Rashmika Mandanna : ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಬ್ರೇಕಪ್ ಆಗಿದ್ದಾರಾ.. ನಿಜ ಸ್ಥಿತಿ ಏನು ?

By Infoflick Correspondent

Updated:Friday, May 27, 2022, 16:28[IST]

Rashmika Mandanna :   ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಬ್ರೇಕಪ್ ಆಗಿದ್ದಾರಾ..  ನಿಜ  ಸ್ಥಿತಿ  ಏನು ?

ಈಗಾಗಲೇ ಕನ್ನಡ, ತೆಲುಗು, ತಮಿಳಿನಲ್ಲಿ ದೊಡ್ಡ ಯಶಸ್ಸು ಕಂಡಿರುವ ನಟಿ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್ ಗೂ ಹಾರಿದ್ದಾರೆ. ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮುಂಬೈನಲ್ಲಿ ನೆಲೆಸಿದ್ದಾಗ ಇಬ್ಬರು ಒಟ್ಟೊಟ್ಟಿಗೆ ಸುತ್ತಾಡಿದ್ದೇ ಸುತ್ತಾಡಿದ್ದು. ಇಬ್ಬರೂ ಈಗ ಬಾಲಿವುಡ್ ನಲ್ಲಿರುವುದರಿಂದ ಜನ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಡೇಟಿಂಗ್ ಮಾಡುತ್ತಿದ್ದಾರೆ. ಇಬ್ಬರೂ ಮದುವೆಯಾಗುತ್ತಾರೆ ಎಂಬ ಗುಸು ಗುಸು ಮಾತುಗಳು ಕೇಳಿ ಬಂದಿದ್ದವು. ಈ ವಿಚಾರ ಸೋಶೀಯಲ್ ಮೀಡಿಯಾದಲ್ಲೂ ಚರ್ಚೆಯಾಗಿತ್ತು.  

ಈ ನಡುವೆ ರಶ್ಮಿಕಾ ಹಾಗೂ ವಿಜಯ್ ಮದುವೆಯ ಬಗ್ಗೆ ಮೌನ ಮುರಿದ ವಿಜಯ್ ದೇವರಕೊಂಡ, ಈ ಬಗ್ಗೆ ಟ್ವೀಟ್ ಮಾಡಿ ಇದೆಲ್ಲ ಬರಿ ನಾನ್ಸೆನ್ಸ್ ಆದರೂ ಈ ವದಂತಿಯನ್ನು ನಾನು ಇಷ್ಟಪಡುತ್ತೇನೆ ಅಷ್ಟೇ ಎಂದಿದ್ದರು. ವಿಜಯ್ ದೇವರಕೊಂಡ ಅವರ ಮಾತು ಕೇಳಿದ ಅಭಿಮಾನಿಗಳು ಇನ್ನಷ್ಟು ಕನ್ಫ್ಯೂಸ್ ಆಗಿದ್ದರು. ಆದರೆ ಮೊನ್ನೆ ಕರಣ್ ಜೋಹರ್ ಹುಟ್ಟುಹಬ್ಬದ ಪಾರ್ಟಿಗೆ ರಶ್ಮಿಕಾ ಹಾಗೂ ವಿಜಯ್ ಇಬ್ಬರಿಗೂ ಆಹ್ವಾನ ನೀಡಲಾಗಿತ್ತು. ಇಬ್ಬರೂ ಕೂಡ ಪಾರ್ಟಿ ಬಂದಿದ್ದರು. 

ವಿಜಯ್ ದೇವರಕೊಂಡ  ಅವರು ಅನನ್ಯ ಪಾಂಡೆ ಜೊತೆ ಡೇಟಿಂಗ್ ಸುರು ಮಾಡಿದ್ದರು ಅಂತ ಸುದ್ದಿ ಹರಿದಾಡುತ್ತಿದೆ . ಅದಕ್ಕೆ ಪೂರಕವಾಗಿ ಅವರು ಒಂದು ಬರ್ತ್ ಡೇ ಪಾರ್ಟಿಯಲ್ಲಿ ಜೊತೆಯಾಗಿ ಕಾಣಿಸಿ ಕೊಂಡಿದ್ದು ರಶ್ಮಿಕಾಗೆ ತುಂಬಾ ಮುಜುಗರ ಪಡಿಸಿದೆ . ಆ ಒಂದು ವಿಡಿಯೋ ಎಲ್ಲ ಕಡೆ ವೈರಲ್ ಆಗಿದೆ . ಇದು ಸಹ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಬ್ರೇಕಪ್ ಗೆ ಕಾರಣ ಎನ್ನಲಾಗುತ್ತಿದೆ .

ರಶ್ಮಿಕಾ ತಮ್ಮ ಡ್ರೆಸ್ ಮೂಲಕ ಕೊಂಚ ಮುಜುಗರಕ್ಕೂ ಒಳಗಾದರು. ಆದರೆ ಇಡೀ ಪಾರ್ಟಿಯಲ್ಲಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಇಬ್ಬರೂ ಅಂತರ ಕಾಯ್ದುಕೊಂಡಿದ್ದಾರೆ. ಇಬ್ಬರು ಭೇಟಿಯಾಗಿ ಮಾತನಾಡಿಲ್ಲ. ಇವರಿಬ್ಬರ ಈ ನಡವಳಿಕೆ ಇದೀಗ ಬಾಲಿವುಡ್ ಅಂಗಳದಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಿದೆ.  ರಶ್ಮಿಕಾ ಹಾಗೂ ವಿಜಯ್ ಇಬ್ಬರೂ ಕಿತ್ತಾಡಿಕೊಂಡಿದ್ದಾರೆ ಎಂದು ಕೆಲವರು ಹೇಳಿದರೆ, ಮತ್ತಷ್ಟು ಜನ ಇಲ್ಲ ಇಬ್ಬರೂ ಬೇಕಂತಲೇ ಬೇರೆಯಾಗಿರುವಂತೆ ನಡೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಸತ್ಯ ಯಾವುದು ಎಂಬುದು ಮುಂದೆ ತಿಳಿಯಬೇಕಷ್ಟೇ.