ದರ್ಶನ ಜೊತೆ ಒಂದಾದ ಕ್ರೇಜಿಸ್ಟಾರ್ ರವಿಚಂದ್ರನ್! ಹೆಚ್ಚಾದ "ಕ್ರಾಂತಿ"ಯ ಕಳೆ

By Infoflick Correspondent

Updated:Monday, May 16, 2022, 11:44[IST]

ದರ್ಶನ ಜೊತೆ ಒಂದಾದ ಕ್ರೇಜಿಸ್ಟಾರ್ ರವಿಚಂದ್ರನ್! ಹೆಚ್ಚಾದ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೈಗೆತ್ತಿಕೊಂಡಿರುವ ಚಿತ್ರ 'ಕ್ರಾಂತಿ'. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ 'ಕ್ರಾಂತಿ' ಶೂಟಿಂಗ್ ಕೊನೆಯ ಹಂತಕ್ಕೆ ಬಂದು ತಲುಪಿದೆ.'ಯಜಮಾನ' ಚಿತ್ರದ ನಿರ್ಮಾಪಕಿ ಶೈಲಾಜ ನಾಗ್ 'ಕ್ರಾಂತಿ' ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇದು ದರ್ಶನ್ ಅವರ 55ನೇ ಸಿನಿಮಾ ಎನ್ನುವುದು ವಿಶೇಷ.   

ಈಗಾಗಲೇ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದ್ದು, ದೊಡ್ಡ ಮಟ್ಟದಲ್ಲಿ ಟ್ರೆಂಡ್ ಹುಟ್ಟು ಹಾಕಿದೆ. ದರ್ಶನ್‌ ಅವರು ಈ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕ್ರಾಂತಿ ಸಿನಿಮಾದಲ್ಲಿ ಹಲವು ಹೆಸರಾಂತ ಕಲಾವಿದರು ಅಭಿನಯಿಸುತ್ತಾ ಇದ್ದಾರೆ. ಕ್ರಾಂತಿ ಸಿನಿಮಾ ದೊಡ್ಡ ಮಟ್ಟದಲ್ಲಿ ತಯಾರಾಗುತ್ತಿದೆ. ದೊಡ್ಡ ದೊಡ್ಡ ಕಲಾವಿದರು ಚಿತ್ರದಲ್ಲಿ ಇದ್ದಾರೆ. . ಈ ಸಿನಿಮಾವನ್ನು ವಿ. ಹರಿಕೃಷ್ಣ ನಿರ್ದೇಶಿಸುತ್ತಿದ್ದು, ರಚಿತಾ ರಾಂ ದರ್ಶನ್ ಗೆ ನಾಯಕಿಯಾಗಿದ್ದಾರೆ. ಅಭಿರಾಮಿ ಕ್ರಾಂತಿ ಚಿತ್ರದ ಬಳಗ ಸೇರಿದ್ದಾರೆ. ಪ್ರಮುಖ ಪಾತ್ರದಲ್ಲಿ ಅಭಿರಾಮಿ ನಟಿಸುತ್ತಿದ್ದಾರೆ.

 ಬೆಂಗಳೂರಿನ ಹೊರಾವರಣದಲ್ಲಿ ವಿಶೇಷ ಸೆಟ್ ನಲ್ಲಿ ಕ್ರಾಂತಿ ಶೂಟಿಂಗ್ ಭರದಿಂದ ಸಾಗುತ್ತಿದೆ. ಶೂಟಿಂಗ್ ನಲ್ಲಿ ರವಿಚಂದ್ರನ್ ಕೂಡಾ ಕೂಡಿಕೊಂಡಿದ್ದಾರೆ. 

 ಕ್ರೇಜಿ ಸ್ಟಾರ್ ರವಿಚಂದ್ರನ್ ಕ್ರಾಂತಿ ಸಿನಿಮಾ ಸೆಟ್‌ನಲ್ಲಿ ಕಾಣಿಸಿಕೊಂಡಿದ್ದ  ದರ್ಶನ್ ಮತ್ತು ರವಿಚಂದ್ರನ್ ಫೋಟೊ ಸದ್ಯ ಎಲ್ಲೆಡೆ ವೈರಲ್ ಆಗಿದೆ. ಕ್ರಾಂತಿ ಬಳಗ ಸೇರಿದ್ದಾರೆ ನಟ ರವಿಚಂದ್ರನ್. ಸೆಟ್‌ನಲ್ಲಿ ರವಿಚಂದ್ರನ್ ಮತ್ತು ದರ್ಶನ್ ಒಟ್ಟಿಗೆ ತೆಗೆಸಿಕೊಂಡಿರುವ ಫೋಟೊ ವೈರಲ್ ಆಗಿದೆ.  

ಫೋಟೋದಲ್ಲಿ ನಟ ರವಿಚಂದ್ರನ್ ಪಂಚೆ, ಶರ್ಟು ತೊಟ್ಟು, ಕೊರಳಲ್ಲಿ ರುದ್ರಾಕ್ಷಿ ಧರಿಸಿದ್ದಾರೆ. ಹಾಗಾಗಿ ಕ್ರಾಂತಿ ಚಿತ್ರದಲ್ಲಿ ದರ್ಶನ್ ಅವರ ಅಪ್ಪ ಅಥವಾ ಅಣ್ಣನ ಪಾತ್ರದಲ್ಲಿ ರವಿಚಂದ್ರನ್ ಅಭಿನಯಿಸಿರಬಹುದು. ಈ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ನೀಡಬೇಕಿದೆ.