ಬಾಲಿವುಡ್ ಗೂ ಕಾಲಿಟ್ಟ ಕೊಡಗಿನ ಬೆಡಗಿ ; ಸಿನಿಮಾ ರಿಲೀಸ್ ದಿನಾಂಕ ಘೋಷಣೆ

By Infoflick Correspondent

Updated:Wednesday, March 9, 2022, 19:32[IST]

ಬಾಲಿವುಡ್ ಗೂ ಕಾಲಿಟ್ಟ ಕೊಡಗಿನ ಬೆಡಗಿ ; ಸಿನಿಮಾ ರಿಲೀಸ್ ದಿನಾಂಕ ಘೋಷಣೆ

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಬೆಳ್ಳಿ ಪರದೆಯಿಂದ ಟಾಲಿವುಡ್​ನತ್ತ ಹೆಜ್ಜೆಹಾಕಿ ಅಲ್ಲಿಯೂ ಪ್ರಸಿದ್ದಿ ಪಡೆದು ನಂತರ ಕಾಲಿವುಡ್ ಗೆ ಜಿಗಿದು ಅಲ್ಲಿಯೂ ಖ್ಯಾತಿ ಪಡೆದೂ ಈಗ ಬಾಲಿವುಡ್ ನತ್ತ ಹಾರಿದ್ದಾರೆ. ಪುಷ್ಪ ಸಿನಿಮಾ ದ ನಂತರ ರಶ್ಮಿಕಾ ಗೆ ಡಿಮೆಂಡ್ ಹೆಚ್ಚಾಗಿದ್ದು ಸಂಭಾವನೆಯೂ ವೃದ್ಧಿಸಿದೆ. 

ರಶ್ಮಿಕಾ ಮಂದಣ್ಣ ಬಾಲಿವುಡ್ ನಲ್ಲೂ ನಾಯಕಿಯಾಗಿ ಮಿಂಚಲಿದ್ದು ಜೂನ್ 10 ರಶ್ಮಿಕಾ ಅವರ ಬಹುದಿನದ ಕನಸು ನನಸಾಗುವ ದಿನವಾಗಿದೆ.ಜೂನ್ 10 ರಶ್ಮಿಕಾ ನಟನೆಯ ಬಾಲಿವುಡ್ ಸಿನಿಮಾ ರಿಲೀಸ್ ಆಗಲಿದೆ. 

ರಶ್ಮಿಕಾ ನಾಯಕಿಯಾಗಿ ನಟಿಸುತ್ತಿರುವ ಮೊದಲ ಬಾಲಿವುಡ್​ ಚಿತ್ರ 'ಮಿಷನ್​ ಮಜ್ನು! ಈ ಸಿನಿಮಾಗೆ ಶಂತನು ಬಾಗ್ಚಿ ನಿರ್ದೇಶನ ಮಾಡಿದ್ದು, ಸಿದ್ಧಾಂತ್ ಮಲ್ಹೋತ್ರಾ ಈ ಸಿನಿಮಾದ ನಾಯಕರಾಗಿದ್ದಾರೆ. ಮೊದಲ ಸಿನಿಮಾದಲ್ಲೇ ಸ್ಟಾರ್​ ನಟನ ಜತೆ  ನಟಿಸುತ್ತಿದ್ದಾರೆ ರಶ್ಮಿಕಾ ಮಂದಣ್ಣ.‌ ಭಾರತದ ಅತ್ಯಂತ ಧೈರ್ಯಶಾಲಿ  ಕಾರ್ಯಾಚರಣೆಯ ಕಥೆಯನ್ನು ಈ ಸಿನಿಮಾದಲ್ಲಿ ಹೇಳಲಾಗಿದೆ.  

ಇದಲ್ಲದೆ, ಅಮಿತಾಭ್​ ಬಚ್ಚನ್​ ನಟನೆಯ 'ಗುಡ್​ ಬೈ' ಸಿನಿಮಾದಲ್ಲೂ ರಶ್ಮಿಕಾ ನಟಿಸುತ್ತಿದ್ದು, ಈ ಚಿತ್ರದ ರಿಲೀಸ್​ ದಿನಾಂಕ ಇನ್ನಷ್ಟೇ ಘೋಷಣೆ ಆಗಬೇಕಿದೆ.