ರೋಲ್ ಗೆ ಒಳಗಾಗಿದ್ದು ಉಂಟು. ನಮ್ಮ ಕನ್ನಡದ ಭಾಷೆ ವಿಷಯಕ್ಕೆ, ಕನ್ನಡ ಮಾತನಾಡಲು ಹಿಂದೇಟು ಹಾಕುತ್ತಾರೆ ಎಂಬ ವಿಷಯಕ್ಕೆ ರಶ್ಮಿಕ ಮಂದಣ್ಣ ತುಂಬಾನೇ ಸುದ್ದಿಯಲ್ಲಿದ್ದರು. ಜೊತೆಗೆ ಅಷ್ಟೇ ಟ್ರೋಲ್ ಕೂಡ ಆಗಿದ್ದರು.

ಹೌದು ಕನ್ನಡ ಚಿತ್ರರಂಗದಲ್ಲಿ ಕೆಲವೇ ಕೆಲ ಸಿನಿಮಾಗಳಲ್ಲಿ ಕಾಣಿಸಿದ ರಶ್ಮಿಕಾ, ಅದಾದ ನಂತರ ತೆಲುಗು, ತಮಿಳು, ಹಿಂದಿ ಹೀಗೆ ಬೇರೆ ಚಿತ್ರರಂಗಕ್ಕೆ ತೆರಳಿ ಈಗ ಬಾಲಿವುಡ್ ನಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾರೆ. ಈ ಸೋಶಿಯಲ್ ಮೀಡಿಯಾದಲ್ಲಿ ಅವರ ಅಭಿಮಾನಿಗಳು ಎಷ್ಟು ಇದ್ದಾರೋ ಅವರ ಕಾಲೆಳೆಯಲು ಸಹ ಅಷ್ಟೇ ನೆಟ್ಟಿಗರು ತುಂಬಾ ಮುಂದಿದ್ದಾರೆ. ರಶ್ಮಿಕ ಆಗಾಗ ಮಾಡಿಕೊಳ್ಳುವ ಕೆಲವು ಎಡವಟ್ಟು ಗಳಿಂದ, ಅವರ ವಿಡಿಯೋಗಳನ್ನ ಇಟ್ಟುಕೊಂಡು ನೆಟ್ಟಿಗರು ಟ್ರೋಲ್ ಮಾಡುತ್ತಲೇ ಇರುತ್ತಾರೆ. ಅದೇ ಒಂದು ಕೆಲಸ ಅವರಿಗಾಗಿದೆ ಎಂದು ಹೇಳಬಹುದು. 

ಆದರೆ ನಟಿ ರಶ್ಮಿಕಾ ಮಾತ್ರ ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳುವುದಿಲ್ಲ. ನಟಿ ರಶ್ಮಿಕಾ ಅವರು ಇದೀಗ ಉತ್ತುಂಗಕ್ಕೆ ಏರಿದ್ದು ಯಶಸ್ವಿಯಲ್ಲಿ ತೇಲಾಡುತ್ತಿದ್ದಾರೆ ಎಂದು ಹೇಳಬಹುದು.ರಶ್ಮಿಕಾ ಅವರ ಅಭಿಮಾನಿಗಳಿಗಾಗಿ ಆಗಾಗ ವ್ಯಾಯಾಮದ ವಿಡಿಯೋಗಳನ್ನು ಹಾಗೇನೇ ಈ ಜಿಮ್ ನಲ್ಲಿ ವರ್ಕೌಟ್ ಮಾಡುವ ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಇದೀಗ ಹಂಚಿಕೊಂಡಿರುವ ವಿಡಿಯೋ ಇಡೀ ಬಾಲಿವುಡ್ಡೆ ನಟಿ ರಶ್ಮಿಕ ಮಂದಣ್ಣ ಅವರ ಈ ಜಿಮ್ ವಿಡಿಯೋ ನೋಡಿ ಬೆಚ್ಚಿ ಬೆರಗಾಗಿದ್ದಾರೆ. ಅಷ್ಟಕ್ಕೂ ಇದು ನೋಡಲು ತುಂಬಾ ಸುಲಭ ಮಾಡುವುದಕ್ಕೆ ಕಷ್ಟ ಎಂದು ಹೇಳಲಾಗುತ್ತಿದ್ದು, ನೀವು ಸಹ ರಶ್ಮಿಕ ಅವರ ಲ್ಯಾಟರಲ್ ಲೆಗ್ ರೈಸ್ ನ ಸಕತ್ ವಿಡಿಯೋ ನೋಡಿ. ಹಾಗೆ ವಿಡಿಯೋ ಇಷ್ಟವಾದಲ್ಲಿ ಶೇರ್ ಮಾಡಿ...