ಕೊನೆಗೂ ಕಿರಿಕ್ ಪಾರ್ಟಿ 2 ಸೆಟ್ ಆಯ್ತು..! ಕನ್ನಡಕ್ಕೆ ಮತ್ತೆ ಬರುತ್ತಾರ ರಶ್ಮಿಕಾ..! ರಿಷಭ್ ಹೇಳಿದ್ದಿಷ್ಟು

By Infoflick Correspondent

Updated:Saturday, June 4, 2022, 14:03[IST]

ಕೊನೆಗೂ ಕಿರಿಕ್ ಪಾರ್ಟಿ 2 ಸೆಟ್ ಆಯ್ತು..! ಕನ್ನಡಕ್ಕೆ ಮತ್ತೆ ಬರುತ್ತಾರ ರಶ್ಮಿಕಾ..! ರಿಷಭ್ ಹೇಳಿದ್ದಿಷ್ಟು

ಕನ್ನಡದ ಸೂಪರ್ ಹಿಟ್ ಸಿನಿಮಾ ಕಿರಿಕ್ ಪಾರ್ಟಿ ಸಿನಿಮಾ ಇದೀಗ ಮತ್ತೆ ಸುದ್ದಿಗೆ ಬಂದಿದೆ. ಹೌದು ಕನ್ನಡದ ಸೂಪರ್ ಹಿಟ್ ಸಿನಿಮಾವಾಗಿ 2016ರಲ್ಲಿ ಕಿರಿಕ್ ಪಾರ್ಟಿ ಚಿತ್ರವೂ ದೊಡ್ಡ ಯಶಸ್ವಿಯಾಗಿ ಎಲ್ಲರ ಮನಸ್ಸು ಗೆದ್ದಿತ್ತು. ನಟ ರಕ್ಷಿತ್ ಶೆಟ್ಟಿ ಜೊತೆಗೆ ಮೊದಲಬಾರಿ ಮೊದಲ ಸಿನಿಮಾದಲ್ಲಿ ತೆರೆ ಹಂಚಿಕೊಂಡ ನಟಿ ರಶ್ಮಿಕಾ ಮಂದಣ್ಣ ಅವರು ಈ ಸಿನೆಮಾ ಮೂಲಕವೆ ಪಾದಾರ್ಪಣೆ ಮಾಡಿ ದೊಡ್ಡದಾದ ಅಭಿಮಾನಿ ಬಳಗ ಗಿಟ್ಟಿಸಿಕೊಂಡಿದ್ದರು. ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಪೂರ ಹೊಸಬರ ತಾರಾಬಳಗವೆ ಇತ್ತು ಎನ್ನಬಹುದು. ನಟ ರಕ್ಷಿತ್ ಶೆಟ್ಟಿ, ನಿರ್ದೇಶಕ ರಿಷಬ್ ಶೆಟ್ಟಿ, ಜೊತೆಗೆ ಸಂಯುಕ್ತ ಹೆಗಡೆ ಹಾಗೆ ರಶ್ಮಿಕ ಮಂದಣ್ಣ ಅವರು ಸ್ಟಾರ್ ಕ್ಯಾಸ್ಟ್ ನಲ್ಲಿ ಕಾಣಿಸಿಕೊಂಡಿದ್ದರು.

ಕನ್ನಡ ಚಿತ್ರರಂಗಕ್ಕೆ ಇದು ದೊಡ್ಡ ಹಿಟ್ ಸಿನಿಮಾ ಆಗಿತ್ತು. ಹಿಟ್ ಆಗುವುದರ ಜೊತೆಗೆ ಸಾಕಷ್ಟು ಟೆಕ್ನಿಶಿಯನ್ಸ್ ಮತ್ತು ಕಲಾವಿದರನ್ನು ಈ ಸಿನಿಮಾ ಪರಿಚಯ ಮಾಡಿತು ಎಂದು ಹೇಳಬಹುದು. ಹೌದು ಇದೀಗ ಕಿರಿಕ್ ಪಾರ್ಟಿ ಭಾಗವಾಗಿ ಎರಡನೆಯ ಪಾರ್ಟ್ ಬರಲಿದೆಯಂತೆ. ಈ ವಿಚಾರವಾಗಿ ನಿರ್ದೇಶಕ ರಿಷಬ್ ಶೆಟ್ಟಿ ಅವರು ಕೆಲವೊಂದಿಷ್ಟು ಮಾಹಿತಿ ಹಂಚಿಕೊಂಡಿದ್ದಾರೆ. ಕಿರಿಕ್ ಪಾರ್ಟಿ ಭಾಗ-2 ಇಷ್ಟರಲ್ಲೇ ಸೆಟ್ ಎರಲಿದೆ. ಹಾಗೆ ಸಿನಿಮಾ ಖಂಡಿತಾ ಬರುತ್ತದೆ ಎಂದು ಹೇಳಿದ್ದಾರೆ. ಹೌದು ಕಿರಿಕ್ ಪಾರ್ಟಿ ಭಾಗ-1 2016ರಲ್ಲಿ ಬಿಡುಗಡೆಯಾಗಿದ್ದು, ದೊಡ್ಡಮಟ್ಟದಲ್ಲಿ ಯಶಸ್ವಿಯಾಗಿತ್ತು. 2023ಕ್ಕೆ ಕಿರಿಕ್ ಪಾರ್ಟಿ 2 ಸೆಟ್ಟೇರಲಿದ್ದು, ಕಥೆಯ ತಯಾರಿ ಜೊತೆಗೆ ಸ್ಕ್ರಿಪ್ಟ್ ಕೂಡ ಆರಂಭ ಆಗಿದೆ ಎಂದು ನಿರ್ದೇಶಕ ಶೆಟ್ಟಿ ಮಾಧ್ಯಮವೊಂದಕ್ಕೆ ಸಂದರ್ಶನದಲ್ಲಿ ಮಾಹಿತಿಯನ್ನು ನೀಡಿದ್ದಾರೆ.   

ನಿರ್ದೇಶಕ ನಾಯಕನ ಪಾತ್ರದ ಬಗ್ಗೆ ಹೇಳಿ ನಟ ರಕ್ಷಿತ್ ಶೆಟ್ಟಿ ಈಗ ತುಂಬಾ ಬದಲಾಗಿದ್ದಾರೆ. ಅಂದಿನ ರಕ್ಷಿತ್ ಶೆಟ್ಟಿ ಲುಕ್ಕು ಬೇರೆ ಇತ್ತು. ಈ ಸಿನಿಮಾದಲ್ಲಿ ಮತ್ತೆ ನಟ ರಕ್ಷಿತ್ ಅವರನ್ನು ಒಟ್ಟು ಮೂರು ಲುಕ್ಕಿನಲ್ಲೆ ತೋರಿಸಲಾಗುತ್ತದೆ. ಈ ಸಿನಿಮಾ ತುಂಬಾ ಮಜವಾಗಿ ಇರಲಿದ್ದು, ಜೊತೆಗೆ ಕೇವಲ ಲವ್ ಸ್ಟೋರಿ ಆಗಿರುವುದಿಲ್ಲ ಎಂದಿದ್ದಾರೆ ರಿಷಬ್ ಶೆಟ್ಟಿ. ಹಾಗೆ ನಾಯಕಿಯ ಪಾತ್ರದ ಬಗ್ಗೆ ಮಾತನಾಡಿದ್ದು, ನಟಿ ರಶ್ಮಿಕಾ ಮಂದಣ್ಣ ಇತ್ತೀಚಿನ ಕನ್ನಡ ಸಿನಿಮಾಗಳಲ್ಲಿ ಎಲ್ಲಿಯೂ ಸಹ ಕಾಣಿಸಿಕೊಂಡಿಲ್ಲ. ಹಾಗೆ ಯಾವ ಸಿನಿಮಾಗಳನ್ನು ಕೂಡ ಒಪ್ಪಿಕೊಂಡಿಲ್ಲ. ಆದ್ರೆ ಈ ಕಿರಿಕ್ ಪಾರ್ಟಿ 2 ಚಿತ್ರದ ಮೂಲಕ ಮತ್ತೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಾರ, ಕಂಬ್ಯಾಕ್ ಮಾಡುತ್ತಾರ ಎಂದು ಕಾದುನೋಡಬೇಕಿದೆ.

ಇನ್ನೊಂದು ಕಡೆ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ನಟಿ ರಶ್ಮಿಕ ಮಂದಣ್ಣ ಪಾತ್ರ ಸತ್ತುಹೋಗಿದೆ. ಹಾಗಿದ್ದಲ್ಲಿ ನೀವು ಮತ್ತೆ ಅವರನ್ನು ತೆರೆಯ ಮೇಲೆ ತರುವ ಸಾಹಸ ಮಾಡುತ್ತೀರಾ ಎಂಬ ಪ್ರಶ್ನೆ ಕೂಡ ಮಾಡಲಾಗುತ್ತಿದೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ. ಈ ಕಿರಿಕ್ ಪಾರ್ಟಿ 2 ಮೂಲಕ ನಟಿ ರಶ್ಮಿಕಾ ಮಂದಣ್ಣ ಅವರು ಮತ್ತೆ ಕಂಬ್ಯಾಕ್ ಮಾಡಬೇಕ ಅಥವಾ ಬೇಡವ ಎಂದು ನಿಮ್ಮ ಅನಿಸಿಕೆಯನ್ನು ಹೇಳಿ, ಜೊತೆಗೆ ಈ ಮಾಹಿತಿಯನ್ನು ಸಹ ಶೇರ್ ಮಾಡಿ ಧನ್ಯವಾದಗಳು...