Ravichandran : ರಚಿತಾ ರಾಮ್ ಜೊತೆ ಪ್ರೇಮಲೋಕದಿಂದ ಬಂದ ಪಾರಿಜಾತ ಎಂದು ಕೊಳಲು ನುಡಿಸಿದ ರೊಮ್ಯಾಂಟಿಕ್ ಹೀರೋ

By Infoflick Correspondent

Updated:Thursday, May 12, 2022, 12:49[IST]

Ravichandran :  ರಚಿತಾ ರಾಮ್ ಜೊತೆ   ಪ್ರೇಮಲೋಕದಿಂದ ಬಂದ ಪಾರಿಜಾತ ಎಂದು ಕೊಳಲು ನುಡಿಸಿದ ರೊಮ್ಯಾಂಟಿಕ್ ಹೀರೋ

ಟಾಪ್ ಮೋಸ್ಟ್ ಲಿಸ್ಟ್ ನಲ್ಲಿರುವ ಎಂಟರ್ ಟೈನ್ಮೆಂಟ್ ಚಾನೆಲ್ ಎಂದರೆ ಅದು ಜೀ ಕನ್ನಡ ವಾಹಿನಿ. ಜೀ ಕನ್ನಡದಲ್ಲಿ ಮೂಡಿ ಬರುವ ಪ್ರತಿಯೊಂದು ಧಾರಾವಾಹಿ ಹಾಗೂ ಕಾರ್ಯಕ್ರಮಗಳು ಕೂಡ ಲೀಡ್ ನಲ್ಲಿವೆ. ಪ್ರೇಕ್ಷಕರ ಮನಸ್ಸನ್ನು ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡಿರುವ ಜೀಕನ್ನಡ ವಾಹಿನಿ, ವೀಕ್ಷಕರ ಮನಸ್ಥಿತಿಗಳಿಗೆ ತಕ್ಕಂತೆ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತದೆ. ಜೀ ಕನ್ನಡದ ರಿಯಾಲಿಟಿ ಶೋಗಳೂ ಅಷ್ಟೇ ಚೆನ್ನಾಗಿ ಮೂಡಿ ಬರುತ್ತಿವೆ. ಸರಿಗಮಪ ಚಾಂಪಿಯನ್ ಸೀಸನ್ ಮುಗಿದ ಮೇಲೆ, ಇದೀಗ ಜೀ ಕನ್ನಡ ವಾಹಿಯಲ್ಲಿ ಡ್ರಾಮಾ ಜೂನಿಯರ್ಸ್ ಸೀಸನ್ 4 ಹಾಗೂ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಮೂಡಿ ಬರುತ್ತಿದೆ.  

ಡ್ರಾಮಾ ಜೂನಿಯರ್ಸ್ ಸೀಸನ್ 4ರಲ್ಲಿ ಪುಟಾಣಿಗಳು ಅದ್ಭುತವಾಗಿ ಅಭಿನಯಿಸುತ್ತಿದ್ದಾರೆ. ಸ್ಕಿಟ್ ಗಳು ತುಂಬಾ ಚೆನ್ನಾಗಿದ್ದು, ಮಕ್ಕಳ ಟ್ಯಾಲೆಂಟ್ ಕಂಡು ಜಡ್ಜಸ್ ಗಳು ಫಿದಾ ಆಗಿದ್ದಾರೆ. ಆನಿವಾರ ಭಾನುವಾರ ಬಮದರೆ ಡ್ರಾಮಾ ಜೂನಿಯರ್ಸ್ ನೋಡಲು ಪ್ರೇಕ್ಷಕರು ಕಾಯುತ್ತಿರುತ್ತಾರೆ. ಡ್ರಾಮಾ ಜೂನಿಯರ್ಸ್ ಪ್ರತೀ ಸೀಸನ್ ನಲ್ಲೂ ಸಕ್ಸಸ್ ಕಾಣುತ್ತಿದೆ. ಜನಪ್ರಿಯತೆ ಪಡೆದಿರುವ ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಪುಟಾಣಿಗಳು ಕರ್ನಾಟಕದ ಮೂಲೆ ಮೂಲೆಗಳಿಂದಲೂ ಬರುತ್ತಾರೆ.    

ಮಾಸ್ಟರ್ ಆನಂದ್ ಕಾರ್ಯಕ್ರಮದ ನಿರೂಪಣೆಯನ್ನು ಮಾಡುತ್ತಿದ್ದಾರೆ. ಹಿರಿಯ ನಟಿ ಲಕ್ಷ್ಮೀ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ನಟಿ ರಚಿತಾ ರಾಮ್ ಡ್ರಾಮಾ ಜೂನಿಯರ್ಸ್ನ ಜಡ್ಜ್ ಗಳಾಗಿದ್ದಾರೆ. ಪುಟಾಣಿಗಳು ವೇದಿಕೆ ಮೇಲೆ ಬಂದು ತಮ್ಮ ತಮ್ಮ ಪ್ರತಿಭೆಗಳನ್ನು ತೋರಿಸುತ್ತಿದ್ದಾರೆ. ರವಿಚಂದ್ರನ್ ಹಾಗೂ ರಚಿತಾ ರಾಮ್ ವೇದಿಕೆ ಮೇಲೆ ಕಮಾಲ್ ಮಾಡಿದ್ದಾರೆ. ಪ್ರೇಮಲೋಕದ ಪಾರಿಜಾತವೇ ಹಾಡಿಗೆ ಕ್ರೇಜಿ ಸ್ಟಾರ್, ರೊಮ್ಯಾಂಟಿಕ್ ಹೀರೋ ರವಿಚಂದ್ರನ್ ಕೊಲನ್ನು ನುಡಿಸಿದ್ದಾರೆ. ನಂತರ ರಚಿತಾ ರಾಮ್ ಹಾಗೂ ರವಿಚಂದ್ರನ್ ಡ್ಯಾನ್ಸ್ ಮಾಡಿ ರಂಜಿಸಿದ್ದಾರೆ. ಈ ವೀಡಿಯೋ ಇದೀಗ ವೈರಲ್ ಆಗಿದೆ.

 
 
 
 
 
 
 
 
 
 
 
 
 
 
 

A post shared by Zee Kannada (@zeekannada)