Ravichandran ; ರವಿಚಂದ್ರನ್ ಅವರ ಈಶ್ವರಿ ಸಂಸ್ಥೆ ಆಫೀಸ್ ಅಸಲಿಗೆ ಯಾಕೆ ಮಾರಾಟವಾಯ್ತು ಗೊತ್ತಾ..? ಈಗ ಎಲ್ಲಾ ಬಯಲು

By Infoflick Correspondent

Updated:Sunday, May 29, 2022, 15:53[IST]

Ravichandran ;   ರವಿಚಂದ್ರನ್ ಅವರ ಈಶ್ವರಿ ಸಂಸ್ಥೆ ಆಫೀಸ್    ಅಸಲಿಗೆ ಯಾಕೆ ಮಾರಾಟವಾಯ್ತು ಗೊತ್ತಾ..? ಈಗ ಎಲ್ಲಾ ಬಯಲು

ನಟ ರವಿಚಂದ್ರನ್ ಅವರು ಪ್ರೇಮಲೋಕದ ಸರದಾರ ಕ್ರೇಜಿಸ್ಟಾರ್ ಎಂಬುದಾಗಿ ಬಿರುದು ಪಡೆದಿದ್ದಾರೆ. ಹೌದು ಸಿನಿಮಾರಂಗದಲ್ಲಿ ಒಬ್ಬ ನಟ ನಟನೆ ಮಾಡುತ್ತಾ ಇದ್ದಾನೆ ಎಂದರೆ ಅವನಿಗೆ ಏನು ಕಡಿಮೆ ಎನ್ನುವ ಮಾತುಗಳು ಎಲ್ಲಾ ಕಡೆ ಹೆಚ್ಚು ಕೇಳಿಬರುತ್ತವೆ. ಈ ಸಿನಿಮಾರಂಗದಲ್ಲಿ ಅವರು ಪಡುವ ಕಷ್ಟ ಅವರಿಗೆ ಮಾತ್ರ ಗೊತ್ತಿರುತ್ತದೆ. ಎಲ್ಲಾ ನಟರು ಹಾಗೆ ಎಂದು ಹೇಳಲಿಕ್ಕಾಗದು. ಕೆಲ ನಟರು ಯಶಸ್ವಿಯಾಗಿ ಸಿನಿಮಾರಂಗದಲ್ಲಿ ನೆಲೆಯೂರಿ ಐಷಾರಾಮಿ ಜೀವನವನ್ನ ಮಾಡುತ್ತಿದ್ದಾರೆ. ಆದರೆ ಕ್ರೇಜಿಸ್ಟಾರ್ ನಟ ರವಿಚಂದ್ರನ್ ಅವರು ಸುಮಾರು ವರ್ಷಗಳಿಂದ ಸಿನಿಮಾಗಾಗಿ ತುಂಬಾ ದುಡ್ಡನ್ನು ಕಳೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಹೌದು ನಟ ರವಿಚಂದ್ರನ್ ಅವರ ಶಾಂತಿಕ್ರಾಂತಿ ಸಿನಿಮಾ ಅಂದಿನ ಕಾಲದಲ್ಲೆ ಸುಮಾರು ಆರು ಕೋಟಿ ಖರ್ಚು ಮಾಡಲಾಗಿತ್ತು ಎನ್ನಲಾಗಿದೆ. ಆದ್ರೆ ಈ ಶಾಂತಿ ಕ್ರಾಂತಿ ಸಿನಿಮಾ ಮಕಾಡೆ ಮಲಗಿದ್ದು ಎಲ್ಲರಿಗೂ ಗೊತ್ತು.

ಶಾಂತಿ ಕ್ರಾಂತಿ ಸಿನಿಮಾಗಾಗಿ ಐದು ಭಾಷೆಯಲ್ಲಿ ಸಿನಿಮಾ ರೆಡಿಯಾಗಿತ್ತು. ತದನಂತರ ಅದಕ್ಕಾಗಿ ನಟ ರವಿಚಂದ್ರನ್ ಸಾಕಷ್ಟು ಸಾಲ ಮಾಡಿಕೊಂಡಿದ್ದರು. ಆದರೆ ಸಿನಿಮಾ ಯಶಸ್ವಿಯಾಗಲಿಲ್ಲ. ಬಳಿಕ ರವಿಚಂದ್ರನ್ ಅವರ ತಂದೆಯ ಈಶ್ವರಿ ಸಂಸ್ಥೆಯಿಂದ ಯಾರಿಗೂ ಕೂಡ ಒಂದು ರೂಪಾಯಿ ಬಂದಿಲ್ಲ ಎನ್ನುವ ಮಾತು ಹೋಗಬಾರದು ಎಂಬುದಕ್ಕೆ ಅವರ ತಂದೆಯವರಿಂದ ಈಶ್ವರಿ ಸಂಸ್ಥೆಯನ್ನು ಹಾಗೂ ಆ ಜಾಗವನ್ನು ಮಾರಾಟ ಮಾಡಲಾಗಿತ್ತು. ಗಾಂಧಿನಗರದಲ್ಲಿ  ವಜ್ರೇಶ್ವರಿ ಕಂಬೈನ್ಸ್ ಎದುರಿಗಿರುವ ಒಂದು ಸಂಸ್ಥೆಯೆ ಈ ಈಶ್ವರಿ ಸಂಸ್ಥೆ ಎಂದು ಹೇಳಲಾಗುತ್ತಿದೆ. ನಂತರ ಏಕಾಂಗಿ ಸಿನಿಮಾ ಮಾಡಿ ಅಲ್ಲಿಯೂ ಕೂಡ ನಟ ರವಿಚಂದ್ರನ್ ಅವರು ಸೋಲನ್ನು ಅನುಭವಿಸುತ್ತಾರೆ. 

ನಟ ರವಿಚಂದ್ರನ್ ಏಕಾಂಗಿ ಸಿನಿಮಾ ಚೆನ್ನಾಗಿದ್ದರೂ ಸಹ ಸಿನಿಮಾ ಗೆಲ್ಲುವುದಿಲ್ಲ. ಈ ಸಾಲವನ್ನು ತೀರಿಸಲು ಅವರ ತಾಯಿಯ ಅವರ ಬಳಿ ಇದ್ದ ದೊಡ್ಡ 2 ಜಾಗಗಳ ಕಾಂಪ್ಲೆಕ್ಸ್ ಕೂಡ ಮಾರಲಾಗುತ್ತದೆ. ತದನಂತರ ಮಂಜಿನಹನಿ ಮತ್ತು ಮಗನಿಗಾಗಿ ಪ್ರೇಮಲೋಕದಲ್ಲಿ ರಣಧೀರ ಈ ಎರಡು ಚಿತ್ರಕ್ಕೆ ನಟ ರವಿಚಂದ್ರನ್ ಅವರು 20 ಎಕರೆ ಜಮೀನನ್ನು ಕೂಡ ಮಾರುತ್ತಾರೆ. ಅದು ಅವರ ತಂಗಿಗೆ ಎನ್ನಲಾಗಿದೆ. ಬಳಿಕ ಅವರಿಂದ ಸ್ವಲ್ಪ ಹಣ ಪಡೆದಿದ್ದರಂತೆ. ಆದ್ರೆ ಇನ್ನೂ  ಈ 2 ಸಿನಿಮಾಗಳು ತೆರೆಗೆ ಬಂದಿಲ್ಲ. ಮುಂದೆ ಎನಾಯ್ತು ಗೊತ್ತಿಲ್ಲ. ಹೌದು ಹೆಸರಗಟ್ಟ ರಸ್ತೆಯಲ್ಲಿ ಇದೆ 15 ಎಕರೆಯ ಜಾಗದಲ್ಲಿ ಒಂದು ಶಾಲೆಯಾಗಿದ್ದು ಅವರ ತಂಗಿಯೇ ನೋಡಿಕೊಂಡು ಹೋಗುತ್ತಿದ್ದಾರಂತೆ..

ನಟ ರವಿಚಂದ್ರನ್ ತಂದೆ ವೀರಸ್ವಾಮಿ ಅವರ ಸ್ಮಾರಕ ಕೂಡ ಇದೇ ಜಾಗದಲ್ಲಿದ್ದು, ಹೀಗೆ ಸಾಕಷ್ಟು ಕೋಟಿ ಕೋಟಿ ಹಣವನ್ನು ನಟ ರವಿಚಂದ್ರನ್ ಅವರು ಸಿನಿಮಾಕ್ಕಾಗಿ ಕಳೆದುಕೊಂಡಿದ್ದಾರೆ. ಕಾರಣವೊಂದೆ ಸಿನಿಮಾ ಚೆನ್ನಾಗಿ ಬರಬೇಕು, ದುಡ್ಡು ಎಷ್ಟು ಹೋಯಿತು ಎಂಬುದಾಗಿ ನನಗೆ ಲೆಕ್ಕಕ್ಕೆ ಬೇಡ ಎನ್ನುತ್ತಾರೆ ನಟ ರವಿಚಂದ್ರನ್. ಇದೀಗ ರವಿ ಬೋಪಣ್ಣ ಸಿನಿಮಾ ಮೂಲಕ ಮತ್ತೆ ರವಿಚಂದ್ರನ್ ಅವರು ನಿರ್ದೇಶನಕ್ಕೆ ಕೈಹಾಕಿದ್ದಾರೆ. ಈಗ ಸ್ವಲ್ಪ ಸುಧಾರಿಸಿದ್ದಾರೆ ರವಿಚಂದ್ರನ್ ಎಂದು ಹೇಳಲಾಗುತ್ತಿದೆ. ಮತ್ತೆ ರವಿಚಂದ್ರನ್ ಅವರು ಕಂಬ್ಯಾಕ್ ಮಾಡಲಿ ಎಂದು ಶುಭ ಹಾರೈಸಿ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು..