Ravichandran : ವೇದಿಕೆ ಮೇಲೆ ಜಾಕ್ವೆಲಿನ್ ಜೊತೆ ರಾ ರಾ ರಕ್ಕಮ್ಮ ಎಂದ ರವಿಚಂದ್ರನ್..! ವಿಡಿಯೋ ಈಗ ವೈರಲ್

By Infoflick Correspondent

Updated:Thursday, June 23, 2022, 11:28[IST]

Ravichandran :  ವೇದಿಕೆ ಮೇಲೆ ಜಾಕ್ವೆಲಿನ್ ಜೊತೆ ರಾ ರಾ ರಕ್ಕಮ್ಮ ಎಂದ ರವಿಚಂದ್ರನ್..! ವಿಡಿಯೋ ಈಗ ವೈರಲ್

ನಟ ಕಿಚ್ಚ ಸುದೀಪ್ ಅವರ ಅಭಿನಯದ ವಿಕ್ರಾಂತ ರೋಣ  ಸಿನಿಮಾ ಈಗಾಗಲೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ನಿನ್ನೆಯಷ್ಟೇ ಸಿನಿಮಾದ ಟ್ರೈಲರ್ ಲಾಂಚ್ ಪ್ರಿ ರಿಲೀಸ್ ಇವೆಂಟ್ ಶೋ ಬೆಂಗಳೂರಿನ ಓರಿಯನ್ ಮಾಲ್ ನಲ್ಲಿ ಭರ್ಜರಿಯಾಗಿ ಜರುಗಿತು. ಕಾರ್ಯಕ್ರಮಕ್ಕೆ ಸ್ಯಾಂಡಲ್ವುಡ್ ಸ್ಟಾರ್ ನಟ ಶಿವಣ್ಣ, ರವಿಚಂದ್ರನ್, ರಮೇಶ್ ಅರವಿಂದ್, ಧನಂಜಯ್, ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ರಾಜ್ ಬಿ ಶೆಟ್ಟಿ ಇನ್ನು ಕೂಡ ದೊಡ್ಡ ದೊಡ್ಡ ಸ್ಟಾರ್ ನಟರು ಆಗಮಿಸಿದ್ದರು. ಹಾಗೇನೇ ಕಿರುತೆರೆಯ ಕೆಲ ಸ್ಟಾರ್ ನಟರು ಕೂಡ ಆಗಮಿಸಿ ಚಿತ್ರತಂಡಕ್ಕೆ ಶುಭಾಶಯ ಕೋರಿದರು. ಅನುಪ್ ಭಂಡಾರಿ ಅವರ ನಿರ್ದೇಶನದಲ್ಲಿ ವಿಕ್ರಾಂತ್ ಋಣ ಸಿನಿಮಾ ಪ್ಯಾನ್ ಇಂಡಿಯಾ ಚಿತ್ರ ಆಗಿ ದೊಡ್ಡದಾಗಿ ಸದ್ದು ಮಾಡಲು ಈಗಾಗಲೇ ಕ್ಷಣಗಣನೆ ಶುರು ಮಾಡಿದೆ.

ಮುಂದಿನ ತಿಂಗಳು ಚಿತ್ರ ಭಾರತ ದೇಶದಾದ್ಯಂತ ಹೆಚ್ಚು ರಾರಾಜಿಸಲು ರೆಡಿ ಆಗಿದ್ದು, ನಿನ್ನೆ ಟ್ರೈಲರ್ ಲಾಂಚ್ ಫ್ರೀ ರಿಲೀಸ್ ಇವೆಂಟ್ ನಡೆಯಿತು. ಚಿತ್ರತಂಡಕ್ಕೆ ಪ್ರತಿಯೊಬ್ಬರು ಬಂದು ಮಾತನಾಡಿ ಸುದೀಪ್ ಅವರ ಬಗ್ಗೆ ಮತ್ತು ಅನುಪ್ ಬಂಡಾರಿ ಬಗ್ಗೆ ಮಾತನಾಡಿ ಶುಭಕೋರಿದರು.. 

ಕೊನೆಯಲ್ಲಿ ಅಕುಲ್ ಬಾಲಾಜಿ ಎಲ್ಲಾ ಸ್ಟಾರ್ ನಟನನ್ನು ವೇದಿಕೆ ಮೇಲೆ ಕರೆದು, ರಾ ರಾ ರಕ್ಕಮ್ಮ ಹಾಡಿಗೆ ಮೈಕುಣಿಸಿ ಎಲ್ಲರನ್ನೂ ಬೆರಗು ಮಾಡಿದ್ದ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನು ಕೂಡ ಕರೆದು ರಾರಾ ರಕ್ಕಮ್ಮ ಹಾಡಿಗೆ ಹೆಜ್ಜೆ ಹಾಕುವಂತೆ ಮನವಿ ಮಾಡಿಕೊಂಡರು. ಆಗ ನಟ ರವಿಚಂದ್ರನ್ ರಾರಾ ರಕ್ಕಮ್ಮ ಹಾಡಿಗೆ ಹೆಜ್ಜೆ ಹಾಕಿದ ಪರಿ ನಿಜಕ್ಕೂ ಕಣ್ತುಂಬಿ ಕೊಳ್ಳುವಂತೆ ಇತ್ತು. ಎಲ್ಲರೂ ರವಿಚಂದ್ರನ್ ಅವರ ಸ್ಟೆಪ್ ಗೆ ಫಿದಾ ಆದರು ಎನ್ನಬಹುದು.

ನಟ ಶಿವಣ್ಣ, ರಮೇಶ್ ಅರವಿಂದ್, ಸೃಜನ್ ಲೋಕೇಶ್ ಧನಂಜಯ್ ಎಲ್ಲರೂ ಕೂಡ ರವಿಚಂದ್ರನ್ ಸರ್ ಕುಣಿತಕ್ಕೆ ಫಿದಾ ಆದರು. ಅಸಲಿಗೆ ಆ ವಿಡಿಯೋ ಹೇಗಿತ್ತು ಗೊತ್ತಾ ಇತ್ತೀಚಿಗಷ್ಟೇ ವೈರಲ್ ಆದ ರಾ ರಾ ರಕ್ಕಮ್ಮ ಹಾಡಿನ ಪ್ರಿ ಟ್ರೈಲರ್ ಲಾಂಚ್ ಇವೆಂಟ್ ವೇಳೆ ರವಿಚಂದ್ರನ್ ಅವರು ನಟಿ ಫರ್ನಾಂಡಿಸ್ ಜೊತೆ ಹೇಗೆ ಸ್ಟೆಪ್ ಹಾಕಿದರು ಎಂದು ನೋಡಲು ಈ ವಿಡೀಯೋ ನೋಡಿ. ನಿಜಕ್ಕೂ ಇಷ್ಟ ಆಗುತ್ತೆ. ಮತ್ತು ವಿಡಿಯೋ ಇಷ್ಟ ಆದ್ರೆ ತಪ್ಪದೇನೆ ಶೇರ್ ಮಾಡಿ ಧನ್ಯವಾದಗಳು...( video credit : asianet suvarna news )