Ravichandran : ಅಂದು ರವಿಚಂದ್ರನ್ ಚಿರಂಜೀವಿಗೆ ಕೊಟ್ಟ ಗಿಫ್ಟ್ ನ ಬೆಲೆ ಇಂದು 300 ಕೋಟಿಯಂತೆ..! ಅದೇನು ಗೊತ್ತಾ

By Infoflick Correspondent

Updated:Saturday, May 7, 2022, 14:13[IST]

Ravichandran : ಅಂದು ರವಿಚಂದ್ರನ್ ಚಿರಂಜೀವಿಗೆ ಕೊಟ್ಟ ಗಿಫ್ಟ್ ನ ಬೆಲೆ ಇಂದು 300 ಕೋಟಿಯಂತೆ..! ಅದೇನು ಗೊತ್ತಾ

ಹೌದು ಬಂಧುಗಳೇ ನಮ್ಮ ಕನ್ನಡ ಸಿನಿಮಾರಂಗದಲ್ಲಿ ನಟ ರವಿಚಂದ್ರನ್ ಅವರ ಬಗ್ಗೆ ನಾವು ಹೆಚ್ಚು ಹೇಳಬೇಕಾಗಿಲ್ಲ. ಅವರ ಒಳ್ಳೆಯತನ ಅವರ ಸಹಾಯ ಮಾಡುವ ಮನಸ್ಥಿತಿ ಹಾಗೆ ಮಾತಿನ ಮೇಲೆ ನಿಲ್ಲುವ ಚತುರತೆ ಅವರಿಗೆ ಹೆಚ್ಚು ಇದೆ ಎನ್ನಬಹುದು. ಮಾತಿನ ಮೇಲೆ ನಿಲ್ಲುವುದು ಜೊತೆಗೆ ನಿಷ್ಠೆಯಿಂದ ಬದುಕಿದರೆ ಜೀವನ ಸಾರ್ಥಕ ಎಂದು ಅವರು ಹೆಚ್ಚಾಗಿಯೇ ನಂಬಿದ್ದಾರೆ. ನಟ ರವಿಚಂದ್ರನ್ ಅವರು ಸುಮಾರು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಅಭಿನಯ ಮಾಡುತ್ತಾ ಇಂದಿಗೂ ಕೂಡ ಕ್ರೇಜಿಸ್ಟಾರ್ ಆಗಿಯೇ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. 90ರ ದಶಕದಲ್ಲಿ ನಟ ರವಿಚಂದ್ರನ್ ಅವರ ನಿರ್ಮಾಣದಲ್ಲಿಯೂ ನಿರ್ದೇಶನದಲ್ಲಿಯೂ ಹಾಗೆ ನಟನೆಯಲ್ಲಿ ಎಲ್ಲದರಲ್ಲಿಯೂ ಕೂಡ ಸೈ ಎನಿಸಿಕೊಂಡಿದ್ದರು.

ನಿರ್ಮಾಣ ಮಾಡಿ ಕೆಲವು ಸಿನಿಮಾಗಳಿಂದ ದೊಡ್ಡ ಹೊಡೆತ ತಿಂದರೂ ಕೂಡ ಸಿನಿಮಾದ ಮೇಲಿನ ಆಸಕ್ತಿ ರವಿಚಂದ್ರನ್ ಅವರಿಗೆ ಎಳ್ಳಷ್ಟು ಕಡಿಮೆಯಾಗಿರಲಿಲ್ಲ. ನಟ ರವಿಚಂದ್ರನ್ ಅವರು ಫ್ಯಾಷನ್ ಗಾಗಿ ಸಿನಿಮಾ ಮಾಡುತ್ತಿದ್ದರು. ಅವರಿಗೆ ಸರಿಯೆನಿಸಲಿಲ್ಲ ಎನ್ನುವ ಚಿತ್ರದ ಶೂಟಿಂಗ್ ಅನ್ನು ಮರಳಿ ಮರಳಿ ಮಾಡಿ ಅದು ಸರಿ ಆಗುವವರೆಗೂ ಮಾಡುತ್ತಿದ್ದರು. ಅದಕ್ಕೆ ರವಿ ಸಾರ್ ಅನ್ನು ಕ್ರೇಜಿ ಎನ್ನುವುದು. ರವಿಚಂದ್ರನ್ ಅವರು ಮತ್ತು ಚಿರಂಜೀವಿ ಸಿಪಾಯಿ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ. ಚಿರಂಜೀವಿ ಅವರು ರವಿಚಂದ್ರನ್ ಅವರು ಕೇಳಿದ ತಕ್ಷಣವೇ ನೀವು ಯಾವಾಗ ಕರೆದರೂ ನಾನು ಬರುತ್ತೇನೆ ಎಂದು ಚಿರಂಜೀವಿ ಅವರು ಸಿಪಾಯಿ ಸಿನಿಮಾ ಶೂಟಿಂಗ್ ಮುಗಿಸಿಕೊಂಡು ಹೋಗಿದ್ದರಂತೆ.   

ಚಿರಂಜೀವಿ ಅವರ ಸಂಭಾವನೆ ವಿಚಾರವಾಗಿ ರವಿಚಂದ್ರನ್  ಚಿರಂಜೀವಿ ಮ್ಯಾನೇಜರ್ ಬಳಿ ಮಾತನಾಡಿದಾಗ ಅವರು ಸ್ನೇಹಕ್ಕಾಗಿ ಸಿನಿಮಾ ಮಾಡಿದ್ದೇನೆ, ಕನ್ನಡಿಗರ ಪ್ರೀತಿಗೆ ನಾನು ಚಿರಋಣಿ ನನ್ನ ರವಿಚಂದ್ರನ್ ಸ್ನೇಹ ಹಾಗೆ ಇರಲಿ ನಾನು ಒಂದು ರೂಪಾಯಿ ಕೂಡ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದರಂತೆ. ಬಳಿಕ ನಟ ರವಿಚಂದ್ರನ್ ಮ್ಯಾನೇಜರ್ ಬಳಿ ಮಾತನಾಡಿ ಅಂದಿನ ಕಾಲದಲ್ಲಿ ಚಿರಂಜೀವಿಯ ಸಂಭಾವನೆ ಎಷ್ಟಿತ್ತು ಎಂದು ಚರ್ಚೆ ಮಾಡಿದ್ದಾರೆ. ಬಳಿಕ 30ರಿಂದ 35 ಲಕ್ಷ ಇತ್ತು ಎಂದು ಅರಿತಿದ್ದಾರೆ. ಬಳಿಕ ನಟ ರವಿಚಂದ್ರನ್ ಅವರು ಹಣ ಕೊಡದೆ ಚಿರಂಜೀವಿ ಅವರಿಗೆ ಒಂದು ಗಿಫ್ಟ್ ಅನ್ನು ನೀಡಿ ಪೇಪರ್ ನಲ್ಲಿ ಕೊಟ್ಟಿದ್ದರಂತೆ. ಅದರಲ್ಲಿ ಸುಮಾರು 15 ರಿಂದ 20 ಎಕರೆ ಜಮೀನಿನ ಮಾಹಿತಿ ಇದ್ದು ಉಡುಗೊರೆ ನೀಡಿದ್ದರು ಎನ್ನಲಾಗಿದೆ.

ಇಂದು ನಟ ಚಿರಂಜೀವಿ ಅವರ ಫಾರ್ಮ್ ಹೌಸ್ ಇರುವ ಜಾಗವೇ ರವಿಚಂದ್ರನ್ ಅವರು ಅಂದು ಸಿಪಾಯಿ ಸಮಯದಲ್ಲಿ ನೀಡಿರುವ ಗಿಫ್ಟ್ ಎಂದು ಹೇಳಲಾಗುತ್ತಿದೆ. ಇದೀಗ ಅದರ ಬೆಲೆ 250 ರಿಂದ 300 ಕೋಟಿಯಂತೆ. ಹೌದು ರವಿಚಂದ್ರನ್ ಅವರು ಈಶ್ವರಿ ಸಂಸ್ಥೆ ಅಡಿಯಲ್ಲಿ ನಟನೆ ಮಾಡಿದವರಿಗೆ ಯಾರನ್ನೂ ಕೂಡ ಬರಿಗೈಯ್ಯಲ್ಲಿ ಕಳುಸುತ್ತಿರಲಿಲ್ಲ ಎಂದು ಈ ಮೂಲಕ  ಸಾಕ್ಷಿಯಾಗಿದೆ ಎಂದು ಹೇಳಬಹುದು. ಚಿರಂಜೀವಿ ಅವರಿಗೆ ನೀಡಿರುವ ಗಿಫ್ಟ್ ಜಾಗದ ಸುದ್ದಿ ಹೊರಬಿದ್ದಿದೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ವಿವರಿಸಿ ತಪ್ಪದೇ ಮಾಹಿತಿಯನ್ನು ಶೇರ್ ಮಾಡಿ, ಧನ್ಯವಾದಗಳು....