Ravichandran : ಇಷ್ಟು ವರ್ಷ ನಾನು ಪ್ರೀತಿ ಕೊಟ್ಟೆ, ನನ್ನ ಋಣ ತೀರಿಸಿ ಎಂದ ರವಿಚಂದ್ರನ್..! ಹೇಳಿದ್ದು ಯಾರಿಗೆ ಗೊತ್ತಾ..?

By Infoflick Correspondent

Updated:Wednesday, June 22, 2022, 15:18[IST]

Ravichandran :  ಇಷ್ಟು ವರ್ಷ ನಾನು ಪ್ರೀತಿ ಕೊಟ್ಟೆ, ನನ್ನ ಋಣ ತೀರಿಸಿ ಎಂದ ರವಿಚಂದ್ರನ್..! ಹೇಳಿದ್ದು ಯಾರಿಗೆ ಗೊತ್ತಾ..?

ಕನ್ನಡ ಚಿತ್ರರಂಗದ ಖ್ಯಾತ ನಟ ಪ್ರೇಮಲೋಕದ ಸರದಾರ ರಣಧೀರ ಹಾಗೆ ಕನ್ನಡಿಗರ ಹೃದಯ ಕದ್ದಿರುವ ನಮ್ಮ ನಿಮ್ಮ ಪ್ರೀತಿಯ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಇದೀಗ ಹೆಚ್ಚು ಭಾವುಕರಾಗಿದ್ದಾರೆ. ಅವರ ಕಿರಿಯ ಮಗನಾದ ವಿಕ್ರಮ್ ರವಿಚಂದ್ರನ್ ಅವರ ತ್ರಿವಿಕ್ರಮ ಸಿನಿಮಾ ಇದೇ 24 ರಂದು ಇಡೀ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ತ್ರಿವಿಕ್ರಮ ಸಿನಿಮಾ ಒಂದು ವಿಭಿನ್ನವಾದ ಶೈಲಿಯಲ್ಲಿ ಬರುತ್ತಿದೆ. ಹಾಗೆ ಒಂದು ಕಮರ್ಷಿಯಲ್ ಸಿನಿಮಾ ಎನ್ನಬಹುದು. ಲವ್ ಸ್ಟೋರಿ ಕೂಡ ಇದೆ. ನಟ ರವಿಚಂದ್ರನ್ ಅವರ ಮಗನಾದ ವಿಕ್ರಮ್ ರವಿಚಂದ್ರನ್ ಅವರ ತ್ರಿವಿಕ್ರಮ ಸಿನಿಮಾದ ಪ್ರಿ ರಿಲೀಸ್ ಇವೆಂಟ್ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಈ ಕಾರ್ಯಕ್ರಮದಲ್ಲಿ ನಟ ಶಿವಣ್ಣ ಅವರು ಸಹ ಬಂದಿದ್ದರು. ಹೌದು ತ್ರಿವಿಕ್ರಮ ಸಿನಿಮಾದ ನಾಯಕ ನಟ ವಿಕ್ರಮ್ ರವಿಚಂದ್ರನ್ ಅವರ ಬಗ್ಗೆ ಮತ್ತು ಅವರ ಕುಟುಂಬದ ಬಗ್ಗೆ ಜೊತೆಗೆ ಸಿನಿಮಾ ಬಗ್ಗೆ ಮಾತನಾಡಿದ ರವಿಚಂದ್ರನ್ ಅವರು ವೇದಿಕೆ ಮೇಲೆ ಭಾವುಕರಾದರು ಎಂದು ಹೇಳಬಹುದು.   

ನಾನು ಮನೆಯಲ್ಲಿಯೇ ಡೈರೆಕ್ಟರ್ ಇದ್ದೇನೆ, ನನ್ನ ಮಕ್ಕಳಿಗೆ ಯಾವಾಗಲಾದರೂ ನಾನು ಸಿನಿಮಾ ಮಾಡಬಹುದಿತ್ತು. ಆದ್ರೆ ಆ ಜನರ ಪ್ರೀತಿ ಕಲೆ ಅವರೇ ಹುಡುಕಿಕೊಳ್ಳಲಿ ಎಂದು ಸುಮ್ಮನೆ ಇದ್ದೆ. ಅವರು ಕೂಡ ಸಿನಿಮಾರಂಗದಲ್ಲಿಯ ಕಷ್ಟ ತಿಳಿಯಲಿ, ಜನರ ಪ್ರೀತಿ ಗಳಿಸಲಿ, ನಾನು ನಿರ್ದೇಶನ ಮಾಡಿ ಮಕ್ಕಳ ಮೂಲಕ ಸಿನಿಮಾ ಮಾಡಿಸಿದರೆ ಅದು ನನ್ನ ಸಿನಿಮಾ ಆಗುತ್ತದೆ. ಹಾಗಾಗಿ ನಾನು ಇಷ್ಟು ದಿವಸ ಅವರಿಗೆ ಸಿನಿಮಾ ಮಾಡಲು ಹೋಗಿಲ್ಲ. ಪ್ರೀತಿಯಿಂದ ಈಗ ಶಿವಣ್ಣ ಬಂದಿದ್ದಾರೆ. ಯಾವಾಗ ವಿಕ್ಕಿ ನಿನ್ನ ಸಿನಿಮಾ ಬರುತ್ತದೆಂದು ಹೆಚ್ಚುಬಾರಿ ಕೇಳಿದ್ದಾರೆ. ಅಪ್ಪು ಕೂಡ ಕೇಳುತ್ತಿದ್ದರು. ನೀವು ನನ್ನ ಮೇಲೆ ಇಟ್ಟಿರುವ ಪ್ರೀತಿಗೆ ನಾನು ನನ್ನ ಮಗನ ಸಿನಿಮಾ ನೋಡಿ ಎಂದು ಸ್ವಾರ್ಥದಿಂದ ಹೇಳಬಹುದು. ಸಿನಿಮಾ ಚೆನ್ನಾಗಿ ಇಲ್ಲದಿದ್ದರೂ ಪರವಾಗಿಲ್ಲ ಸಿನಿಮಾವನ್ನು ಏನು ಆಗಲ್ಲ ಒಂದು ಬಾರಿ ನೋಡಿಬಿಡಿ ಎಂದರು ರವಿಚಂದ್ರನ್.

ಹಾಗೆ ಸಿನಿಮಾದಲ್ಲಿ ನಟ ಗೆದ್ದರೆ ನಿರ್ಮಾಪಕ ಗೆಲ್ಲುತ್ತಾನೆ. ಇಷ್ಟು ದಿವಸ ನಾನು ನಿಮಗೆ ಪ್ರೀತಿ ನೀಡಿದ್ದೇನೆ. ಈಗ ನೀವು ಅದರ ಋಣ ತೀರಿಸಿ ಎಂದು ರವಿಚಂದ್ರನ್ ಅಭಿಮಾನಿಗಳ ಮುಂದೆಯೇ ಈ ಮಾತನ್ನು ಹೇಳಿ ಭಾವುಕರಾದರು. ಹೌದು ಇದೇ ಜೂನ್ ತಿಂಗಳು 24 ನೇ ತಾರೀಕು ತ್ರಿವಿಕ್ರಮ ಸಿನಿಮಾ ತೆರೆಗೆ ಬರುತ್ತಿದೆ. ನೀವು ಕೂಡ ನಿಮ್ಮ ಕುಟುಂಬ ಸಮೇತ ಹೋಗಿ ಈ ತ್ರಿವಿಕ್ರಮ ಸಿನಿಮಾ ನೋಡಿ. ಹಾಗೇನೇ ವಿಕ್ರಮ್ ಅವರಿಗೆ ಒಳ್ಳೆಯದಾಗಲಿ ಎಂದು ಕಾಮೆಂಟ್ ಮಾಡಿ...