Rashmika Mandanna : ಕರಣ್ ಜೋಹರ್ ಬರ್ತಡೆ ಪಾರ್ಟಿಯಲ್ಲಿ ಮಿಂಚಿದ ರಶ್ಮಿಕಾ ಮಂದಣ್ಣ..! ನಟಿಯ ಅವತಾರ ನೋಡಿ

By Infoflick Correspondent

Updated:Thursday, May 26, 2022, 11:00[IST]

Rashmika Mandanna : ಕರಣ್ ಜೋಹರ್ ಬರ್ತಡೆ ಪಾರ್ಟಿಯಲ್ಲಿ ಮಿಂಚಿದ ರಶ್ಮಿಕಾ ಮಂದಣ್ಣ..! ನಟಿಯ ಅವತಾರ ನೋಡಿ

ಕನ್ನಡ ಚಿತ್ರರಂಗದ ಖ್ಯಾತ ನಟಿ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದ ನಟಿ ರಶ್ಮಿಕಾ ಮಂದಣ್ಣ ಇದೀಗ ತೆಲುಗು, ಬಾಲಿವುಡ್, ಹಾಗೆ ತಮಿಳು ಬೇರೆಬೇರೆ ಸಿನಿಮಾರಂಗದಲ್ಲಿ ತುಂಬಾನೇ ಮಿಂಚುತ್ತಿದ್ದಾರೆ. ಸ್ಟಾರ್ ನಟರ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ನಟ ಅಲ್ಲು ಅರ್ಜುನ್ ಅವರ ಜೊತೆ ಪುಷ್ಪ 2 ಸಿನಿಮಾದಲ್ಲಿಯೂ  ಸಹ ತುಂಬಾ ಬಿಜಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಹೌದು ಇತ್ತೀಚೆಗಷ್ಟೇ ಬೀಚ್ ಮಧ್ಯೆ ನಿಂತು ನಟ ವರುಣ್ ಜೊತೆ ವಾಲಿಬಾಲ್ ಆಡಿ ವಿಡಿಯೋ ಮೂಲಕ ಸದ್ದು ಮಾಡಿದ್ದ ನಟಿ ರಶ್ಮಿಕಾ ಮಂದಣ್ಣ ಅವರು, ಇದೀಗ ಬಾಲಿವುಡ್ ಖ್ಯಾತ ನಿರೂಪಕರಾದ ಕರಣ್ ಅವರ ಬರ್ತಡೇ ಪಾರ್ಟಿಯಲ್ಲಿ ತಡರಾತ್ರಿ ಕಾಣಿಸಿದ್ದಾರೆ. 

ಕರಣ್ ಜೋಹರ್ ಅವರು ಸುಮಾರು ವರ್ಷಗಳಿಂದ ಕಾಫಿ ವಿತ್ ಕರಣ್ ಎಂಬ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದು ಜೊತೆಗೆ ಖ್ಯಾತ ನಿರೂಪಕ ಎನ್ನುವುದು ಎಲ್ಲರಿಗೂ ಗೊತ್ತು. ಹಾಗೆ ದೊಡ್ಡ ದೊಡ್ಡ ಚಿತ್ರಗಳನ್ನು ನಿರ್ಮಾಣ ಕೂಡ ಮಾಡಿದ್ದಾರೆ. ಜೊತೆಗೆ ನಿರ್ದೇಶನದಲ್ಲೂ ಕೂಡ ಕರಣ್ ಅವರ ಕೊಡುಗೆ ತುಂಬಾ ಇದೆ. ಇತ್ತೀಚಿಗಷ್ಟೇ ಕೆಜಿಎಫ್ ಭಾಗ 2 ಸಿನಿಮಾದ ಫ್ರೀ ರಿಲೀಸ್ ಇವೆಂಟ್ ಕಾರ್ಯಕ್ರಮದಲ್ಲೂ ಕೂಡ ಕಾಣಿಸಿಕೊಂಡಿದ್ದರು. ಇದೀಗ ಕರಣ್ ಅವರಿಗೆ 50 ವರ್ಷದ ಸಂಭ್ರಮ. 50 ವರ್ಷದ ಹುಟ್ಟು ಹಬ್ಬದ ಕಾರ್ಯಕ್ರಮ ನಿನ್ನೆ ಭರ್ಜರಿ ನಡೆಯಿತು. ಕಾರ್ಯಕ್ರಮಕ್ಕೆ ಬಾಲಿವುಡ್ ದೊಡ್ಡ ದೊಡ್ಡ ನಟರು ಕೂಡ ಬಂದಿದ್ದರು ಎನ್ನಲಾಗಿದೆ.   

ಜೊತೆಗೆ ಕನ್ನಡದ ರಶ್ಮಿಕ ಮಂದಣ್ಣ ಕೂಡ ಆಗಮಿಸಿದ್ದರು. ಹೌದು ಆಗಮಿಸಿದ ಎಲ್ಲಾ ಸ್ಟಾರ್ ನಟ ನಟಿಯರು ಕರಣ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದರು. ಜೊತೆಗೆ ಕರಣ್ ಬರ್ತಡೇ ಪಾರ್ಟಿಯಲ್ಲಿ ತುಂಬಾನೇ ಮಿಂಚಿದರು ಎನ್ನಬಹುದು. ಇದೀಗ ಅದೇ ಸಾಲಿಗೆ ಕನ್ನಡದ ನಟಿ ರಶ್ಮಿಕಾ ಮಂದಣ್ಣ ಕೂಡ ಸೇರಿದ್ದಾರೆ. ಕರಣ್ ಅವರ ಬರ್ತಡೇ ಪಾರ್ಟಿಯಲ್ಲಿ ಕಾಣಿಸಿಕೊಂಡ ರಶ್ಮಿಕ ತುಂಬಾ ಬೋಲ್ಡ್ ಆಗಿ ಕಾಣಿಸಿದರು. ಸಕ್ಕತ್ ಮಾದಕ ರೀತಿ ಡ್ರೆಸ್ ಮಾಡಿದ್ದ ರಶ್ಮಿಕ ಅವರನ್ನು ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ ಎಂದು ಹೇಳಬಹುದು. ಅಸಲಿಗೆ ನಟಿ ರಶ್ಮಿಕಾ ಬರ್ತಡೇ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದು ಹೇಗೆ ಗೊತ್ತಾ.? ಇಲ್ಲಿದೆ ನೋಡಿ ಆ ವಿಡಿಯೋ. ಒಮ್ಮೆ ನೋಡಿ ಬೆರಗಾಗುತ್ತೀರಾ. ಹಾಗೆ ವಿಡಿಯೋ ಇಷ್ಟವಾದಲ್ಲಿ ಶೇರ್ ಮಾಡಿ ಧನ್ಯವಾದ.