Ravichandran : ಶೇಕ್ ಯುವರ್ ಬಾಡಿ ಎಂದು ಮಗನ ನಟಿಯ ಜೊತೆ ಡ್ಯಾನ್ಸ್ ಮಾಡಿದ ರವಿಚಂದ್ರನ್..!

By Infoflick Correspondent

Updated:Thursday, June 16, 2022, 14:01[IST]

Ravichandran :    ಶೇಕ್ ಯುವರ್ ಬಾಡಿ ಎಂದು ಮಗನ ನಟಿಯ ಜೊತೆ ಡ್ಯಾನ್ಸ್ ಮಾಡಿದ ರವಿಚಂದ್ರನ್..!

ತ್ರಿವಿಕ್ರಮ ಚಿತ್ರವು ಸಹನಾ ಮೂರ್ತಿ ಎಸ್ ನಿರ್ದೇಶನದ ಮತ್ತು ಸೋಮಣ್ಣ ಅವರ ನಿರ್ಮಾಣದ ರೋಮ್ಯಾಂಟಿಕ್ ಎಂಟರ್ಟೈನರ್ ಚಲನಚಿತ್ರವಾಗಿದೆ. ಚಿತ್ರ ತಾರಾಗಣದಲ್ಲಿ ವಿಕ್ರಮ್ ರವಿಚಂದ್ರನ್, ಆಕಾಂಶಾ ಶರ್ಮಾ ಮತ್ತು ಅಕ್ಷರ ಗೌಡ ಮುಖ್ಯ ಭೂಮಿಕೆಯಲ್ಲಿದ್ದರೆ, ಅತ್ತ ಅರ್ಜುನ್ ಜನ್ಯ ಅವರು ಸಂಗೀತ ನೀಡಿದ್ದಾರೆ. ಹೌದು ಸ್ಯಾಂಡಲ್‌ವುಡ್‌ನಲ್ಲಿ ವಿಕ್ರಮ್ ರವಿಚಂದ್ರನ್ ಅಭಿನಯದ ಚೊಚ್ಚಲ ಕನ್ನಡ ಚಿತ್ರ ಈ ತ್ರಿವಿಕ್ರಮ ಆಗಿದೆ. ಚಿತ್ರ ಬಿಡುಗಡೆಯ ದಿನಾಂಕವನ್ನು ಸಹ ಈಗಾಗಲೇ ಪಡೆದುಕೊಂಡಿದೆ. ಇಷ್ಟು ದಿನ ಇದ್ದ ಈ ಸಾಂಕ್ರಾಮಿಕ ರೋಗದಿಂದಾಗಿ ತಡವಾಗಿ ತೆರೆಗೆ ಬರುತ್ತಿರುವ ಈ ತ್ರಿವಿಕ್ರಮ ಸಿನಿಮಾ ಇದೆ ಜೂನ್ 24 ರಂದು ತೆರೆಗೆ ಭರ್ಜರಿಯಾಗಿ ಬರಲು ಸಜ್ಜಾಗಿದೆ. ಸಿನಿಮಾವನ್ನು ಸಹನಾ ಮೂರ್ತಿ ನಿರ್ದೇಶಿಸಿದ್ದಾರೆ..

ಹೌದು ತ್ರಿವಿಕ್ರಮ ಚಿತ್ರತಂಡ ಜೀ ಕನ್ನಡದ ಮಕ್ಕಳ ಖ್ಯಾತ ರಿಯಾಲಿಟಿ ಶೋ ಆಗಿರುವ ಡ್ರಾಮಾ ಜೂನಿಯರ್ ಸೀಸನ್ ನಾಲ್ಕರ ವೇದಿಕೆಯಲ್ಲಿ ಕಾಣಿಸಿಕೊಂಡಿತ್ತು. ರವಿಚಂದ್ರನ್ ಅವರ ಪುತ್ರನ ಮೊದಲ ಸಿನಿಮಾ ಇದಾಗಿದ್ದು, ಡ್ರಾಮಾ ಜೂನಿಯರ್ಸ್ ವೇದಿಕೆ ಮೇಲೆ ಸಿನಿಮಾ ಪ್ರಮೋಷನ್ ಭರ್ಜರಿಯಾಗಿ ನಡೆಯಿತು ಎಂದು ಹೇಳಬಹುದು. 

ವಿಕ್ರಮ್ ರವಿಚಂದ್ರನ್ ಅವರು ತ್ರಿವಿಕ್ರಮ ಸಿನಿಮಾದ ನಟಿಯ ಜೊತೆ ಲಲಲಲಲ ಯಾರು ಇಲ್ಲ, ನಿನ್ನ ಮುಂದೆ ಯಾರು ಇಲ್ಲ, ಶಕುಂತಲಾ ಶೇಕ್ ಯುವರ್ ಬಾಡೀ ಎನ್ನುತ್ತಲೇ ಅವರ ಈ ಸಿನಿಮಾದ ಹಾಡಿಗೆ ಭರ್ಜರಿಯಾಗಿ ನೃತ್ಯ ಮಾಡಿದರು. ತದನಂತರ ನಟ ರವಿಚಂದ್ರನ್ ಅವರು ಕೂಡ ಮಗನ ಜೊತೆ ಹಾಗೂ ಸಿನಿಮಾ ನಟಿಯ ಜೊತೆ ಈ ಹಾಡಿಗೆ ಹೆಜ್ಜೆ ಹಾಕಿದ ಪರಿ ನಿಜಕ್ಕೂ ತುಂಬಾ ಮುದ್ದಾಗಿತ್ತು.

ಡ್ರಾಮಾ ಜೂನಿಯರ್ಸ್ ವೇದಿಕೆ ಮುಂಭಾಗದಲ್ಲಿ ಸಿನಿಮಾ ಬಗ್ಗೆ ಮಾತನಾಡಿದ ನಟ ರವಿಚಂದ್ರನ್ ಅವರು, ಇದೊಂದು ಸಿನಿಮಾ ಬೇರೆ ರೀತಿಯ ಸಿನಿಮಾ ಆಗಿರಲಿದೆ. ಹಾಗೂ ಒಳ್ಳೆ ಅನುಭವ ನೀಡುತ್ತದೆ. ಮತ್ತೆ ಎಂಟರ್ಟೈನ್ಮೆಂಟ್ ಆಗಿರುತ್ತದೆ ಎನ್ನುವ ನಿಟ್ಟಿನಲ್ಲಿ ಮಾತನಾಡಿದ್ದಾರೆ ಎನ್ನಲಾಗಿ ಮಾಧ್ಯಮ ಮೂಲಕ ಕೇಳಿ ಬಂದಿದೆ. ಇನ್ನೊಂದು ಕಡೆ ಈ ಸಿನಿಮಾದ ಶೂಟಿಂಗ್ ನ ಕೆಲ ದೃಶ್ಯಗಳು ಲಡಾಕ್ ಮತ್ತು ಕಾಶ್ಮೀರದಲ್ಲಿ ಶೂಟ್ ಮಾಡಲಾಗಿದೆಯಂತೆ. ಅಸಲಿಗೆ ನಟ ರವಿಚಂದ್ರನ್ ಅವರ ಮಗನ ಜೊತೆ ಹೇಗೆ ಡ್ಯಾನ್ಸ್ ಮಾಡಿದ್ದಾರೆ ಗೊತ್ತಾ.? ಇಲ್ಲಿದೆ ನೋಡಿ ವಿಡಿಯೋ. ನೀವು ಸಹ ತ್ರಿವಿಕ್ರಮ ಸಿನಿಮಾ ನೋಡಲು ತುಂಬಾ ಕಾತುರರಾಗಿದ್ದಾರೆ ಇದೇ ತಿಂಗಳು 24 ನೇ ತಾರೀಖಿನಂದು ಸಿನಿಮಾ ಭರ್ಜರಿಯಾಗಿ ರಾಜ್ಯಾದ್ಯಂತ ತೆರೆಕಾಣುತ್ತಿದೆ. ಚಿತ್ರಮಂದಿರಕ್ಕೆ ಹೋಗಿ ನೋಡಿ. ಹಾಗೆ ಹೊಸಬರಿಗೆ ಪ್ರೋತ್ಸಾಹ ನೀಡಿ. ಈ ನೃತ್ಯದ ರವಿಚಂದ್ರನ್ ಅವರ ವಿಡಿಯೋ ಇಷ್ಟವಾದಲ್ಲಿ ಶೇರ್ ಮಾಡಿ ಮಾಹಿತಿ ಬಗ್ಗೆ ಅಭಿಪ್ರಾಯ ತಿಳಿಸಿ ಧನ್ಯವಾದಗಳು...( video credit : zee kannada )

 
 
 
 
 
 
 
 
 
 
 
 
 
 
 

A post shared by Zee Kannada (@zeekannada)