Raveena Tandon about Yash : ಯಶ್ ಒಬ್ಬ ಸ್ಟಾರ್ ಎಂಬುದಾಗಿ ಕಾಣಲೇ ಇಲ್ಲ ಎಂದ ರವಿನಾ..! ಕಬಾಬ್ ಬಿರಿಯಾನಿ ಬಗ್ಗೆ ಹೇಳಿದ್ದು ಕೇಳಿ

By Infoflick Correspondent

Updated:Monday, May 2, 2022, 08:56[IST]

Raveena  Tandon about Yash : ಯಶ್ ಒಬ್ಬ ಸ್ಟಾರ್ ಎಂಬುದಾಗಿ ಕಾಣಲೇ ಇಲ್ಲ ಎಂದ ರವಿನಾ..! ಕಬಾಬ್ ಬಿರಿಯಾನಿ ಬಗ್ಗೆ ಹೇಳಿದ್ದು ಕೇಳಿ

ಕನ್ನಡದ ಬಹು ನಿರೀಕ್ಷಿತ ಚಿತ್ರ ಪ್ಯಾನ್ ಇಂಡಿಯಾ ಸಿನಿಮಾ ಕೆಜಿಎಫ್ 2 ಇದೀಗ ವಿಶ್ವದಾದ್ಯಂತ ಭರ್ಜರಿಯಿಂದ ಸಕ್ಕತ್ ಆಗಿ ಓಡುತ್ತಿದೆ. ಬಿಡುಗಡೆಯಾದ 13 ದಿನಕ್ಕೆ 1000 ಕೋಟಿ ಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿರುವ ಈ ಕೆಜಿಎಫ್ ಚಾಪ್ಟರ್ 2 ಸಿನಿಮಾವನ್ನ ಪ್ರೇಕ್ಷಕರು ಅಪ್ಪಿ ಪ್ರೀತಿಸಿ ಹೆಚ್ಚು ಒಪ್ಪಿಕೊಂಡಿದ್ದಾರೆ ಎನ್ನಬಹುದು. ಒಂದು ಆಕ್ಷನ್ ಅಥವಾ ಕಮರ್ಷಿಯಲ್ ಸಿನಿಮಾ ಅಂದರೆ ಹೀಗಿರಬೇಕು, ಯಾವ ರೀತಿ ಕಥೆ ಕಟ್ಟಿದ್ದಾರೆ, ಸಿನಿಮಾದ ಮಾಸ್ ಎಲಿವೆಶನ್ ಗಳ ಅದ್ಭುತವಾಗಿ ಮಾಡಿದ ಪ್ರಶಾಂತ್ ನೀಲ್ ಅವರಿಗೆ ನಿಜಕ್ಕೂ ಹ್ಯಾಟ್ಸಾಫ್ ಎಂದು ಅಭಿಮಾನಿಗಳು ಖುಷಿಯಿಂದ ಸಿನಿಮಾ ನೋಡಿ ಹೊರಗಡೆ ಬಂದು ಅವರವರ ಅನಿಸಿಕೆಗಳನ್ನು ಹೀಗೆ ತಿಳಿಸುತ್ತಿದ್ದಾರೆ. ಹೀಗಿರುವಾಗ ಕೆಜಿಎಫ್ ಸಿನಿಮಾ ಗೆದ್ದಿದೆ ಎಂದು ನಾವು ಹೇಳಬಹುದು.

ನಮ್ಮ ಕನ್ನಡ ಸಿನಿಮಾರಂಗದ ಕಡೆ ಮುಖಮಾಡಿ ಇಡೀ ಪ್ರಪಂಚವೇ ನೋಡುವಹಾಗೆ ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ನಟ ರಾಕಿಂಗ್ ಸ್ಟಾರ್ ಯಶ್ ಅವರು ಮಾಡಿದ್ದಾರೆ ಎಂದು ಹೇಳಬಹುದು. ಕೇವಲ ಇವರಿಬ್ಬರು ಮಾತ್ರವೇ ಅಲ್ಲ ಬದಲಿಗೆ ಇಡೀ ಕೆಜಿಎಫ್ ಚಿತ್ರತಂಡ ಈ ಅಪಾರ ಯಶಸ್ವಿಗೆ ಕಾರಣೀಭೂತರಾಗಿದ್ದಾರೆ. ಹೌದು ಕೆಜಿಎಫ್ ಚಾಪ್ಟರ್ ಟು ಸಿನಿಮಾದಲ್ಲಿ ಬಾಲಿವುಡ್ ನಟ ಸಂಜಯ್ ದತ್ ಅದಿರನ ಪಾತ್ರದಲ್ಲಿ ಕಾಣಿಸಿದ್ದರೆ, ಅತ್ತ ಪ್ರಧಾನಮಂತ್ರಿಯಾಗಿ ರಮಿಕ ಸೆನ್ ಪಾತ್ರದಲ್ಲಿ ನಟಿ ರವೀನಾ ಟಂಡನ್ ಕಾಣಿಸಿದ್ದರು. ಇವರಿಬ್ಬರೂ ಕೂಡ ಕೆಜಿಎಫ್ ಚಾಪ್ಟರ್ 2 ಸಿನಿಮಾದಲ್ಲಿ ಅತ್ಯದ್ಭುತವಾಗಿ ಅಭಿನಯ ಮಾಡಿ ಸೈ ಎನಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.  

ಇದೀಗ ಕೆಜಿಎಫ್ ಚಿತ್ರದ ಬಗ್ಗೆ ಹಾಗೂ ಕೆಜಿಎಫ್ ನಟ ರಾಕಿಂಗ್ ಸ್ಟಾರ್ ಯಶ್ ಜೊತೆಗೆ ನಿರ್ದೇಶಕ ಪ್ರಶಾಂತ್ ನೀಲ್ ಅವರ ಬಗ್ಗೆ ರಮಿಕ ಸೆನ್ ಪಾತ್ರದ ರವೀನಾ ಟಂಡನ್ ಅವರು ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ..ರವೀನಾ ಟಂಡನ್ ಅವರ ಮನೆ ಬಳಿ ಹೋಗಿದ್ದ ನ್ಯೂಸ್ ಚಾನೆಲ್ ಅವರಿಂದ ಕೆಲ ಮಾಹಿತಿ ಪಡೆದುಕೊಂಡಿದೆ. ಹೌದು ರಮಿಕ ಸೆನ್ ಪಾತ್ರದಾರಿ ಬಗ್ಗೆ ಮಾತನಾಡಿದ ರವಿನಾ ಟಂಡನ್ ಯಶ್ ಅವರು ಕಬಾಬ್ ಮತ್ತು ಬಿರಿಯಾನಿಯನ್ನು ಹೇಗೆ ಮಾಡುತ್ತಾರೆ ಓಹೋ ಎಂದು ಬಾಯಲ್ಲಿ ನೀರು ತಂದಿದ್ದಾರೆ. ಬಳಿಕ ನಾನು ವೆಜಿಟೇರಿಯನ್ ಎಂದು ಹೇಳಿ ಎಲ್ಲರಿಗೂ ಸಹ ನೀಡಿದ್ದಾರೆ.

ಹಾಗೆ ಯಶ್ ಒಬ್ಬ ದೊಡ್ಡ ಸೆಲೆಬ್ರಿಟಿ ಎಂದೆನಿಸುವುದೇ ಇಲ್ಲ ಅಷ್ಟು ಸರಳವಾಗಿ ಇರುತ್ತಾರೆ ಎಂದಿದ್ದಾರೆ ನಟಿ ರವೀನಾ ಟಂಡನ್. ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ. ಹಾಗೆ ನಟಿ ರವೀನ ಟಂಡನ್ ಮನೆ ಮತ್ತು ಅವರ ಈ ಕೆಲವು ಅನಿಸಿಕೆಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದ...