ಅನ್ನದ ಮೇಲೆ ಪ್ರಮಾಣ ಮಾಡಿ ಹೇಳ್ತಿನಿ ಎಂದು ದೊಡ್ಮನೆ ಬಗ್ಗೆ ರವಿವರ್ಮ ಭಾವುಕ..! ಇಲ್ನೋಡಿ

By Infoflick Correspondent

Updated:Friday, March 11, 2022, 19:35[IST]

ಅನ್ನದ ಮೇಲೆ ಪ್ರಮಾಣ ಮಾಡಿ ಹೇಳ್ತಿನಿ ಎಂದು ದೊಡ್ಮನೆ ಬಗ್ಗೆ ರವಿವರ್ಮ ಭಾವುಕ..! ಇಲ್ನೋಡಿ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್  (Puneeth Rajkumar) ಅವರ ಕೊನೆಯ ಚಿತ್ರ ಜೇಮ್ಸ್ ಇದೆ 17ನೇ ತಾರೀಕು ಇಡಿ ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ಜೇಮ್ಸ್ ಚಿತ್ರಕ್ಕೆ ಖ್ಯಾತ ಸಾಹಸ ನಿರ್ದೇಶಕ ರವಿವರ್ಮ ಅವರು ಸ್ಟಂಟ್ ಮಾಸ್ಟರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ನಟ ಪುನೀತ್ ಅವರಿಗೆ ಫೈಟ್ ಮಾಡಿಸಿರುವ ರವಿವರ್ಮ (Ravi Varma) ಅವರು ಇದೀಗ ದೊಡ್ಡಮನೆ ಜೊತೆಗಿರುವ ನಂಟನ್ನು ಒಂದೊಂದಾಗಿ ಬಿಚ್ಚಿಟ್ಟಿದ್ದಾರೆ. ಹೌದು ಶಿವಣ್ಣ ಮತ್ತು ಅಪ್ಪು ಅವರ ಬಗ್ಗೆಯೂ ಕೆಲವು ವಿಚಾರಗಳನ್ನು ಮಾಧ್ಯಮದ ಎದುರು ಹಂಚಿಕೊಂಡಿದ್ದಾರೆ. ಆರಂಭದಲ್ಲಿ ನಟ ಪುನೀತ್ ಅವರು 'ಮಾಸ್ಟರ್ ನಾನು ಮೊದಲ ಬಾರಿಗೆ ಸೈನಿಕ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ, ಇದು ನನಗೆ ಸೂಟ್ ಆಗುತ್ತದೆಯ ಎಂದು ಕೇಳಿದ್ದರಂತೆ.

ಆಗ ರವಿವರ್ಮ ಅವರು 'ನೀವೇ ನಮಗೆ ಒಬ್ಬ ದೊಡ್ಡ ಸ್ಟಾರ್, ಎಂತೆಂಥವರು ಬೇರೆ ದೇಶದಲ್ಲಿ ಸೈನಿಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ನಿಮ್ಮ ಕೈಲಿ ಯಾಕೆ ಆಗುವುದಿಲ್ಲ ಮಾಡಿ ಸರ್, ಹಾಗೆ ನಿಮಗೆ ಪಕ್ಕ ಸೂಟ್ ಆಗುತ್ತದೆ ಎಂದಿದ್ದೆ ಅವರು ಮೈಮೇಲೆ ಸೋಲ್ಜರ್ ಕಾಸ್ಟ್ಯೂಮ್ ಧರಿಸಿ ತುಂಬಾ ಭಯಭಕ್ತಿಯಿಂದ ಅಭಿನಯ ಮಾಡಿ ಎಲ್ಲರ ಮನಸ್ಸನ್ನು ಗೆದ್ದರು. ಸಿನಿಮಾದಲ್ಲಿ ಗೆಲ್ಲುತ್ತಾರೆ ಎಂಬ ಆ ನಂಬಿಕೆಯಿದೆ ಎಂದಿದ್ದಾರೆ ರವಿವರ್ಮ. ಜೊತೆಗೆ ಅನ್ನದ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ, ಈಗಷ್ಟೇ ನಾನು ಊಟ ಮಾಡಿಕೊಂಡು ಬಂದಿದ್ದೇನೆ, ದೊಡ್ಡ ಮನೆಯವರು ಮಧ್ಯರಾತ್ರಿ ಕರೆದರೂ ಸಹ ನಾನು ಅವರ ಮನೆಗೆ ಬಂದು ಕೆಲಸ ಮಾಡುವುದಕ್ಕೆ ರೆಡಿ ಎಂದು ಹೇಳಿಕೊಂಡರು. ರವಿವರ್ಮ ಅವರ ಸಿನಿಮಾ ಕೆರಿಯರ್ ನಲ್ಲಿ ದೊಡ್ಡಮನೆಯ ರೀತಿ ಯಾರನ್ನೂ ಕೂಡ ನೋಡಿಲ್ಲವಂತೆ.     

ಪುನೀತ್ ಅವರಿಗೆ ಶೂಟಿಂಗ್ ಸೆಟ್ಟಿನಲ್ಲಿ ಯಾವ ಊಟ ಬರುತ್ತಿತ್ತೊ, ಲೈಟ್ ಬಾಯ್, ಪ್ರೊಡಕ್ಷನ್ ಹುಡುಗನಿಗೂ ಕೂಡ ಅದೇ ಊಟ ಬರುತ್ತಿತ್ತು ಎಂಬುದಾಗಿ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಹಾಗೇ ಪುನೀತ್ ಅವರಿಗೂ ಮತ್ತು ಶಿವಣ್ಣ ಅವರಿಗೂ, ನಿಮಗೆ ಎಷ್ಟು ದುಡ್ಡು ಐಶ್ವರ್ಯ ಇದೆ ಅದು ನಿಮ್ಮನ್ನು ಕಾಪಾಡುವುದಿಲ್ಲ, ಬದಲಿಗೆ ರಾಜಣ್ಣ ಅವರು ನಿಮಗೆ ಜನರನ್ನು ಹೇಗೆ ನೋಡಬೇಕು, ಹೇಗೆ ಪ್ರೀತಿ ಕೊಡಬೇಕು, ಎಷ್ಟು ಸರಳತನದಿಂದ ಇರಬೇಕು ಎಲ್ಲರನ್ನು ಒಂದೇ ರೂಪದಲ್ಲಿ ನೋಡಬೇಕು ಎಂದು ಹೇಳಿಕೊಟ್ಟ ಆ ನಿಮ್ಮ ಗುಣವೆ ನಿಮ್ಮನ್ನು ಕಾಯುತ್ತದೆ ಎಂದೆ, ಆಗ ಅವರು ನನ್ನನ್ನು ತಬ್ಬಿಕೊಂಡು ಕೈಮುಗಿದರು ಎಂದರು ರವಿವರ್ಮ.