Ravichandran : ಪ್ರಿಯಾಂಕ ಜೊತೆ ರೋಮ್ಯಾಂಟಿಕ್ ಡ್ಯಾನ್ಸ್ ಮಾಡಿದ ರವಿಚಂದ್ರನ್..! ವಿಡಿಯೋಗೆ ವಾವ್ ಎಂದ ಫ್ಯಾನ್ಸ್

By Infoflick Correspondent

Updated:Tuesday, July 5, 2022, 11:35[IST]

Ravichandran : ಪ್ರಿಯಾಂಕ ಜೊತೆ ರೋಮ್ಯಾಂಟಿಕ್ ಡ್ಯಾನ್ಸ್ ಮಾಡಿದ ರವಿಚಂದ್ರನ್..! ವಿಡಿಯೋಗೆ ವಾವ್ ಎಂದ ಫ್ಯಾನ್ಸ್

ಕನ್ನಡ ಚಿತ್ರರಂಗದ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಇದೀಗ ಮತ್ತೆ ಸುದ್ದಿಗೆ ಬಂದಿದ್ದಾರೆ. ಅದು ಪ್ರಿಯಾಂಕ ಹಾಗೂ ಅವರ ಸಿನಿಮಾ ವಿಚಾರವಾಗಿ ಎಂದು ಮಾಧ್ಯಮ ಮೂಲಕ ತಿಳಿದುಬಂದಿದೆ. ಹೌದು ಎಚ್ ಟೂ ಓ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಅಭಿನಯ ಆರಂಭಿಸಿದ್ದ ಬೆಂಗಾಲಿ ಬೆಡಗಿ ನಟಿ ಪ್ರಿಯಾಂಕ ಅವರು ಹೆಚ್ ಟು ಒ ನನ್ನ ನೆಚ್ಚಿನ ಸಿನಿಮಾ. ಅದೇ ಮೊದಲ ಬಾರಿಗೆ ಉಪೇಂದ್ರ ಅವರನ್ನ ನೋಡಿದ್ದು, ಅದು ಸಕತ್ ಅನುಭವ ಒಂದು ವರ್ಷ ಶೂಟಿಂಗ್ ನಡೆದಿತ್ತು, ಆ ಲೋಕೇಶನ್ ಹಾಗೂ ಭಾಷೆ ಎಲ್ಲವೂ ನನಗೆ ಹೊಸದಾಗಿ ಇದ್ದು ನಾನು ಈ ಸಿನಿಮಾದಲ್ಲಿ ನಟಿಸಲು ತುಂಬಾ ಉತ್ಸುಕಳಾಗಿದ್ದೇ ಎಂದು ಈ ಮುಂಚೆ ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದರು. 

ನಂತರದ ಮೂರನೇ ಸಿನಿಮಾ ಮಲ್ಲ. ರವಿಚಂದ್ರನ್ ಅವರ ಜೊತೆ ಈ ಅತ್ಯದ್ಭುತ ಸಿನಿಮಾದಲ್ಲಿ ನಾನು ನಟನೆ ಮಾಡಿದ್ದು ನನ್ನ ಪುಣ್ಯ ಎಂದು ಹೇಳಿಕೊಂಡಿದ್ದರು. ಹೌದು ಅಂದು ಆಗ ಕೆಲವೊಂದಿಷ್ಟು ಬೇರೆ ರೀತಿಯ ವಿಚಾರಗಳು ಹರಿದಾಡಿದ್ದು ನಟ ರವಿಚಂದ್ರನ್ ಮತ್ತು ಪ್ರಿಯಾಂಕ ಅವರ ವಿಚಾರವಾಗಿ ಕೆಲವೊಂದಿಷ್ಟು ಹಾ*ಟ್ ಸೀನುಗಳಿಗೆ ಉಪೇಂದ್ರ ಕತ್ತರಿ ಹಾಕುವಂತೆ ರವಿಚಂದ್ರನ್ ಬಳಿ ಮನವಿ ಮಾಡಿದ್ದರೆಂದು ಕೇಳಿಬಂದಿತ್ತು. ಮಲ್ಲ ಸಿನಿಮಾ ಶೂಟಿಂಗ್ ನಡೆಯುವಾಗ ನಟಿ ಪ್ರಿಯಾಂಕ ಹಾಗೂ ಉಪೇಂದ್ರ ಮದುವೆಯಾಗಿರಲಿಲ್ಲ. ಬದಲಿಗೆ ಪ್ರೀತಿ ಮಾಡುತ್ತಿದ್ದರಂತೆ. ಮಲ್ಲ ಸಿನಿಮಾ ಅತ್ತ ತೆರೆಗೆ ಬರುತ್ತಿದ್ದಂತೆಯೇ ಅಷ್ಟರಲ್ಲಿಯೇ ಉಪ್ಪಿ ಪ್ರಿಯಾಂಕ ಅವರ ಮದುವೆ ಕೂಡ ಆಗಿ ಹೋಗಿತ್ತು ಎನ್ನಲಾಗಿದೆ.

ಅದಾದ ಬಳಿಕ ಕೆಲ ವಿವಾದಗಳು ಅಲ್ಲಿಗೆ ತಣ್ಣಗಾಗಿದ್ದು ನಟ ಉಪೇಂದ್ರ ಅವರ ಹೆಂಡತಿ ಪ್ರಿಯಾಂಕ ಎಂದು ನನ್ನನ್ನು ಅಭಿಮಾನಿಗಳು ಕರೆಯೋದಕ್ಕೆ ಆರಂಭ ಮಾಡಿದರು. ಆದ್ರೆ ನನಗೆ ಕನ್ನಡ ಮತ್ತು ಬೆಂಗಾಲಿಯಲ್ಲಿ ನಟಿಸಿ ಗುರ್ತಿಸಿ ಕೊಳ್ಳೋದು ಇಷ್ಟ ಎಂದಿದ್ದಾರೆ ಪ್ರಿಯಾಂಕ. ಹೌದು, ಈ ಜೋಡಿ ಅಂದು ದೊಡ್ಡ ಪರದೆಯ ಮೇಲೆ ಮಲ್ಲಾ ಸಿನಿಮಾ ಮೂಲಕ ಸದ್ದು ಮಾಡಿದ್ದು ನಿಮಗೂ ಗೊತ್ತಿದೆ. ಇದೀಗ ಮಲಯಾಳಂನ ಒಂದು ಚಿತ್ರ ಕನ್ನಡಕ್ಕೆ ರಿಮೇಕ್ ಆಗಿಯೇ ಬರುತ್ತಿದ್ದು ರವಿಚಂದ್ರನ್ ಅವರೇ ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರಂತೆ. ಅದು ಕ್ರೇಜಿಸ್ಟಾರ್ ಎನ್ನುವ ಹೆಸರನ್ನು ಇಟ್ಟುಕೊಂಡು ಎನ್ನಲಾಗಿದೆ. ಈ ಸಿನಿಮಾಗೆ ನಟಿ ಪ್ರಿಯಾಂಕ ಅವರೇ ಎಂದು ಇದೀಗ ತಿಳಿದು ಬಂದಿದೆ.

ಇತ್ತೀಚಿಗೆ ಡ್ರಾಮಾ ಜೂನಿಯರ್ ಸೆಟ್ ಗೆ ಬಂದಿದ್ದ ನಟಿ ಪ್ರಿಯಾಂಕ ಹಾಗೂ ರವಿಚಂದ್ರನ್ ಅವರು ವೇದಿಕೆ ಮೇಲೆ ಒಟ್ಟಿಗೆ ರೋಮ್ಯಾಂಟಿಕ್ ಡಾನ್ಸ್ ಮಾಡಿದ್ದಾರೆ. ನೀಲಿ ಬಣ್ಣದ ಗೌನ್ ತೊಟ್ಟಿರುವ ಪ್ರಿಯಾಂಕ ಹಾಗೂ ನೇರಳೆ ಬಣ್ಣದ ಶರ್ಟ್ ಹಾಕಿರುವ ನಟ ರವಿಚಂದ್ರನ್ ಅವರ ಈ ಕಲರ್ ಫುಲ್ ವಿಡಿಯೋ ನೀವು ಕೂಡ ಒಮ್ಮೆ ನೋಡಿ. ನಿಮಗೂ  ಖಂಡಿತ ಇಷ್ಟ ಆಗುತ್ತದೆ. ಇವರಿಬ್ಬರ ರೋಮ್ಯಾಂಟಿಕ್ ದೃಶ್ಯ  ಡಾನ್ಸ್ ವಿಡಿಯೋ ಇಲ್ಲಿದೆ ನೋಡಿ. ಹೆಚ್ಚು ವೈರಲ್ ಆಗಿದ್ದು ಒಮ್ಮೆ ನೋಡಿ, ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು..