Ravichandran : ರವಿಚಂದ್ರನ್ ಹುಟ್ಟುಹಬ್ಬವನ್ನ ಅಚರಿಸಿದ ಡ್ರಾಮಾ ಜ್ಯೂನಿಯರ್ಸ್ ಮಕ್ಕಳು..! ಭಾವುಕರಾದ ರವಿ ಸಾರ್ ವಿಡಿಯೋ
Updated:Wednesday, May 25, 2022, 20:36[IST]

ಕನ್ನಡ ಚಿತ್ರರಂಗದ ರಸಿಕರ ರಾಜ, ಪ್ರೇಮಲೋಕ ಸರದಾರ ಶಾಂತಿ ಕ್ರಾಂತಿ ಎಬ್ಬಿಸಿದ ನಟ ರವಿಚಂದ್ರನ್ ಅವರು ಇಂದಿಗೂ ಕೂಡ ಅದೆಷ್ಟೊ ಅಭಿಮಾನಿಗಳಿಗೆ ತುಂಬಾನೇ ಸ್ಪೂರ್ತಿದಾಯಕ. ಅವರಾಡುವ ಮಾತುಗಳು ಒಂದೊಂದು ಮಾತು ಎಷ್ಟು ಸತ್ಯ ಎನಿಸುತ್ತವೆ ಎಂದರೆ, ರವಿಚಂದ್ರನ್ ಅವರ ಬಾಯಿಯನ್ನೇ ನೋಡಬೇಕು ಹಾಗೆ ಅವರು ಹೇಳುವ ಮಾತುಗಳನ್ನು ಕೇಳಬೇಕು ಎಂದೆನಿಸುವ ಮಟ್ಟಿಗೆ ಅವರು ಜೀವನದಲ್ಲಿ ಎಲ್ಲವನ್ನ ಅರ್ಥಮಾಡಿಕೊಂಡು ಸಾಧನೆ ಮಾಡಿದ್ದಾರೆ. ಸಿನಿಮಾರಂಗದಲ್ಲಿ 90ರ ದಶಕದಲ್ಲಿ ತುಂಬಾನೇ ಮಿಂಚಿದ ನಟ ರವಿಚಂದ್ರನ್ ಅವರು ಇಂದಿಗೂ ಕೂಡ ಪೋಷಕ ಪಾತ್ರಗಳಲ್ಲಿ ಅಭಿನಯಿಸುತ್ತಾ ಕೆಲವೊಂದು ಚಿತ್ರಗಳಲ್ಲಿ ಮುಖ್ಯ ನಾಯಕನಾಗಿಯೂ ಕೂಡ ಅಭಿನಯ ಮಾಡುತ್ತಾ ಸಿನಿಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ.
ನಟ ರವಿಚಂದ್ರನ್ ಅವರು ಇದೀಗ ಡ್ರಾಮಾ ಜೂನಿಯರ್ಸ್ ಸೀಸನ್ ನಾಲ್ಕರ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸುತ್ತಿರುವ ವಿಚಾರ ಎಲ್ಲರಿಗೂ ಗೊತ್ತು. ಪ್ರತಿ ವಾರ ಚಿಕ್ಕ ಮಕ್ಕಳ ಪ್ರದರ್ಶನ ನೋಡಿ, ಅವರ ಬಗ್ಗೆ ಮಾತನಾಡುವ ರವಿಚಂದ್ರನ್ ಅವರನ್ನು ನೋಡುವುದೇ ಒಂದು ಚೆಂದ. ಪ್ರದರ್ಶನ ಮುಗಿಸಿದ ಬಳಿಕ ಮಕ್ಕಳ ಬಗ್ಗೆ ಹೇಳೋ ಒಂದೊಂದು ಮಾತುಗಳು ನಿಜಕ್ಕೂ ತುಂಬಾನೇ ಸುಂದರವಾಗಿರುತ್ತವೆ..ಹೌದು ಇದೀಗ ನಟ ರವಿಚಂದ್ರನ್ ಅವರ ಹುಟ್ಟುಹಬ್ಬದ ಕಾರ್ಯಕ್ರಮವನ್ನ ಇದೆ ಡ್ರಾಮಾ ಜೂನಿಯರ್ ಸೆಟ್ಟಲ್ಲಿ ಆಚರಿಸಲಾಗಿದೆ. ಬಳಿಕ ಕನಸುಗಾರನ ಸಿನಿಪಯಣ ಹೇಗಿತ್ತು ಎಂಬುದಾಗಿ ಡ್ರಾಮಾ ಜೂನಿಯರ್ಸ್ ಎಲ್ಲಾ ಮಕ್ಕಳು ಸೇರಿ ಹಾಡುಗಳ ಮೂಲಕ ವೇದಿಕೆಯನ್ನು ದೂಳೆಬ್ಬಿಸಿದ್ದಾರೆ.
ನಟ ರವಿಚಂದ್ರನ್ ಅವರ ಹುಟ್ಟುಹಬ್ಬ ಆಚರಿಸಿದ ಡ್ರಾಮಾ ಜೂನಿಯರ್ಸ್ ಷೋ. ಈ ವಾರದ ಶೋ ಪ್ರೋಮೋ ಇದೀಗ ಬಿಡುಗಡೆಯಾಗಿ ಬಾರಿ ವೈರಲ್ ಆಗುತ್ತಿದೆ. ಅವರ ಹುಟ್ಟು ಹಬ್ಬ ಸಂಭ್ರಮ ಬಳಿಕ ನಟ ರವಿಚಂದ್ರನ್ ಅವರು ಆಡಿದ ಮಾತುಗಳ ಒಮ್ಮೆ ಕೇಳಿ. ಹಾಗೆ ಕರ್ನಾಟಕದಲ್ಲಿ ಹುಟ್ಟಿದ್ದು ನನ್ನ ಹೆಮ್ಮೆ ಎಂದ ನಟ ರವಿಚಂದ್ರನ್ ಅವರ ಭಾವುಕ ಕ್ಷಣ ಈ ವಿಡಿಯೋದಲ್ಲಿ ನೋಡಿ. ವಿಡಿಯೋ ಇಷ್ಟವಾದಲ್ಲಿ ಶೇರ್ ಮಾಡಿ ಧನ್ಯವಾದಗಳು...(Video credit : Zee kannada ).