Rashmi Mandanna about Yash : ಇಡೀ ಜಗತ್ತನ್ನೇ ಬೆರಗುಗೊಳಿಸಿದ ರಾಕಿಂಗ್ ಸ್ಟಾರ್ ಯಶ್ ಬಗ್ಗೆ ರಶ್ಮಿಕಾ ಮಂದಣ್ಣ ಏನ್ ಹೇಳಿದ್ದಾರೆ ನೋಡಿ..

By Infoflick Correspondent

Updated:Thursday, April 28, 2022, 14:50[IST]

Rashmi Mandanna about Yash : ಇಡೀ ಜಗತ್ತನ್ನೇ ಬೆರಗುಗೊಳಿಸಿದ ರಾಕಿಂಗ್ ಸ್ಟಾರ್ ಯಶ್ ಬಗ್ಗೆ ರಶ್ಮಿಕಾ ಮಂದಣ್ಣ ಏನ್ ಹೇಳಿದ್ದಾರೆ ನೋಡಿ..

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ನ್ಯಾಷನಲ್ ಕ್ರಶ್ ಆಗಲು ಕಾರಣವೇ ಸ್ಯಾಂಡಲ್ ವುಡ್ ನ ಕಿರಿಕ್ ಪಾರ್ಟಿ ಸಿನಿಮಾ. ಈ ಸಿನಿಮಾ ಮೂಲಕ ರಶ್ಮಿಕಾ ಮಂದಣ್ಣ ನಟನೆ ಮಾಡಲು ಶುರು ಮಾಡಿದ್ದು. ರಶ್ಮಿಕಾ ಕ್ಯೂಟ್ ಅಭಿನಯದ ಮೂಲಕವೇ ಹಲವು ಅಭಿಮಾನಿಗಳ ಮನಸ್ಸನ್ನು ಕದ್ದಿದ್ದರು. ಕಿರಿಕ್ ಪಾರ್ಟಿ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಜೊತೆಗೆ ಬೆಳಗೆದ್ದು ಯಾರ ಮುಖವ ನಾನು ನೋಡಲಿ ಎಂಬ ಹಾಡಿಗೆ ಹೆಜ್ಜೆ ಹಾಕಿ ಬೆಳಗಾಗುವಷ್ಟರಲ್ಲಿ ಕರ್ನಾಟಕದ ಗಲ್ಲಿಗಲ್ಲಿಗಳಲ್ಲಿ ಸದ್ದು ಮಾಡಿದ್ದರು. ಈ ಸಿನಿಮಾದಿಂದಲೇ ಕಣ್ತೆರೆಯುವದರೊಳಗೆ ರಶ್ಮಿಕಾಗೆ ಸ್ಟಾರ್ ಪಟ್ಟ ಸಿಕ್ಕಿತ್ತು.  

ಕಿರಿಕ್ ಪಾರ್ಟಿ ಸಿನಿಮಾದಿಂದ ಸಕ್ಸಸ್ ಕಂಡ ರಶ್ಮಿಕಾ ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು, ಹಿಂದಿ ಚಿತ್ರಗಳಲ್ಲೂ ಅಭಿನಯಿಸುವ ಚಾನ್ಸ್ ಅನ್ನು ತಮ್ಮದಾಗಿಸಿಕೊಂಡರು. ರಶ್ಮಿಕಾ ಮಂದಣ್ಣ ನಟನೆಯ ಚಿತ್ರಗಳು ಬ್ಯಾಕ್ ಟು ಬ್ಯಾಕ್ ಸಕ್ಸಸ್ ಕಂಡು ಆಕೆಯನ್ನು ನ್ಯಾಷನಲ್ ಕ್ರಶ್ ಮಾಡಿತ್ತು. ಹೀಗಾಗಿ ರಶ್ಮಿಕಾ ಅವರ ಬೇಡಿಕೆ ಭಾರತದ ಚಿತ್ರರಂಗದಲ್ಲಿ ಹೆಚ್ಚಾಗಿತ್ತು. ರಶ್ಮಿಕಾ ಕೇವಲ ಅಭಿನಯದಿಂದ ಮಾತ್ರವಲ್ಲದೆ ವಿವಾದಾತ್ಮಕ ಹೇಳಿಕೆಗಳಿಂದಲೂ ಕಳೆದ 5-6 ವರ್ಷಗಳ ಕಾಲ ಸದಾ ಸುದ್ದಿಯಲ್ಲಿರುತ್ತಾರೆ. ಅದರಲ್ಲೂ ಅತಿ ಹೆಚ್ಚಾಗಿ ಟ್ರೊಲ್ ಪೇಜ್ ಗಳಿಗೆ ರಶ್ಮಿಕಾ ದಿನನಿತ್ಯದ ಆಹಾರವಾಗಿ ಬಿಟ್ಟಿದ್ದಾರೆ.    

ಹೀಗೆ ಸದಾ ಟ್ರೋಲ್ ಆಗುವ ರಶ್ಮಿಕಾ ಮಂದಣ್ಣ ಅವರು ಒಮ್ಮೆ ಯಶ್ ಯಾರು ಎಂದು ಕೇಳಿ ವಿವಾದಕ್ಕೀಡಾಗಿದ್ದರು. ಅಷ್ಟೇ ಅಲ್ಲದೇ, ಸಂದರ್ಶನವೊಂದರಲ್ಲಿ ಮಾತನಾಡಿದ್ದ ರಶ್ಮಿಕಾ ಅವರಿಗೆ ಷೋ ಆಫ್ ನಟ ಯಾರು ಎಂದು ಪ್ರಶ್ನೆ ಮಾಡಿದ್ದರು. ಆಗ ರಶ್ಮಿಕಾ ಮಂದಣ್ಣ ಅವರು ನೇರವಾಗಿ, ಯಶ್ ಸ್ಯಾಂಡಲ್ ವುಡ್ ನ ಷೋ ಆಫ್ ಎಂದು ಹೇಳಿದ್ದರು. ಈ ಹೇಳಿಕೆಯನ್ನು ಕೇಳಿದ ಯಶ್ ಅಭಿಮಾನಿಗಳು ರಶ್ಮಿಕಾಗೆ ಹಿಗ್ಗಾಮುಗ್ಗ ಟ್ರೋಲ್ ಮಾಡಲು ಶುರು ಮಾಡಿದರು. ಬಳಿಕ ರಶ್ಮಿಕಾ ಮಾತು ಬದಲಿಸಿ, ಕ್ಷಮೆಯಾಚಿಸಿ ಸೈಲೆಂಟ್ ಆಗಿ ಬಿಟ್ಟರು.