Rashmika Mandanna : ಪುಷ್ಪ ಚಿತ್ರದ ನಂತರ ರಶ್ಮಿಕಾ ಚಿತ್ರವೊಂದಕ್ಕೆ ಪಡೆಯುವ ಹಣವೆಷ್ಟು ಗೊತ್ತೇ..? ..! ಶಾಕ್ ಆಗ್ತೀರಾ
Updated:Sunday, June 5, 2022, 20:24[IST]

ಕನ್ನಡ ಚಿತ್ರರಂಗದ ಖ್ಯಾತ ನಟಿ ರಶ್ಮಿಕ ಮಂದಣ್ಣ ಇದೀಗ ಹೆಚ್ಚು ಟಾಪ್ ನಟಿಯರ ಪಟ್ಟಿಯಲ್ಲಿ ಸೇರಿದ್ದಾರೆ. ಹೌದು ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ನಟ ರಕ್ಷಿತ್ ಶೆಟ್ಟಿ ಅವರ ಅಭಿನಯದ ಕಿರಿಕ್ ಪಾರ್ಟಿ ಮೂಲಕ ಹೆಚ್ಚು ಅಭಿಮಾನಿ ಬಳಗ ಗಿಟ್ಟಿಸಿಕೊಂಡು ಹೆಚ್ಚು ಗುರುತಿಸಿಕೊಂಡಿದ್ದು ತೆಲುಗು ಸಿನಿಮಾರಂಗದಲ್ಲಿ ಎಂದು ಹೇಳಬಹುದು. ನಟಿ ರಶ್ಮಿಕ ಮಂದಣ್ಣ ಅವರು ಇದೀಗ ಹೆಚ್ಚು ತೆಲುಗು ಚಿತ್ರರಂಗದಲ್ಲಿ ಬಿಜಿಯಾಗಿದ್ದಾರೆ. ಹಾಗೆ ಬಾಲಿವುಡ್ ರಂಗದ ಚಿತ್ರದಲ್ಲೂ ಕೂಡ ಮಿಂಚುವುದಕ್ಕೆ ರೆಡಿಯಾಗಿದ್ದಾರೆ. ರಶ್ಮಿಕಾ ಮಂದಣ್ಣ ಮುಟ್ಟಿದ್ದೆಲ್ಲಾ ಚಿನ್ನ ಎಂಬಂತೆ ಒಟ್ಟು ನಾಲ್ಕು ವರ್ಷದಲ್ಲಿ ತುಂಬಾನೇ ಹಣಗಳಿಕೆ ಮಾಡಿದ್ದಾರೆಂದು ವರದಿಯಾಗಿದೆ.
ಹೌದು ತೆಲುಗಿನ ಟಾಪ್ ಸ್ಟಾರ್ ನಟ ಅಲ್ಲು ಅರ್ಜುನ್ ಅವರ ಪುಷ್ಪ ಸಿನಿಮಾ ಬಂದ ಬಳಿಕ ಮತ್ತೆ ರಶ್ಮಿಕ ಮಂದಣ್ಣ ಅವರ ಸಂಭಾವನೆಯೂ ಕೂಡ ಹೆಚ್ಚಾಗಿದೆಯಂತೆ. ನಟಿ ರಶ್ಮಿಕಾ ಮಂದಣ್ಣ ಅವರು ಮಾಡಿದ ಸಿನಿಮಾಗಳೆಲ್ಲವೂ ತುಂಬಾ ಹಿಟ್. ಪುಷ್ಪಾ ಸಿನಿಮಾ ಕೂಡಾ ಬ್ಲಾಕ್ಬಸ್ಟರ್ ಹಿಟ್ ಆಗಿತ್ತು. ನಟಿ ರಶ್ಮಿಕಾ ಮಂದಣ್ಣ ಕೇವಲ ಚಿತ್ರದ ಮೂಲಕ ಸಂಭಾವನೆ ಹೆಚ್ಚಿಗೆ ಮಾಡಿಕೊಳ್ಳುವುದಲ್ಲದೆ. ಕೆಲವು ಜಾಹೀರಾತುಗಳಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ಪುಷ್ಪ ಸಿನಿಮಾದ ಬಳಿಕ ಸಿನಿಮಾವೊಂದಕ್ಕೆ ಒಟ್ಟು 4 ಕೋಟಿ ಹಣ ಸಂಭಾವನೆ ಪಡೆಯುತ್ತಿದ್ದಾರೆ ಎಂದು ಕೇಳಿಬಂದಿದೆ. ರಶ್ಮಿಕಾ ಮಂದಣ್ಣ ಅವರು ಯಾವ ಸಿನಿಮಾ ನಟರಿಗೂ ಕಡಿಮೆಯಿಲ್ಲ. ಈ ಚಿತ್ರರಂಗದಲ್ಲಿ ನಟರಿಗಿಂತ ನಟಿಯರಿಗೆ ಸಂಭಾವನೆ ಕಡಿಮೆ ಎನ್ನುವ ಮಾತನ್ನು ಸುಳ್ಳು ಮಾಡಿದ್ದಾರೆ ಎನ್ನಬಹುದು.
ನಟಿಯರಿಗೆ ಹೆಚ್ಚು ಸಂಭಾವನೆ ಚಿತ್ರರಂಗದಲ್ಲಿ ಸಿಗುವುದಿಲ್ಲ, ಆದರೆ ರಶ್ಮಿಕ ಮಂದಣ್ಣ ಅವರ ಒಟ್ಟು ನಾಲ್ಕು ವರ್ಷದಲ್ಲಿ ಸುಮಾರು 40 ಕೋಟಿ ಹಣ ಗಳಿಕೆ ಮಾಡಿದ್ದಾರೆ ಎಂದು ಕೇಳಿಬಂದಿದೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ರಶ್ಮಿಕ ಮಂದಣ್ಣ ಅವರ ಅಪ್ಪಟ ಅಭಿಮಾನಿಯಾಗಿದ್ದಲ್ಲಿ ತಪ್ಪದೆ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು...