Rashmika Mandanna : ಚಿಕ್ಕವಯಸ್ಸಿನಿಂದ ರಶ್ಮಿಕಾ ಅವರ ಕ್ರಶ್ ಅದ ಖ್ಯಾತ ನಟನೊಂದಿಗೆ ನಟಿಸುವ ಅವಕಾಶ ಪಡೆದು ಕೊಂಡ ರಶ್ಮಿಕಾ : ಯಾರು ಆ ನಟ ನೋಡಿ ?

By Infoflick Correspondent

Updated:Thursday, June 2, 2022, 20:06[IST]

Rashmika Mandanna :  ಚಿಕ್ಕವಯಸ್ಸಿನಿಂದ ರಶ್ಮಿಕಾ ಅವರ ಕ್ರಶ್ ಅದ ಖ್ಯಾತ ನಟನೊಂದಿಗೆ ನಟಿಸುವ ಅವಕಾಶ ಪಡೆದು ಕೊಂಡ ರಶ್ಮಿಕಾ : ಯಾರು  ಆ ನಟ ನೋಡಿ ?

ಕಳೆದ ಐದು ವರ್ಷದಲ್ಲಿ ಈಗಾಗಲೇ ಕನ್ನಡ, ತೆಲುಗಿನಲ್ಲಿ ದೊಡ್ಡ ಯಶಸ್ಸು ಕಂಡಿದ್ದಾರೆ. ಇಡೀ ದಕ್ಷಿಣ ಭಾರತದಲ್ಲಿ ಲೀಡಿಂಗ್ ನಲ್ಲಿರೋ ನಾಯಕಿ ಎಂದರೆ ಅದು ರಶ್ಮಿಕಾ ಮಂದಣ್ಣ. ಈಗ ರಶ್ಮಿಕಾ ಮಂದಣ್ಣ ಮುಟ್ಟಿದ್ದೆಲ್ಲವೂ ಚಿನ್ನವೇ. ಅಲ್ಲು ಅರ್ಜುನ್ ಜೊತೆ ಪುಷ್ಪ ಚಿತ್ರ ಮಾಡಿದ ನಂತರ ರಶ್ಮಿಕಾ ಲಕ್ ಇನ್ನೂ ಡಬಲ್ ಆಗಿದೆ. ಪುಷ್ಪಾದಲ್ಲಿ ರಶ್ಮಿಕಾ ಅವರು ಶ್ರೀವಲ್ಲಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ರಿಲೀಸ್ ಆದಮೇಲೆ, ಇದೀಗ ಅವರು ಹಲವಾರು ಪ್ರಾಡಕ್ಟ್ ಗಳಿಗೆ ಬ್ರ್ಯಾಂಡ್ ಅಂಬ್ಯಾಸಿಡರ್ ಆಗಿದ್ದಾರೆ. ಹತ್ತಾರು ಪ್ರಾಡಕ್ಟ್ ಗಳ ಜಾಹೀರಾತುಗಳಲ್ಲಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ.

ಈಗ ಬಾಲಿವುಡ್, ಟಾಲಿವುಡ್ ಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಣ ಈಗ ಕಾಲಿವುಡ್ ಗೂ ಎಂಟ್ರಿ ಕೊಟ್ಟಿದ್ದಾರೆ. ಹೌದು, ಕಾಲಿವುಡ್ ನಲ್ಲಿ ದಳಪತಿ ವಿಜಯ್ ಜೊತೆಗೆ ತೆರೆ ಹಂಚಿಕೊಳ್ಳಲು ಸಜ್ಜಾಗಿದ್ದಾರೆ. ವಿಜಯ್ ಅವರ 66ನೇ ಚಿತ್ರವನ್ನು ರಿವೀಲ್ ಆಗಿದೆ. ದಳಪತಿ 66 ಚಿತ್ರ ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ವಂಶಿ ಪೈಡಿಪಲ್ಲಿ ನಿರ್ದೇಶಿಸುತ್ತಿದ್ದಾರೆ. ಇನ್ನು ಖ್ಯಾತ ನಿರ್ಮಾಪಕ ದಿಲ್ ರಾಜು  ದಳಪತಿ 66  ಚಿತ್ರದ ನಿರ್ಮಾಣದ ಹೊಣೆಯನ್ನು ಹೊತ್ತಿದ್ದಾರೆ. ಈ ಚಿತ್ರ ತೆಲುಗು ಹಾಗೂ ತಮಿಳು ಎರಡು ಭಾಷೆಯಲ್ಲೂ ರಿಲೀಸ್ ಆಗಲಿದೆ.  

ಈ ಚಿತ್ರದಲ್ಲಿ ನ್ಯಾಷನಲ್ ಕ್ರಶ್, ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಬಣ್ಣ ಹಚ್ಚುತ್ತಿದ್ದಾರೆ. ವಿಜಯ್ ಜೊತೆಗೆ ನಾಯಕಿ ಪಾತ್ರದಲ್ಲಿ ರಶ್ಮಿಕಾ ಕಾಣಿಸಿಕೊಳ್ಳಲಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ತಮ್ಮ ಜರ್ನಿ ಆರಂಭಿಸಿದ ರಶ್ಮಿಕಾ ಅವರು ಚಲೋ, ಗೀತಾ ಗೋವಿಂದಂ, ಡಿಯರ್ ಕಾಮ್ರೇಡ್ ಅಂತಹ ಸಿನಿಮಾಗಳಲ್ಲಿ ನಟಿಸಿ ಅಭಿಮಾನಿಗಳ ಬಳಗವನ್ನು ಹೆಚ್ಚಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಪುಷ್ಪ ಚಿತ್ರದಲ್ಲಿ ಮೋಡಿ ಮಾಡಿದ್ದು, ರಶ್ಮಿಕಾ ಈಗ ಬಾಲಿವುಡ್ ನ ಮಿಷನ್ ಮಜ್ನು ಹಾಗೂ ಗುಡ್ ಬೈ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಪುಷ್ಪ 2 ಚಿತ್ರದ ಶೂಟಿಂಗ್ ನಲ್ಲೂ ಭಾಗಿಯಾಗಲಿದ್ದಾರೆ. ಅದಾಗಲೇ ಮತ್ತೊಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 

66 ಸಿನಿಮಾ ಶೂಟಿಂಗ್ ಆರಂಭವಾದಾಗ ಕ್ಲಾಪ್ ಮಾಡಿದ ಬಳಿಕ ರಶ್ಮಿಕಾ ಅವರು ವಿಜಯ್ ಅವರ ಬಳಿ ಹೋಗಿ ಕಾಲ ಕಳೆದಿದ್ದಾರೆ.  ಇದಕ್ಕೆ ಕಾರಣವನ್ನೂ ಹಂಚಿಕೊಂಡಿದ್ದಾರೆ.  ಅದೇನೆಂದರೆ ಚಿಕ್ಕವಯಸ್ಸಿನಿಂದ ರಶ್ಮಿಕಾ ಅವರ ಕ್ರಶ್ ಯಾರು ಗೊತ್ತಾ..?  ವಿಜಯ್ ಎಂದರೆ ರಶ್ಮಿಕಾ ಅವರಿಗೆ ತುಂಬಾ ಇಷ್ಟವಂತೆ.  ಈಗ ಅವರನ್ನು ನೋಡಿದ ಸಂತಸವನ್ನು ಹಂಚಿಕೊಂಡಿದ್ದಾರೆ.

Rashmika Mandanna :  ಚಿಕ್ಕವಯಸ್ಸಿನಿಂದ ರಶ್ಮಿಕಾ ಅವರ ಕ್ರಶ್ ಅದ ಖ್ಯಾತ ನಟನೊಂದಿಗೆ ನಟಿಸುವ ಅವಕಾಶ ಪಡೆದು ಕೊಂಡ ರಶ್ಮಿಕಾ : ಯಾರು  ಆ ನಟ ನೋಡಿ ?