Rashmika Mandanna : ಎಷ್ಟು ಕೋಟಿ ಕೊಟ್ರೆ ಮಾತ್ರ ರಶ್ಮಿಕಾ ಸಿನಿಮಾಗೆ ಸಹಿ ಹಾಕೋದು..? ನಿರ್ಮಾಪಕರು ಶಾಕ್
Updated:Saturday, June 11, 2022, 09:51[IST]

ಮಲೆನಾಡ ಕುವರಿ, ಚಂದನವನದಿಂದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ತೆರೆ ಮೇಲೆ ಬಂದ ರಶ್ಮಿಕಾ ಮಂದಣ್ಣ ಈಗ ನ್ಯಾಷನಲ್ ಕ್ರಶ್. ಕಳೆದ ಐದು ವರ್ಷದಲ್ಲಿ ಈಗಾಗಲೇ ಕನ್ನಡ, ತೆಲುಗಿನಲ್ಲಿ ದೊಡ್ಡ ಯಶಸ್ಸು ಕಂಡಿದ್ದಾರೆ. ಇಡೀ ದಕ್ಷಿಣ ಭಾರತದಲ್ಲಿ ಲೀಡಿಂಗ್ ನಲ್ಲಿರೋ ನಾಯಕಿ ಎಂದರೆ ಅದು ರಶ್ಮಿಕಾ ಮಂದಣ್ಣ. ಈಗ ರಶ್ಮಿಕಾ ಮಂದಣ್ಣ ಮುಟ್ಟಿದ್ದೆಲ್ಲವೂ ಚಿನ್ನವೇ. ಈಗ ಸ್ಯಾಂಡಲ್ ವುಡ್, ಬಾಲಿವುಡ್ ಹಾಗೂ ಟಾಲಿವುಡ್ ನಲ್ಲಿ ಬಹುಬೇಡಿಕೆಯ ನಟಿಯಾಗಿದ್ದಾರೆ. ಸೌತ್ನ ಅನೇಕ ಸ್ಟಾರ್ ಹೀರೋಗಳ ಜೊತೆಗೆ ರಶ್ಮಿಕಾ ಅವರು ನಟಿಸಿದ್ದಾರೆ.
ಇದೀಗ ಬಾಲಿವುಡ್ ನಲ್ಲಿಯೂ ತನ್ನ ಛಾಪನ್ನು ಮೂಡಿಸಿರುವ ರಶ್ಮಿಕಾ, ಇತ್ತೀಚೆಗಷ್ಟೇ ಫಿಲ್ಮ್ ಫೇರ್ ಕವರ್ ಪೇಜ್ ನಲ್ಲಿ ಕಾಣಿಸಿಕೊಂಡಿದ್ದರು. ತೆಲುಗು, ತಮಿಳು, ಮಲಯಾಳಂ ಸಿನಿಮಾಗಳಲ್ಲಿ ಮಾತ್ರ ಜನಪ್ರಿಯತೆ ಗಳಿಸಿದ್ದಾರೆ. ರಶ್ಮಿಕಾ ಮಂದಣ್ಣ ಈಗ ಬಾಲಿವುಡ್ ನಲ್ಲೂ ಬ್ಯುಸಿಯಾಗಿದ್ದಾರೆ. ಅಲ್ಲು ಅರ್ಜುನ್ ಜೊತೆ ಪುಷ್ಪ ಚಿತ್ರದಲ್ಲಿ ನಟಿಸಿದ ಮೇಲಂತೂ ರಶ್ಮಿಕಾ ಫೇಮ್ ಬದಲಾಗಿದೆ. ಪುಷ್ಪ ಚಿತ್ರದಲ್ಲಿ ರಶ್ಮಿಕಾ ಅವರು ಶ್ರೀವಲ್ಲಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳಿಗೆ ರಸದೌತಣ ಬಡಿಸಿದ್ದರು. ರಶ್ಮಿಕಾ ಅವರು ಈಗ ಪುಷ್ಪ ಚಿತ್ರದ ಮೂಲಕ ತಮ್ಮ ಅಭಿಮಾನಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದ್ದಾರೆ.
ಕಿರಿಕ್ ಕೀರ್ತಿ, ಚಲೋ, ಗೀತಾ ಗೋವಿಂದಂ, ಡಿಯರ್ ಕಾಮ್ರೇಡ್, ಪೊಗರು ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನು ಇದೀಗ, ವಿಜಯ್ ಅವರ ಜೊತೆಗೆ ತೆರೆ ಹಂಚಿಕೊಳ್ಳಲು ಸಜ್ಜಾಗಿದ್ದಾರೆ, ಇದರ ಜೊತೆಗೆ ಪುಷ್ಪಾ 2 ಹಾಗೂ ಬಾಲಿವುಡ್ ಕೆಲವು ಚಿತ್ರಗಳಿಗೆ ಸಹಿ ಹಾಕಿದ್ದಾರೆ. ಆದರೆ ಈಗ ರಶ್ಮಿಕಾ ಮಂದಣ್ಣ ಕಾಸ್ಟ್ಲಿ ಹೀರೋಯಿನ್ ಎಂದರೆ ತಪ್ಪಿಲ್ಲ. ಈಗ ರಶ್ಮಿಕಾ ಮಂದಣ್ಣ ಅವರ ಸಂಭಾವನೆ ಗಗನಕ್ಕೇರಿದೆ. ಬರೋಬ್ಬರಿ ನಾಲ್ಕು ಕೋಟಿ ಪಡೆಯದೇ ಯಾವ ಚಿತ್ರದಲ್ಲೂ ನಟಿಸೋಲ್ಲ ಎನ್ನುತ್ತಿದ್ದಾ ರಶ್ಮಿಕಾ ಮಂದಣ್ಣ. ಹೌದು ಈಗ ಅವರಿಗೆ ಒಂದು ಸಿನಿಮಾಗಾಗಿ ಬರೋಬ್ಬರಿ ನಾಲ್ಕು ಕೋಟಿ ರೂಪಾಯಿ ಕೇಳುತ್ತಿದ್ದಾರಂತೆ.