ರೋಮ್ಯಾಂಟಿಕ್ ಆದ ರವಿಚಂದ್ರನ್ ಹಾಗೂ ಶ್ವೇತಾ ಚೆಂಗಪ್ಪ ವಿಡೀಯೋ ನೋಡಿ ಬೆರಗಾದ ಜಡ್ಜಸ್..!

By Infoflick Correspondent

Updated:Sunday, July 24, 2022, 09:39[IST]

ರೋಮ್ಯಾಂಟಿಕ್ ಆದ ರವಿಚಂದ್ರನ್ ಹಾಗೂ ಶ್ವೇತಾ ಚೆಂಗಪ್ಪ ವಿಡೀಯೋ ನೋಡಿ ಬೆರಗಾದ ಜಡ್ಜಸ್..!

ಮಹಾಸಂಗಮ ಕಾರ್ಯಕ್ರಮ ಆಗಾಗ ಕನ್ನಡದಲ್ಲಿ ಹೆಚ್ಚು ನಡೆಯುತ್ತಲೇ ಇರುತ್ತವೆ. ಕನ್ನಡದ ಕಿರುತೆರೆಯಲ್ಲಿ ಹೆಚ್ಚು ರಿಯಾಲಿಟಿ ಶೋಗಳು ಈಗಾಗಲೆ ವಾರಾಂತ್ಯಕ್ಕೆ ವೀಕ್ಷಕರ ಮನ ಗೆಲ್ಲುತ್ತಿವೆ ಎನ್ನಬಹುದು. ಆ ನಿಟ್ಟಿನಲ್ಲಿ ಕೆಲ ಚಾನೆಲ್ ಗಳು ಯಾವಾಗ್ಲೂ ಮುಂದಿರುತ್ತವೆ. ವಿಭಿನ್ನ ಪ್ರಯತ್ನದ ಮೂಲಕ ಪ್ರೇಕ್ಷಕರನ್ನು ಸೆಳೆಯುತ್ತಲೆ ಇರುತ್ತವೆ. ಈ ಕಲರ್ಸ್ ಕನ್ನಡ ಹಾಗೂ ಝೀ ಕನ್ನಡ ಎಷ್ಟರ ಮಟ್ಟಿಗೆ ಈಗಾಗ್ಲೇ ಸಕತ್ ಟಿ ಆರ್ ಪಿ ಗಳಿಸುತ್ತ ಯಶಸ್ವಿಯಾಗಿ ಮುನ್ನುಗ್ಗಿವೆ ಎಂದರೆ ಕನ್ನಡದಲ್ಲಿ ಯಾವಾಗಲೂ ಟಾಪ್ ನಲ್ಲಿಯೇ ಇರುತ್ತವೆ. ಹಾಗೆ ಸಾಕಷ್ಟು ಕಲಾವಿದರ ಜೀವನವನ್ನು ಸಹ ಬದಲಾವಣೆ ಮಾಡಿವೆ ಅವರಿಗೆ ಹೆಚ್ಚು ಹೆಸರು ಕೊಡಿಸಿವೆ ಎಂದು ಹೇಳಬಹುದು.   

ಹೌದು ಝೀ ಕನ್ನಡದಲ್ಲಿ ಡ್ರಾಮಾ ಜ್ಯೂನಿಯರ್ಸ್ ಸೀಸನ್ 4 ಇದೀಗ ಪ್ರಸಾರ ಆಗುತ್ತಿದ್ದು ಹೆಚ್ಚು ಜನಪ್ರಿಯತೆ ಪಡೆದ ಷೋ. ಎಲ್ಲಾ ಮಕ್ಕಳ ಅಭಿನಯ ನೋಡುವಂತಿರುತ್ತದೆ. ಈ ಷೋ ಮೂಲಕವೇ ಸಾಕಷ್ಟು ಪ್ರತಿಭೆಗಳು ಸಹ ಹೊರಗಡೆಗೆ ಬರುತ್ತಿರುವುದು ಖುಷಿಯ ಸಂಗತಿ ಎನ್ನಬಹುದು. ಹಾಗೇನೇ ಇನ್ನೊಂದು ಕಡೆ ಜೋಡಿ ನಂಬರ್ ಒನ್ ಆರಂಭ ಆಗಿದ್ದು ಅದು ಕೂಡ ಹೆಚ್ಚು ಮನರಂಜನೆ ನೀಡುತ್ತಿದೆ ಎನ್ನಬಹುದು. ಇವೆರಡು ಇದೀಗ ಈ ವಾರ ಮಹಾಸಂಗಮ ಆಗಿ ಕಿರುತೆರೆ ಮೇಲೆ ಪ್ರಸಾರ ಆಗಲು ಸಜ್ಜಾಗಿದ್ದು ಈ ಎರಡು ಷೋವಿನ ವೀಕ್ಷಕರು ಕಾತುರದಿಂದ ಎಪಿಸೋಡ್ ನೋಡಲು ಹೆಚ್ಚು ಕಾತುರರಾಗಿದ್ದಾರೆ. 

ಹೌದು ಡ್ರಾಮಾ ಜ್ಯೂನಿಯರ್ಸ್ ನ ಎಲ್ಲಾ ಸ್ಪರ್ದಿಗಳು ಜೊತೆಗೆ ಜಡ್ಜಸ್ ಗಳು ಹಾಗೂ ಜೋಡಿ ನಂಬರ್ ಒನ್ ಕಾರ್ಯಕ್ರಮದ ಜಡ್ಜಸ್ ಹಾಗೂ ಸ್ಪರ್ಧಿಗಳು ಒಟ್ಟಿಗೆ ಈ ವಾರ ಮಹಾಸಂಗಮ ವೇದಿಕೆಯಲ್ಲಿ ಸೇರಲಿವೆ. ಅದರ ವಿಡಿಯೋ ಪ್ರೊಮೋ ಇದೀಗ ಬಂದಿದ್ದು, ಇದರಲಿ ನಟ ರವಿಚಂದ್ರನ್ ಅವರ ಜೊತೆಗೆ ನಿರೂಪಕಿಯಾಗಿ ಹೆಚ್ಚು ಗುರುತಿಸಿಕೊಂಡಿರುವ ನಟಿ ಶ್ವೇತಾ ಚೆಂಗಪ್ಪ ರವಿಚಂದ್ರನ್ ಅವರ ಅಭಿನಯದ್ದೆ ಆದ ರವಿ ಬೋಪಣ್ಣ ಸಿನಿಮಾದ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ಶರೀರ ಯಾಕೋ ಎನ್ನುತ್ತಾ ರವಿ ಸಾರ್ ಜೊತೆ ಶ್ವೇತಾ ಹೆಜ್ಜೆ ಹಾಕಿರುವ ಸಕತ್ ಹಾಡು ಇದೀಗ ವೈರಲ್ ಆಗುತ್ತಿದೆ. ಇವರಿಬ್ಬರ ರೋಮ್ಯಾನ್ಸ್ ನ ಈ ವಿಡೀಯೋ ನೋಡಿ ನೆಟ್ಟಿಗರು ಸಹ ಫಿದಾ ಆಗಿದ್ದಾರೆ. ಹೌದು ನೀವು ಸಹ ಇವರಿಬ್ಬರ ಈ ರೋಮ್ಯಾಂಟಿಕ್ ಹಾಡಿನ ವಿಡಿಯೋ ನೋಡಿ ಇಷ್ಟ ಆದ್ರೆ ಶೇರ್ ಮಾಡಿ....

 
 
 
 
 
 
 
 
 
 
 
 
 
 
 

A post shared by Zee Kannada (@zeekannada)