ಪ್ರೇಮಲೋಕದ ನಾಯಕನಿಗೆ ಗೌರವ ಡಾಕ್ಟರೇಟ್ :ಪ್ರತಿಭೆಗೆ ಸಂದ ಗೌರವ

By Infoflick Correspondent

Updated:Sunday, April 10, 2022, 19:42[IST]

ಪ್ರೇಮಲೋಕದ ನಾಯಕನಿಗೆ ಗೌರವ ಡಾಕ್ಟರೇಟ್ :ಪ್ರತಿಭೆಗೆ ಸಂದ ಗೌರವ

    

ಪ್ರೇಮಲೋಕದ ಒಡೆಯ ಎಲ್ಲರ ಪ್ರೀತಿಯ ರವಿಮಾಮ ಎಂದೇ ಪ್ರಸಿದ್ಧರಾದ ಕನಸುಗಾರ ಜನರ ನೆಚ್ಚಿನ ಕ್ರೇಜಿಸ್ಟಾರ್ ರವಿಚಂದ್ರ ಅವರ ಮುಡಿಗೆ  ಗೌರವ ಡಾಕ್ಟರೇಟ್ ದೊರೆತಿದೆ. ಇನ್ನು ರವಿಚಂದ್ರನ್ ಡಾ.ರವಿಚಂದ್ರನ್ ಆಗಲಿದ್ದಾರೆ. 

ಬೆಂಗಳೂರು ನಗರ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವದಲ್ಲಿ‌ ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಸೇರಿ ಮೂವರಿಗೆ ಗೌರವ ಡಾಕ್ಟರೇಟ್ ಘೋಷಿಸಲಾಗಿದೆ. ಕ್ರೇಜಿಸ್ಟಾರ್​ ರವಿಚಂದ್ರನ್​ ಆವರಿಗೆ ಕನ್ನಡ ಚಿತ್ರರಂಗದಲ್ಲಿ ಮಾಡಿರುವ ಸಾಧನೆಯನ್ನು ಗುರುತಿಸಿ ಬೆಂಗಳೂರು ನಗರ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ಘೋಷಣೆ ಮಾಡಿದೆ 

ಬೆಂಗಳೂರು ನಗರ ವಿವಿಯ ಮೊದಲ ವರ್ಷದ ಘಟಿಕೋತ್ಸವ ಏಪ್ರಿಲ್ 11 ರಂದು ನಡೆಯಲಿದ್ದು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಭಾಗವಹಿಸಲಿದ್ದಾರೆ. ಘಟಿಕೋತ್ಸವದ ಕಾರ್ಯಕ್ರಮವನ್ನ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಆಡಿಟೋರಿಯಂ ನಲ್ಲಿ ನಡೆಯಲಿದೆ. 

ಸಿನಿಮಾ ಕ್ಷೇತ್ರ ಮತ್ತು ರಂಗಭೂಮಿಯಲ್ಲಿ ಡಾ. ರವಿಚಂದ್ರನ್, ಸಮಾಜ ಸೇವೆಗಾಗಿ ಎಂ. ಆರ್. ಜೈಶಂಕರ್ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಡಾ. ಸತ್ಯನಾರಾಯಣ ಅವರಿಗೆ ಡಾಕ್ಟರೇಟ್ ಪ್ರಶಸ್ತಿ ನೀಡಲಾಗುತ್ತಿದೆ.